ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 7ನೇ ಸಾವು, ಕತಾರ್‌ನಿಂದ ಬಂದ 38 ವರ್ಷದ ವ್ಯಕ್ತಿ

|
Google Oneindia Kannada News

ದೆಹಲಿ, ಮಾರ್ಚ್ 22: ಭಾರತದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 7ಕ್ಕೆ ಏರಿದೆ ಎಂಬ ಸುದ್ದಿ ವರದಿಯಾಗಿದೆ. 38 ವರ್ಷದ ವ್ಯಕ್ತಿ ಪಾಟ್ನಾದಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಈ ಮೂಲಕ ಒಂದೇ ದಿನದಲ್ಲಿ ಇಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಕತಾರ್‌ನಿಂದ ಭಾರತಕ್ಕೆ ಬಂದಿದ್ದ ಈ ವ್ಯಕ್ತಿ ಮೃತಪಟ್ಟಿದ್ದನು. ಈತನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಪಾಟ್ನಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಖಚಿತಪಡಿಸಿದೆ.

ಜನತಾ ಕರ್ಫ್ಯೂ: ಕರ್ನಾಟಕದ ಜಿಲ್ಲೆಗಳ ರಿಪೋರ್ಟ್...ಜನತಾ ಕರ್ಫ್ಯೂ: ಕರ್ನಾಟಕದ ಜಿಲ್ಲೆಗಳ ರಿಪೋರ್ಟ್...

ಈ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ ವ್ಯಕ್ತಿಗಳ ರಕ್ತದ ಮಾದರಿ ಸಂಗ್ರಹಿಸಿ ಅವರ ಮೇಲೆ ನಿಗಾವಹಿಸಲಾಗಿದೆ. ಇದಕ್ಕೂ ಮುಂಚೆ ಮುಂಬೈನಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದ. ಈ ಮೂಲಕ ಮಹಾರಾಷ್ಟ್ರದಲ್ಲಿ ಇದುವರೆಗೂ ಒಟ್ಟು ಎರಡು ಸಾವು ವರದಿಯಾಗಿದೆ.

7th Death Case Reported In India

ಕರ್ನಾಟಕದ ಕಲುಬುರ್ಗಿಯಲ್ಲಿ ಮೊದಲ ಸಾವು ವರದಿಯಾಗಿತ್ತು. ನಂತರ ದೆಹಲಿ, ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನದಲ್ಲಿ (ಜೈಪುರದಲ್ಲಿ ಇಟಲಿ ಮೂಲದ ವ್ಯಕ್ತಿ) ತಲಾ ಒಬ್ಬೊಬ್ಬರು ಸಾವನ್ನಪ್ಪಿದ್ದರು. ಇದೀಗ ಮುಂಬೈನಲ್ಲಿ ಮತ್ತೊಂದು ಹಾಗೂ ಪಾಟ್ನಾದಲ್ಲಿ ಒಬ್ಬ ಬಲಿಯಾಗಿದ್ದಾನೆ. ಈ ಮೂಲಕ ಒಟ್ಟು ಏಳು ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ದೇಶದ ಖಾಸಗಿ ಲ್ಯಾಬ್ ಗಳಲ್ಲಿ ಕೊರೊನಾ ವೈರಸ್ ತಪಾಸಣೆಗೆಷ್ಟು ಹಣ?ದೇಶದ ಖಾಸಗಿ ಲ್ಯಾಬ್ ಗಳಲ್ಲಿ ಕೊರೊನಾ ವೈರಸ್ ತಪಾಸಣೆಗೆಷ್ಟು ಹಣ?

ಇಂದು ಹೊಸದಾಗಿ ಮಹಾರಾಷ್ಟ್ರದಲ್ಲಿ 10 ಮಂದಿಗೆ (ಮುಂಬೈ 6, ಪುಣೆ 4 ) ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಭಾರತದಲ್ಲಿ ಇದುವರೆಗೂ ಕೊರೊನಾ ಸೋಂಕಿತರ ಸಂಖ್ಯೆ 341ಕ್ಕೆ ಏರಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಮಾಹಿತಿ ನೀಡಿದೆ.

English summary
Coronavirus Update: 7th death case reported in india, 38 year old man dies in patna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X