ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕಂಟೇನ್ಮೆಂಟ್ ಝೋನ್ ಗಳಿಗೆ ಕೌಂಟೇ ಇಲ್ಲ!

|
Google Oneindia Kannada News

ನವದೆಹಲಿ, ಜೂನ್.04: ಭಾರತದಲ್ಲಿ ನೊವೆಲ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ಕೊವಿಡ್-19 ಸೋಂಕಿತರ ಸಂಖ್ಯೆಯುಳ್ಳ ರಾಷ್ಟ್ರಗಳ ಪಟ್ಟಿಯಲ್ಲಿ ಭಾರರತವು 7ನೇ ಸ್ಥಾನಕ್ಕೇರಿದೆ.

Recommended Video

Lockdown Induced Obesity: How To Tackle It? | Oneindia Kannada

ಕೊರೊನಾ ವೈರಸ್ ಸೋಂಕಿನಿಂದಾಗಿ ದೆಹಲಿಯಲ್ಲಿ ಕಂಟೇನ್ಮೆಂಟ್ ಝೋನ್ ಗಳ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಗುರುವಾರ ಮತ್ತೆ ಐದು ಹೊಸ ಕಂಟೇನ್ಮೆಂಟ್ ಝೋನ್ ಗಳನ್ನು ಗುರುತಿಸಲಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಕಂಟೇನ್ಮೆಂಟ್ ಝೋನ್ ಗಳ ಸಂಖ್ಯೆ 163ಕ್ಕೆ ಏರಿಕೆಯಾಗಿದೆ.

ದೆಹಲಿಗೆ ಬಂದವರಿಗೆ 1 ವಾರ ಕಡ್ಡಾಯ ಹೋಂ ಕ್ವಾರಂಟೈನ್ ದೆಹಲಿಗೆ ಬಂದವರಿಗೆ 1 ವಾರ ಕಡ್ಡಾಯ ಹೋಂ ಕ್ವಾರಂಟೈನ್

ನವದೆಹಲಿಯ ದಕ್ಷಿಣ ಜಿಲ್ಲೆಯಗಳಲ್ಲಿ 31, ಪಶ್ಚಿಮ ಜಿಲ್ಲೆಗಳಲ್ಲಿ 31 ಹಾಗೂ ಉತ್ತರದ ಜಿಲ್ಲೆಗಳಲ್ಲಿ 31 ಕಂಟೇನ್ಮೆಂಟ್ ಝೋನ್ ಗಳನ್ನು ಗುರುತಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಈವರೆಗೂ 59 ಕಂಟೇನ್ಮೆಂಟ್ ಝೋನ್ ಗಳನ್ನು ರಿಲೀಸ್ ಮಾಡಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ 1,513 ಮಂದಿಗೆ ಕೊರೊನಾ ವೈರಸ್

ರಾಷ್ಟ್ರ ರಾಜಧಾನಿಯಲ್ಲಿ 1,513 ಮಂದಿಗೆ ಕೊರೊನಾ ವೈರಸ್

ಕಳೆದ 24 ಗಂಟೆಗಳಲ್ಲಿ ನವದೆಹಲಿಯಲ್ಲಿ 1,513 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವುದು ದೃಢಪಟ್ಟಿದೆ. ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 23,645ಕ್ಕೆ ಏರಿಕೆಯಾಗಿದ್ದು, ಇದುವರೆಗೂ 615 ಮಂದಿ ಮಹಾಮಾರಿಗೆ ಪ್ರಾಣ ಬಿಟ್ಟಿದ್ದಾರೆ. 9,542 ಸೋಂಕಿತರು ಗುಣಮುಖರಾಗಿದ್ದರೆ, ಬಾಕಿ ಉಳಿದ 13,488 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ನವದೆಹಲಿಯಲ್ಲಿ ಸೋಂಕಿತರ ಪ್ರಾಣ ಉಳಿಸುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅಗತ್ಯವಿರುವ ಸೋಂಕಿತರಿಗೆ ವೈದ್ಯಕೀಯ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ತಿಳಿಸಿದ್ದಾರೆ.

ಕೊರೊನಾ ವೈರಸ್ ಸೋಂಕಿತರಿಗೆ ಬೆಡ್ ಗಳ ಮೀಸಲಾತಿ

ಕೊರೊನಾ ವೈರಸ್ ಸೋಂಕಿತರಿಗೆ ಬೆಡ್ ಗಳ ಮೀಸಲಾತಿ

ನವದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಉಚಿತವಾಗಿ ಚಿಕಿತ್ಸೆ ನೀಡುವ ಬಗ್ಗೆ ತೀರ್ಮಾನಿಸಲಾಗಿದ್ದು, ಶೇ.20ರಷ್ಟು ಬೆಡ್ ಗಳನ್ನು ಮೀಸಲು ಇರಿಸಲಾಗಿದೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.

ಗುರುವಾರ 9,304 ಮಂದಿಗೆ ಕೊರೊನಾ ವೈರಸ್

ಗುರುವಾರ 9,304 ಮಂದಿಗೆ ಕೊರೊನಾ ವೈರಸ್

ಭಾರತದಲ್ಲಿ ಪ್ರತಿನಿತ್ಯ ಸಾವಿರಾರು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಗುರುವಾರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನೀಡಿದ ಅಂಕಿ-ಅಂಶಗಳ ಪ್ರಕಾರದ ಕಳೆದ 24 ಗಂಟೆಗಳಲ್ಲೇ 9,304 ಮಂದಿಗೆ ಸೋಂಕು ತಗಲಿರುವುದು ಪತ್ತೆಯಾಗಿದೆ. ಇದರಿಂದ ದೇಶದಲ್ಲಿ ಸೋಂಕಿತರ ಸಂಖ್ಯೆಯು 2,16,919ಕ್ಕೆ ಏರಿಕೆಯಾಗಿದೆ.

ಜಾಗತಿಕ ಪಟ್ಟಿಯಲ್ಲಿ ಭಾರತಕ್ಕೆ 7ನೇ ಸ್ಥಾನ

ಜಾಗತಿಕ ಪಟ್ಟಿಯಲ್ಲಿ ಭಾರತಕ್ಕೆ 7ನೇ ಸ್ಥಾನ

ವಿಶ್ವದಾದ್ಯಂತ 65,97,530ಕ್ಕೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, 3,88,438 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಅಮೆರಿಕಾ ಅಗ್ರಸ್ಥಾನದಲ್ಲಿದೆ. ಬ್ರೆಜಿಲ್, ರಷ್ಯಾ, ಸ್ಪೇನ್, ಇಂಗ್ಲೆಂಡ್ ಹಾಗೂ ಇಟಲಿ ನಂತರದ ಸ್ಥಾನದಲ್ಲಿಯೇ ಭಾರತವು ಗುರುತಿಸಿಕೊಂಡಿದೆ. ಆ ಮೂಲಕ ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಭಾರತವು ಏಳನೇ ಸ್ಥಾನದಲ್ಲಿದೆ.

ದೇಶದಲ್ಲಿ ಕೊರೊನಾ ವೈರಸ್ ನಿಂದ 260 ಮಂದಿ ಸಾವು

ದೇಶದಲ್ಲಿ ಕೊರೊನಾ ವೈರಸ್ ನಿಂದ 260 ಮಂದಿ ಸಾವು

ರಾಜ್ಯ ಸಾವಿನ ಸಂಖ್ಯೆ (ಜೂ.03ರ ಅಂಕಿ-ಅಂಶ)

ಮಹಾರಾಷ್ಟ್ರ 122

ನವದೆಹಲಿ 50

ಗುಜರಾತ್ 11

ತಮಿಳುನಾಡು 10

ಮಧ್ಯಪ್ರದೇಶ 7

ಉತ್ತರ ಪ್ರದೇಶ 7

ತೆಲಂಗಾಣ 7

ರಾಜಸ್ಥಾನ 6

ಆಂಧ್ರ ಪ್ರದೇಶ 4

ಬಿಹಾರ 1

ಛತ್ತೀಸ್ ಗಢ 1

ಉತ್ತರಾಖಂಡ್ 1

ಕರ್ನಾಟಕ 1

ಜಮ್ಮು-ಕಾಶ್ಮೀರ 1

ಪಂಜಾಬ್ 1

English summary
Containment Zones Number Jump To 163 In New delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X