ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಪ್ಪುದಾರಿಗೆ ಎಳೆಯುವ ಜಾಹೀರಾತು: ಸೆಲೆಬ್ರಿಟಿಗಳಿಗೆ ಕಂಟಕ

|
Google Oneindia Kannada News

ನವದೆಹಲಿ, ಜುಲೈ 31: ತಪ್ಪು ಮಾಹಿತಿಗಳನ್ನು ನೀಡುವ ಮೂಲಕ ಜನರ ದಿಕ್ಕುತಪ್ಪಿಸುವಂತಹ ಜಾಹೀರಾತುಗಳನ್ನು ಸಿದ್ಧಪಡಿಸುವ ಉತ್ಪಾದಕರು, ಸೇವಾ ಪೂರೈಕೆದಾರರು ಮತ್ತು ಅಂತಹ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳು ಇನ್ನು ಮುಂದೆ ಎಚ್ಚರವಹಿಸುವುದು ಅಗತ್ಯ. ಒಂದು ವೇಳೆ ಉತ್ಪನ್ನದ ಕುರಿತು ತಪ್ಪು ಮಾಹಿತಿ ನೀಡುವ ಜಾಹೀರಾತು ನೀಡಿದರೆ ದಂಡ ಮತ್ತು ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ.

ತಪ್ಪು ಮಾಹಿತಿ ಕೊಡುವ ಜಾಹೀರಾತು ಮತ್ತು ಉತ್ಪನ್ನಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಮಂಗಳವಾರ ಲೋಕಸಭೆಯಲ್ಲಿ ಮಸೂದೆಯೊಂದನ್ನು ಅಂಗೀಕರಿಸಲಾಗಿದೆ. ಇದರಂತೆ ಕಂಡ ಕಂಡ ಉತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಸಿನಿಮಾ ತಾರೆಯರು, ಕ್ರಿಕೆಟಿಗರು ಮತ್ತು ಇತರೆ ಸೆಲೆಬ್ರಿಟಿಗಳು ಕೂಡ ಸುಳ್ಳು ಮಾಹಿತಿ ಕೊಡುವ ಉತ್ಪನ್ನದ ಕುರಿತು ಪ್ರಚಾರ ಮಾಡಿದರೆ ದಂಡ ತೆರಬೇಕಾಗುತ್ತದೆ.

ಟೆಲಿವಿಷನ್, ರೇಡಿಯೋ, ಪತ್ರಿಕೆ, ಹೊರಾಂಗಣ ಜಾಹೀರಾತು, ಇ-ಕಾಮರ್ಸ್, ನೇರ ಮಾರಾಟ ಮತ್ತು ಟೆಲಿಮಾರ್ಕೆಟಿಂಗ್ ಸೇರಿದಂತೆ ಯಾವುದೇ ಮಾಧ್ಯಮದಲ್ಲಿ ತಪ್ಪುದಾರಿಗೆ ಎಳೆಯುವಂತಹ ಜಾಹೀರಾತನ್ನು ಪ್ರಕಟಿಸಿದರೆ ಶಿಕ್ಷೆ ವಿಧಿಸಲು ಗ್ರಾಹಕ ರಕ್ಷಣಾ ಮಸೂದೆ 2019, ಅವಕಾಶ ನೀಡಲಿದೆ.

ವೆಬ್‌ಸೈಟ್‌ನಲ್ಲಿ ಅಶ್ಲೀಲ ಜಾಹೀರಾತು: ದೂರುದಾರನಿಗೆ ಭಾರತೀಯ ರೈಲ್ವೆ ಕೊಟ್ಟ ಸಲಹೆ ಇದು!ವೆಬ್‌ಸೈಟ್‌ನಲ್ಲಿ ಅಶ್ಲೀಲ ಜಾಹೀರಾತು: ದೂರುದಾರನಿಗೆ ಭಾರತೀಯ ರೈಲ್ವೆ ಕೊಟ್ಟ ಸಲಹೆ ಇದು!

ಈ ಮಸೂದೆಯು ಇನ್ನೂ ಕಾನೂನು ಸ್ವರೂಪ ಪಡೆದುಕೊಳ್ಳಬೇಕಿದೆ. ಪ್ರಸ್ತುತ ಜಾಹೀರಾತು ಉದ್ಯಮ ಮತ್ತು ಸ್ವಯಂ ನಿಯಂತ್ರಿತ ಕಾವಲುನಾಯಿ 'ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ ಕೌನ್ಸಿಲ್ ಆಫ್ ಇಂಡಿಯಾ (ಎಎಸ್‌ಸಿಐ) ನಡುವಿನ ಅಂತರವನ್ನು ತಗ್ಗಿಸಲಿದೆ.

ತಪ್ಪುದಾರಿಗೆ ಎಳೆಯುವ ಜಾಹೀರಾತುಗಳು

ತಪ್ಪುದಾರಿಗೆ ಎಳೆಯುವ ಜಾಹೀರಾತುಗಳು

ಒಂದು ಉತ್ಪನ್ನ ಅಥವಾ ಸೇವೆಯನ್ನು ವಿವಿಧ ವೇದಿಕೆಗಳಲ್ಲಿ ಅವಾಸ್ತವ ರೀತಿಯಲ್ಲಿ ಬಿಂಬಿಸುವ ಪ್ರಚಾರ ಅಥವಾ ಸುಳ್ಳು ಭರವಸೆ ನೀಡುವ ಅಥವಾ ಉತ್ಪನ್ನ/ಸೇವೆಯ ಕುರಿತು ಅದರ ಗುಣ, ಮೌಲ್ಯ, ಲಕ್ಷಣ, ಪ್ರಮಾಣ ಮುಂದಾವುಗಳ ಕುರಿತು ಗ್ರಾಹಕರನ್ನು ತಪ್ಪುದಾರಿಗೆ ಎಳೆಯುವುದು ಅಥವಾ ಮಹತ್ವದ ವಿಷಯಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡುವುದು, ನ್ಯಾಯಸಮ್ಮತವಲ್ಲದ ವ್ಯಾಪಾರ ಮಾರ್ಗಗಳನ್ನು ಅನುಸರಿಸುವುದು ಮುಂತಾದವುಗಳನ್ನು 'ತಪ್ಪುದಾರಿಗೆ ಎಳೆಯುವ ಜಾಹೀರಾತು' ಎಂದು ವ್ಯಾಖ್ಯಾನಿಸಲಾಗುತ್ತದೆ.

ಗ್ರಾಹಕ ರಕ್ಷಣಾ ಪ್ರಾಧಿಕಾರ

ಗ್ರಾಹಕ ರಕ್ಷಣಾ ಪ್ರಾಧಿಕಾರ

ಸರ್ಕಾರವು ನೇಮಿಸುವ ಮುಖ್ಯ ಆಯುಕ್ತರ ನೇತೃತ್ವದ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು ದೆಹಲಿಯಲ್ಲಿ ಪ್ರಧಾನ ಕಚೇರಿ ಹೊಂದಿರಲಿದ್ದು, ಗ್ರಾಹಕರ ಹಕ್ಕುಗಳ ಉಲ್ಲಂಘನೆ, ನ್ಯಾಯಸಮ್ಮತವಲ್ಲದ ವ್ಯಾಪಾರ ಚಟುವಟಿಕೆಗಳು ಮತ್ತು ಸುಳ್ಳು ಅಥವಾ ತಪ್ಪು ದಾರಿಗೆ ಎಳೆಯುವ ಜಾಹೀರಾತುಗಳಿಗೆ ಸಂಬಂಧಿಸಿದ ದೂರುಗಳನ್ನು ವಿಚಾರಣೆಗೆ ಒಳಪಡಿಸಲಿದೆ.

ಟಿವಿ ಜಾಹೀರಾತು ನೀಡುವುದರಲ್ಲಿ ಬಿಜೆಪಿ ನಂಬರ್ ಒನ್ಟಿವಿ ಜಾಹೀರಾತು ನೀಡುವುದರಲ್ಲಿ ಬಿಜೆಪಿ ನಂಬರ್ ಒನ್

2 ವರ್ಷ ಜೈಲು, 10 ಲಕ್ಷ ರೂ.ದಂಡ

2 ವರ್ಷ ಜೈಲು, 10 ಲಕ್ಷ ರೂ.ದಂಡ

ಈ ಜಾಹೀರಾತುಗಳಲ್ಲಿ ದೋಷಗಳು ಕಂಡುಬಂದರೆ ತಪ್ಪಿತಸ್ಥ ಉತ್ಪಾದಕರು ಮತ್ತು ಸೇವಾ ಪೂರೈಕೆದಾರರು ಗರಿಷ್ಠ ಎರಡು ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ.ವರೆಗೂ ದಂಡ ತೆರಬೇಕು. ತಪ್ಪು ಮಾಹಿತಿ ನೀಡುವ ಜಾಹೀರಾತುಗಳಲ್ಲಿ ಪ್ರಚಾರ ನೀಡುವ ಸೆಲೆಬ್ರಿಟಿಗಳು 10 ಲಕ್ಷ ರೂಪಾಯಿವರೆಗೂ ದಂಡ ತೆರಬೇಕಾಗುತ್ತದೆ.

ಮರುಕಳಿಸಿದರೆ ಹೆಚ್ಚುವರಿ ಶಿಕ್ಷೆ

ಮರುಕಳಿಸಿದರೆ ಹೆಚ್ಚುವರಿ ಶಿಕ್ಷೆ

ಈ ಅಪರಾಧ ಪುನರಾವರ್ತನೆಯಾದರೆ ಪ್ರಾಧಿಕಾರವು 50 ಲಕ್ಷ ರೂಪಾಯಿವರೆಗೂ ದಂಡ ಮತ್ತು ಐದು ವರ್ಷದವರೆಗೂ ಜೈಲು ಶಿಕ್ಷೆಗೆ ಗುರಿಪಡಿಸಬಹುದು. ಜತೆಗೆ ಸೆಲೆಬ್ರಿಟಿಯು ಒಂದು ವರ್ಷದವರೆಗೂ ಬೇರೆ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದನ್ನು ನಿರ್ಬಂಧಿಸಬಹುದು. ಇದು ಮರುಕಳಿಸಿದರೆ ಈ ನಿರ್ಬಂಧವನ್ನು ಮೂರು ವರ್ಷದವರೆಗೂ ವಿಸ್ತರಿಸಬಹುದು.

English summary
Lok Sabha passed The Consumer Protection Bill 2019 Celebrity enorsed, manufacturers and servide providers face jail and fines for marketing misleading claims in advertaisement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X