ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೊಂಬಾಟ್ ಸುದ್ದಿ: 2 ಕೋಟಿ ರೂಪಾಯಿ ದಂಡಕ್ಕೆ ತಪ್ಪಾದ ಕಟಿಂಗ್ ಕಾರಣ!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 24: ಯುವತಿಯ ತಲೆ ಕೂದಲು ಕತ್ತರಿಸುವಲ್ಲಿ ಸ್ವಲ್ಪ ಯಾಮಾರಿದ್ದಕ್ಕೆ ಹೇರ್ ಸಲೂನ್ ಕಂಪನಿಯೊಂದು ಬರೋಬ್ಬರಿ 2 ಕೋಟಿ ರೂಪಾಯಿ ದಂಡವನ್ನು ಪಾವತಿಸಬೇಕಾದ ಅಪರೂಪದ ಘಟನೆ ನವದೆಹಲಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಕಳೆದ 2018ರಲ್ಲಿ ನವದೆಹಲಿಯ ಹೋಟೆಲ್ ಐಟಿಸಿ ಮೌರ್ಯದಲ್ಲಿನ ಸಲೂನ್‌ನಲ್ಲಿ ಸಿಬ್ಬಂದಿಯು ಯುವತಿ ಸೂಚನೆಯಂತೆ ಕ್ಷೌರ ಮಾಡದಿದ್ದಕ್ಕೆ 2 ಕೋಟಿ ರೂ. ಪರಿಹಾರ ನೀಡುವಂತೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ(NCDRC)ವು ಸೂಚಿಸಿದೆ. NCDRC ನ್ಯಾಯಮೂರ್ತಿ ಆರ್ ಕೆ ಅಗರವಾಲ್ ಮತ್ತು ಡಾ ಎಸ್ ಎಂ ಕಾಂತಿಕರ್ ನೇತೃತ್ವದ ಪೀಠವು ಈ ಆದೇಶವನ್ನು ಹೊರಡಿಸಿದೆ.

ಇದಪ್ಪಾ ಸುದ್ದಿ: ಯೂನಿಫಾರ್ಮ್ ಖರೀದಿಸಲು ಮಕ್ಕಳ ಖಾತೆಗೆ 900 ಕೋಟಿ ರೂಪಾಯಿ!ಇದಪ್ಪಾ ಸುದ್ದಿ: ಯೂನಿಫಾರ್ಮ್ ಖರೀದಿಸಲು ಮಕ್ಕಳ ಖಾತೆಗೆ 900 ಕೋಟಿ ರೂಪಾಯಿ!

"ಮಹಿಳೆಯರು ತಮ್ಮ ತಲೆ ಕೂದಲಿಗೆ ಸಂಬಂಧಿಸಿದಂತೆ ಬಹಳ ಎಚ್ಚರಿಕೆ ವಹಿಸಿರುತ್ತಾರೆ, ಅಲ್ಲದೇ ಜಾಗರೂಕರಾಗಿ ಇರುತ್ತಾರೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ತಮ್ಮ ಕೇಶವಿನ್ಯಾಸಕ್ಕಾಗಿ ಹೆಚ್ಚು ಹಣವನ್ನು ಸಹ ಖರ್ಚು ಮಾಡುತ್ತಾರೆ," ಎಂದು ಆಯೋಗ ತಿಳಿಸಿದೆ. ಅಸಲಿಗೆ 2 ಕೋಟಿ ದಂಡವನ್ನು ಪಾವತಿಸಬೇಕಾದ ಸ್ಥಿತಿ ಎದುರಾಗಿದ್ದು ಹೇಗೆ?, ಯುವತಿಗೆ ಪರ ಅಷ್ಟು ದೊಡ್ಡ ಮೊತ್ತವನ್ನು ಶಿಫಾರಸ್ಸು ಮಾಡಲು ಕಾರಣವೇನು?, 2018ರಲ್ಲಿ ನಡೆದ ಆ ಘಟನೆ ಏನು ಎಂಬುದರ ಕುರಿತು ಒಂದು ಕುತೂಹಲಕಾರಿ ವರದಿ ಇಲ್ಲಿದೆ ಓದಿ.

ತೆಲೆಗೂದಲು ಜೊತೆಗೆ ಭಾವನಾತ್ಮಕ ಬೆಸುಗೆ

ತೆಲೆಗೂದಲು ಜೊತೆಗೆ ಭಾವನಾತ್ಮಕ ಬೆಸುಗೆ

"ಮಹಿಳೆಯರು ಸಾಮಾನ್ಯವಾಗಿ ತಮ್ಮ ತಲೆಗೂದಲು ಜೊತೆಗೆ ಭಾವನಾತ್ಮಕ ಬೆಸುಗೆಯನ್ನು ಹೊಂದಿರುತ್ತಾರೆ. ದೂರುದಾರ ಯುವತಿಯು ತಮ್ಮ ಉದ್ದನೆಯ ಕೂದಲಿನಿಂದಾಗಿ ಕೂದಲು ಉತ್ಪನ್ನಗಳಿಗೆ ಜಾಹೀರಾತು ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದರು. ವಿಎಲ್ ಸಿಸಿ ಮತ್ತು ಪ್ಯಾಂಟೀನ್ ಶಾಂಪೂ ಜಾಹೀರಾತುಗಳಲ್ಲಿ ನಟನೆ ಮಾಡುತ್ತಿದ್ದರು. ಆದರೆ ತಮ್ಮ ಮಾರ್ಗದರ್ಶನದಂತೆ ಕ್ಷೌರ ಮಾಡದ ಹಿನ್ನೆಲೆ ಮೊದಲಿನಂತೆ ನಿರೀಕ್ಷಿತ ಮಟ್ಟದಲ್ಲಿ ಜಾಹೀರಾತುಗಳು ಸಿಗುತ್ತಿಲ್ಲ, ಆದ್ದರಿಂದ ಬಹಳಷ್ಟು ನಷ್ಟವಾಗಿದೆ. ತಮ್ಮ ಬದುಕಿನ ಶೈಲಿಯೇ ಬದಲಾಗಿದ್ದು, ಟಾಪ್ ಮಾಡೆಲ್ ಆಗಬೇಕು ಎಂದು ಕಂಡ ಕನಸು ನುಚ್ಚು ನೂರಾಗಿದೆ," ಎಂದು ಯುವತಿಯು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಸಿನಿಮಾ ನಟಿಯಾಗುವ ಯುವತಿ ಕನಸು ನುಚ್ಚುನೂರು

ಸಿನಿಮಾ ನಟಿಯಾಗುವ ಯುವತಿ ಕನಸು ನುಚ್ಚುನೂರು

ತಮ್ಮ ಉದ್ದನೆಯ ಕೇಶದಿಂದಲೇ ಫೇಮಸ್ ಮಾಡೆಲ್ ಆಗಿ ಗುರುತಿಸಿಕೊಂಡಿದ್ದ ಯುವತಿಯ ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನು ಕಂಡಿದ್ದರು. ತಲೆಗೂದಲಿಗೆ ಸಂಬಂಧಿಸಿದ ಮತ್ತಷ್ಟು ಜಾಹೀರಾತುಗಳ ಜೊತೆಗೆ ಸಿನಿಮಾ ರಂಗದಲ್ಲೂ ಮಿಂಚುವ ವಿಶ್ವಾಸದಲ್ಲಿದ್ದರು. ಆದರೆ ವರ್ಷಗಳ ಕಾಲ ಜೋಪಾನದಿಂದ ಆರೈಕೆ ಮಾಡಿಕೊಂಡು ಬಂದಿದ್ದ ತಲೆಗೂದಲನ್ನು ಕತ್ತರಿಸಿದ ಐಟಿಸಿ ಮೌರ್ಯ ಸಿಬ್ಬಂದಿಯ ಒಂದು ತಪ್ಪು, ಯುವತಿಯ ಕನಸುಗಳನ್ನೆಲ್ಲ ನುಚ್ಚು ನೂರು ಮಾಡಿದೆ.

2018ರಲ್ಲಿ ನಡೆದ ಘಟನೆ ಏನು?

2018ರಲ್ಲಿ ನಡೆದ ಘಟನೆ ಏನು?

ಕಳೆದ 2018ರ ಏಪ್ರಿಲ್ 12ರಂದು ಜಾಹೀರಾತು ಸಂದರ್ಶನಕ್ಕೆ ಅಣಿಯಾಗುವ ಉದ್ದೇಶದಿಂದ ಯುವತಿಯು ಕ್ಷೌರಕ್ಕಾಗಿ ಹೋಟೆಲ್ ಐಟಿಸಿ ಮೌರ್ಯದಲ್ಲಿನ ಸಲೂನ್‌ಗೆ ಭೇಟಿ ನೀಡಿದರು. ತಮ್ಮ ಎಂದಿನ ಕೇಶವಿನ್ಯಾಸಕಿ ಬಗ್ಗೆ ಯುವತಿ ವಿಚಾರಿಸಿದರು. ಅಂದು ಆ ಮಹಿಳೆ ಇಲ್ಲದ ಕಾರಣ ಸಿಬ್ಬಂದಿಯ ಭರವಸೆ ಮೇರೆಗೆ ಬೇರೆ ಮಹಿಳೆಯಿಂದ ಕೇಶವಿನ್ಯಾಸ ಮಾಡಿಸಿಕೊಳ್ಳಲು ಒಪ್ಪಿಕೊಂಡರು. "ಮುಖದ ಮುಂಭಾಗ ಮತ್ತು ಹಿಂಭಾಗವು ಮುಚ್ಚಿಕೊಳ್ಳುವಂತೆ ತಲೆಗೂದಲನ್ನು ಕೆಳಭಾಗದಿಂದ ನೇರವಾಗಿ 4 ಇಂಚು ಕೂದಲು ಕತ್ತರಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಅಚ್ಚರಿ ಮತ್ತು ಆಘಾತ ಎನ್ನುವಂತೆ ಯುವತಿಯ ಕೇಶವಿನ್ಯಾಸ ಪೂರ್ಣಗೊಳ್ಳುವ ಹೊತ್ತಿಗೆ ತೆಲೆಯ ಮೇಲ್ಭಾಗದಿಂದ ಭುಜವರೆಗೆ 4 ಇಂಟು ಕೂದಲನ್ನು ಮಾತ್ರ ಉಳಿಸಿ ಉಳಿದ ಕೂದಲನ್ನೆಲ್ಲ ಕತ್ತರಿಸಲಾಗಿತ್ತು. ಲಂಡನ್ ಕಟಿಂಗ್ ರೀತಿಯಲ್ಲಿ ಯುವತಿ ಕೂದಲನ್ನು ಕತ್ತರಿಸಲಾಗಿತ್ತು.

ಯುವತಿ ನೆತ್ತಿ ಸುಟ್ಟ ಸಲೂನ್ ಸಿಬ್ಬಂದಿ ಚಿಕಿತ್ಸೆ

ಯುವತಿ ನೆತ್ತಿ ಸುಟ್ಟ ಸಲೂನ್ ಸಿಬ್ಬಂದಿ ಚಿಕಿತ್ಸೆ

ಕ್ಷೌರ ಮಾಡುವಲ್ಲಿ ಎಡವಿನ ಸಲೂನ್ ಸಿಬ್ಬಂದಿಯು ಯುವತಿಗೆ ಉಚಿತವಾಗಿ ಕೂದಲಿನ ಚಿಕಿತ್ಸೆಯನ್ನು ನೀಡಿರುವುದು ಸಂಶಯಾಸ್ಪದವಾಗಿದ್ದು, ಅವಳ ತಲೆಗೂದಲಿಗೆ ಹಾನಿಯುಂಟು ಮಾಡಿದೆ. ಸಲೂನ್ ಸಿಬ್ಬಂದಿ ನೀಡಿದ ಕೂದಲು ಚಿಕಿತ್ಸೆಯಿಂದಾಗಿ ಯುವತಿಯ ನೆತ್ತಿ ಸುಟ್ಟು ಹೋಗಿದೆ. ಕೂದಲಿನ ಚಿಕಿತ್ಸೆಯಲ್ಲಿ ಬಳಸಿದ ರಾಸಾಯನಿಕದಿಂದ ಆಕೆಯ ನೆತ್ತಿಗೆ ಶಾಶ್ವತ ಹಾನಿಯನ್ನುಂಟು ಮಾಡಿದೆ "ಎಂದು ಆಯೋಗ ಹೇಳಿದೆ.

ಆಯೋಗದ ಆದೇಶದಲ್ಲಿ ಏನು ಉಲ್ಲೇಖಿಸಲಾಗಿದೆ?

ಆಯೋಗದ ಆದೇಶದಲ್ಲಿ ಏನು ಉಲ್ಲೇಖಿಸಲಾಗಿದೆ?

ಯುವತಿ ಹಿರಿಯ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದು ಉತ್ತಮ ಆದಾಯವನ್ನು ಗಳಿಸುತ್ತಿದ್ದರು ಎಂಬುದನ್ನು ಆಯೋಗ ಗಮನಿಸಿದೆ. "ಆಕೆಯ ಕೂದಲು ಕತ್ತರಿಸುವಲ್ಲಿ ತೋರಿದ ನಿರ್ಲಕ್ಷ್ಯದಿಂದಾಗಿ ಅವಳು ಮಾನಸಿಕವಾಗಿ ಕುಸಿದರು. ತೀವ್ರ ಆಘಾತಗೊಂಡು ತನ್ನ ಕೆಲಸದಲ್ಲಿ ಗಮನಹರಿಸಲು ಸಾಧ್ಯವಾಗಲಿಲ್ಲ, ಅಂತಿಮವಾಗಿ ತನ್ನ ಕೆಲಸವನ್ನು ಕಳೆದುಕೊಂಡಳು. ಇದರ ಹೊರತಾಗಿ, ಸಲೂನ್ ಸಿಬ್ಬಂದಿ ನೀಡಿದ ಕೂದಲು ಚಿಕಿತ್ಸೆಯು ವೈದ್ಯಕೀಯ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. ಆಕೆಯ ನೆತ್ತಿ ಸುಟ್ಟುಹೋಗಿದೆ ಮತ್ತು ಸಿಬ್ಬಂದಿ ದೋಷದಿಂದ ಅಲರ್ಜಿ ಮತ್ತು ತುರಿಕೆ ಇನ್ನೂ ಇದೆ ಎಂದು ಆಯೋಗದ ಆದೇಶದಲ್ಲಿ ಬರೆಯಲಾಗಿದೆ.

ತಲೆಗೂದಲು ಕಳೆದುಕೊಂಡ ಯುವತಿ ನೋವಿನ ಉಲ್ಲೇಖ

ತಲೆಗೂದಲು ಕಳೆದುಕೊಂಡ ಯುವತಿ ನೋವಿನ ಉಲ್ಲೇಖ

ಸದಾ ಉದ್ದನೆಯ ಕೂದಲನ್ನು ಹೊಂದಿದ್ದ ಯುವತಿ ಐಟಿಸಿ ಹೊಟೇಲ್ ಲಿಮಿಟೆಡ್ನ ತಪ್ಪಿನಿಂದಾಗಿ ಇಂದು ತೀವ್ರವಾಗಿ ನೊಂದಿದ್ದಾರೆ. ಕನ್ನಡಿ ಎದುರಿನಲ್ಲೇ ದಿನ ಆರಂಭಿಸುತ್ತಿದ್ದ ಯುವತಿ ಇಂದು ಕನ್ನಡಿ ನೋಡುವುದನ್ನೇ ಬಿಟ್ಟಿದ್ದಾರೆ. ಸಂವಹನ ವೃತ್ತಿಪರಳಾದ ಯುವತಿ ಸಾಮಾಜಿಕ ಚಟುವಟಿಕೆಗಳಲ್ಲಿ ಮತ್ತು ಸಂವಾದಾತ್ಮಕ ಅಧಿವೇಶನಗಳಲ್ಲಿ ಭಾಗವಹಿಸಬೇಕಾಗುತ್ತದೆ. "ಆದರೆ ಸ್ವಲ್ಪ ಕೂದಲಿನಿಂದಾಗಿ ಅವಳು ತನ್ನ ಆತ್ಮವಿಶ್ವಾಸವನ್ನೇ ಕಳೆದುಕೊಂಡಳು. ಕಳಪೆ ಕ್ಷೌರದ ನಂತರ ಮಾನಸಿಕ ಕುಸಿತದಿಂದ ಹಾಗೂ ಪೀಡಿಸುವ ಕೂದಲಿನ ಚಿಕಿತ್ಸೆಯಿಂದಾಗಿ ಆದಾಯದ ನಷ್ಟ ಎದುರಿಸಬೇಕಾಯಿತು. ಯುವತಿ ತನ್ನ ಕೆಲಸವನ್ನೂ ತೊರೆದಳು. ಈ ಘಟನೆಯ ನಂತರ ಕಳೆದ ಎರಡು ವರ್ಷಗಳಿಂದ ಅವಳು ತೀವ್ರ ನೋವು ಮತ್ತು ಆಘಾತವನ್ನು ಅನುಭವಿಸುತ್ತಿದ್ದಾಳೆ," ಎಂದು ಆಯೋಗ ಹೇಳಿದೆ.

English summary
ITC Maurya bad haircut: The woman in her complaint said that she underwent severe mental breakdown and trauma due to the negligence of the hairdresser at the ITC Maurya hotel’s salon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X