ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈಲ ದರದಲ್ಲಿ ಇಳಿಕೆ, ಗ್ರಾಹಕನ ಮೊಗದಲ್ಲಿ ಅಲ್ಪ ಚೇತರಿಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 26: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಿಂದ ತೈಲ ದರದಲ್ಲಿ ಇಳಿಕೆ ಕಂಡುಬಂದ ಹಿನ್ನೆಲೆಯಲ್ಲಿ ಸತತ ಏಳನೇ ದಿನವಾದ ಶುಕ್ರವಾರವೂ ದೇಶದ ನಾನಾ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಅಲ್ಪ ಮಟ್ಟಿನ ಇಳಿಕೆ ಕಂಡು ಬಂದಿದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಪೈಸೆಗಳ ಲೆಕ್ಕದಲ್ಲಿ ದರವನ್ನು ಕುಗ್ಗಿಸುತ್ತಿವೆ ಇದರಿಂದ ಕಳೆದ ಸುಮಾರು ಎರಡು ತಿಂಗಳಿನಿಂದ ಸತತ ಏರಿಕೆಯಿಂದ ತತ್ತರಿಸಿದ್ದ ಜನ ಸಾಮಾನ್ಯರು ಕಳೆದೊಂದು ವಾರದಿಂದ ಸ್ವಲ್ಪ ಮಟ್ಟದ ದರ ಇಳಿಕೆಯಿಂದ ಅಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

ಸತತವಾಗಿ 5ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಅಗ್ಗಸತತವಾಗಿ 5ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಅಗ್ಗ

ದೆಹಲಿಯಲ್ಲಿ ಪೆಟ್ರೋಲ್ ದರ 80.83 ಪೈಸೆಗಳಿದ್ದರೆ 86.33 ಪೈಸೆಗಳಿಗೆ ಇಳಿಕೆಯಾಗಿದ್ದು, 25 ಪೈಸೆ ದರ ಕುಸಿತ ಉಂಟಾಗಿದೆ. ಮತ್ತೊಂದೆಡೆ ಡೀಸೆಲ್ ದೆಹಲಿಯಲ್ಲಿ 73.75 ಪೈಸೆ ಇದ್ದರೆ, ಮುಂಬೈನಲ್ಲಿ ಡೀಸೆಲ್‌ ದರ ಪ್ರತಿ ಲೀಟರ್‌ಗೆ 78.33ಪೈಸೆಗೆ ಇಳಿದಿದೆ.

Consecutive seventh day fuel prices witnessed reduction

ಸತತವಾಗಿ ನಾಲ್ಕನೇ ದಿನವೂ ಪೆಟ್ರೋಲ್, ಡೀಸೆಲ್ ದರ ಇಳಿಕೆಸತತವಾಗಿ ನಾಲ್ಕನೇ ದಿನವೂ ಪೆಟ್ರೋಲ್, ಡೀಸೆಲ್ ದರ ಇಳಿಕೆ

ಕಳೆದ ಅಕ್ಟೋಬರ್ 4 ರಂದು ಇಂಧನ ದರ ಹೆಚ್ಚಳಕ್ಕೆ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವ ತೈಲ ದರ ಕಡಿಮೆ ಮಾಡಿತ್ತು. ಅದಾದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆಯಾಗಿರುವುದರಿಂದ ಪೆಟ್ರೋಲ್ ದರ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ 81.97 ಹಾಗೂ ಡೀಸೆಲ್ 75.39ರಷ್ಟಿದೆ.

English summary
Public sector fuel companies have reducing fuel prices in paisa for the last one week as international market is study over the last few days on the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X