ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಗಾಸಸ್‌ ಹಗರಣ: ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ 'ಬೇಹುಗಾರಿಕೆಯ ಜೇಮ್ಸ್ ಬಾಂಡ್' ಎಂದ ಕೇಂದ್ರ ಸಚಿವ

|
Google Oneindia Kannada News

ನವದೆಹಲಿ, ಆ.01: ಪೆಗಾಸಸ್‌ ಬೇಹುಗಾರಿಕೆ ಆರೋಪದ ಕುರಿತು ಚರ್ಚೆಗೆ ಆಗ್ರಹಿಸಿ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಕಾಂಗ್ರೆಸ್‌ ಪಕ್ಷವು ಅಧಿಕಾರದಲ್ಲಿದ್ದಾಗ "ಬೇಹುಗಾರಿಕೆಯ ಜೇಮ್ಸ್ ಬಾಂಡ್" ಎಂದು ಲೇವಡಿ ಮಾಡಿದ್ದಾರೆ. ಹಾಗೆಯೇ ಕಾಂಗ್ರೆಸ್‌ ಈ ಸಂಸತ್ತಿನ ಸಮಯವನ್ನು ವ್ಯರ್ಥ ಮಾಡಲು ಬಯಸಿದೆ ಎಂದು ಆರೋಪಿಸಿದ್ದಾರೆ. ಈ ಪೆಗಾಸಸ್‌ ಬೇಹುಗಾರಿಕೆ ವಿಚಾರವು "ನಕಲಿ ಮತ್ತು ನಿರ್ಮಿತ" ಸಮಸ್ಯೆಗಳು ಎಂದು ಕೂಡಾ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ಗಲಾಟೆ ಹುಟ್ಟಿಸಿ ತಾನು ತಪ್ಪಿಸಿಕೊಳ್ಳುವ ಕಾರ್ಯವನ್ನು ಕಾಂಗ್ರೆಸ್ ಮತ್ತು ಇತರ ಕೆಲವು ವಿರೋಧ ಪಕ್ಷಗಳು ಮಾಡಿ, ಈ ಮೂಲಕ ಓಟು ಪಡೆಯುವ ಕಾರ್ಯ ಮಾಡಲು ಮುಂದಾಗಿದೆ ಎಂದು ರಾಜ್ಯಸಭಾ ಉಪನಾಯಕರಾಗಿರುವ ನಖ್ವಿ ಆರೋಪ ಮಾಡಿದ್ದಾರೆ. ಪಿಟಿಐಗೆ ನೀಡಿದ ಸಂದರ್ಶನದಲ್ಲಿ, "ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು ಜನರಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಗಳು ಸುಗಮವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡುವ ಮೂಲಕ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಬಿಕ್ಕಟ್ಟು ಮುರಿಯುತ್ತದೆ," ಎಂದು ಭರವಸೆ ವ್ಯಕ್ತಪಡಿಸಿದರು.

ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 19 ರಿಂದ ಆರಂಭವಾದಾಗಿನಿಂದ ಪೆಗಾಸಸ್ ಮತ್ತು ರೈತರ ಸಮಸ್ಯೆಗಳ ಕುರಿತು ವಿರೋಧ ಪಕ್ಷಗಳ ನಿರಂತರ ಪ್ರತಿಭಟನೆಗಳ ನಡುವೆ ಕೆಲವು ಮಸೂದೆಗಳನ್ನು ಅಂಗೀಕರಿಸುವುದನ್ನು ಹೊರತುಪಡಿಸಿ, ಲೋಕಸಭೆ ಮತ್ತು ರಾಜ್ಯಸಭೆಗಳು ಯಾವುದೇ ಮಹತ್ವದ ವ್ಯವಹಾರವನ್ನು ನಡೆಸಲು ವಿಫಲವಾಗಿವೆ. ಪ್ರತಿಪಕ್ಷ ಮತ್ತು ಸರ್ಕಾರದ ನಡುವೆ ಪೆಗಾಸಸ್ ಸಮಸ್ಯೆಯ ಕುರಿತು ಚರ್ಚೆಗೆ ಅವಕಾಶ ಕೋರಿರುವ ಬಗ್ಗೆಯೇ ವಾಗ್ವಾದ ನಡೆದಿದೆ.

ಸಂಸತ್ತಿನ ಮುಂಗಾರು ಅಧಿವೇಶನವನ್ನು ಮೊಟಕುಗೊಳಿಸುವ ಬಗ್ಗೆಗಿನ ಸುದ್ದಿಯನ್ನು ಬಿಜೆಪಿ ಹಿರಿಯ ನಾಯಕ ಕೂಡ ತಿರಸ್ಕರಿಸಿದರು. ಅಧಿವೇಶನವನ್ನು ಆಗಸ್ಟ್ 13 ರವರೆಗೆ ನಿಗದಿಪಡಿಸಲಾಗಿರುವುದರಿಂದ ಮತ್ತು ವಹಿವಾಟುಗಳನ್ನು ಅಲ್ಲಿಯವರೆಗೆ ಪಟ್ಟಿ ಮಾಡಲಾಗಿರುವುದರಿಂದ ಅಂತಹ "ವದಂತಿಗಳ" ಆಧಾರವಿಲ್ಲ ಎಂದು ಹೇಳಿದರು.

 ಪ್ರತಿ ಪಕ್ಷಗಳಿಂದ 'ಗಲಾಟೆ ಸೃಷ್ಟಿಸಿ ಓಟ'

ಪ್ರತಿ ಪಕ್ಷಗಳಿಂದ 'ಗಲಾಟೆ ಸೃಷ್ಟಿಸಿ ಓಟ'

"ಸಂಸತ್ತಿನಲ್ಲಿನ ಬಿಕ್ಕಟ್ಟನ್ನು ಕೊನೆಗೊಳಿಸಲು ಮಧ್ಯದ ಮಾರ್ಗವನ್ನು ಕಂಡುಕೊಳ್ಳಬಹುದೇ ಎಂದು ಮಾಧ್ಯಮ ಪ್ರಶ್ನಿಸಿದಾಗ, ಮುಖ್ತಾರ್ ಅಬ್ಬಾಸ್ ನಖ್ವಿ, ಕಾಂಗ್ರೆಸ್ ಮತ್ತು ಇತರ ಕೆಲವು ವಿರೋಧ ಪಕ್ಷಗಳು 'ಗಲಾಟೆ ಮತ್ತು ಓಟ' ಸೂತ್ರವನ್ನು ಅಳವಡಿಸಿಕೊಳ್ಳುತ್ತಿವೆ. ಜನರ ಸಮಸ್ಯೆಗಳ ಕುರಿತು ಚರ್ಚೆ ನಡೆಸುವುದಾಗಲಿ ಅಥವಾ ಜನರ ಸಮಸ್ಯೆಗಳ ಕುರಿತು ನಡೆಯುವ ಚರ್ಚೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿಲ್ಲ," ಎಂದು ಟೀಕಿಸಿದ್ದಾರೆ.

ಪೆಗಾಸಸ್ ಗದ್ದಲ: ಲೋಕಸಭೆಯಲ್ಲಿ ಕಾಗದ ಪತ್ರ ಹರಿದ 9 ಸಂಸದರು ಅಮಾನತು ಸಾಧ್ಯತೆ?ಪೆಗಾಸಸ್ ಗದ್ದಲ: ಲೋಕಸಭೆಯಲ್ಲಿ ಕಾಗದ ಪತ್ರ ಹರಿದ 9 ಸಂಸದರು ಅಮಾನತು ಸಾಧ್ಯತೆ?

"ವಿರೋಧ ಪಕ್ಷದವರು ಮೊದಲು ನಮಗೆ ಕೊರೊನಾ ಸೋಂಕು ಸಾಂಕ್ರಾಮಿಕದ ಬಗ್ಗೆ ಚರ್ಚೆ ನಡೆಸಬೇಕು ಎಂದು ಹೇಳಿದರು. ಆದರೆ ನಂತರ ಅದನ್ನು ಒಪ್ಪಲಿಲ್ಲ. ಬಳಿಕ ನಮಗೆ ರೈತರ ಬಗ್ಗೆ ಚರ್ಚೆ ನಡೆಸಬೇಕು ಎಂದು ಹೇಳಿದರು. ನಂತರ ಅದನ್ನೂ ಒಪ್ಪಲಿಲ್ಲ.ದೇಶದ ವಿವಿಧ ಭಾಗಗಳಲ್ಲಿ ಪ್ರವಾಹದ ಸಮಸ್ಯೆ ಉಂಟಾಗಿದೆ. ಅದರ ಬಗ್ಗೆ ಅಥವಾ ವಿಪಕ್ಷದವರು ಮಾತನಾಡಿಕೊಳ್ಳುವ ಬೆಲೆ ಏರಿಕೆ ಸಮಸ್ಯೆಯ ಬಗ್ಗೆ ಯಾವುದೇ ಆಸಕ್ತಿಯನ್ನು ತೋರಿಸುತ್ತಿಲ್ಲ," ಎಂದು ಮುಖ್ತಾರ್ ಅಬ್ಬಾಸ್ ನಖ್ವಿ ಆರೋಪಿಸಿದ್ದಾರೆ.

 ಚರ್ಚೆ ನಡೆಸಿದರೆ ಸುಮ್ಮನೇ ಸಮಯ ವ್ಯರ್ಥ

ಚರ್ಚೆ ನಡೆಸಿದರೆ ಸುಮ್ಮನೇ ಸಮಯ ವ್ಯರ್ಥ

ಪೆಗಾಸಸ್ ಸಮಸ್ಯೆಯನ್ನು ಚರ್ಚಿಸಲು ಪ್ರತಿಪಕ್ಷಗಳು ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ನಖ್ವಿ, ವಿಪಕ್ಷದವರು ಸಂಸತ್ತಿನ ಸಮಯವನ್ನು "ಯಾವುದೇ ಗುರುತನ್ನು ಹೊಂದಿರದ ನಕಲಿ ಮತ್ತು ಕಪೋಲಿತ ವಿಷಯಗಳಿಗಾಗಿ" ವ್ಯರ್ಥ ಮಾಡಲು ಬಯಸುತ್ತಾರೆ ಎಂದು ಹೇಳಿದರು. "ಸಮಯವನ್ನು ವ್ಯರ್ಥ ಮಾಡದೆ, ಐಟಿ ಸಚಿವರು (ಅಶ್ವಿನಿ ವೈಷ್ಣವ್) ಹೇಳಿಕೆ ನೀಡಿದ್ದರು. ಹಾಗೆಯೇ ವಿರೋಧ ಪಕ್ಷದವರಿಗೆ ಈ ಬಗ್ಗೆ ರಾಜ್ಯಸಭೆಯಲ್ಲಿ ಸ್ಪಷ್ಟೀಕರಣವನ್ನು ಪಡೆಯಲು ಅವಕಾಶವಿತ್ತು. ಆದರೆ ಸ್ಪಷ್ಟೀಕರಣವನ್ನು ತೆಗೆದುಕೊಳ್ಳುವ ಬದಲು ವಿರೋಧ ಪಕ್ಷದವರು ಗದ್ದಲವನ್ನು ಸೃಷ್ಟಿಸಿದರು ಮತ್ತು ಹಿಂಸಾತ್ಮಕ ಕೃತ್ಯಗಳನ್ನು ನಡೆಸಿದರು," ಎಂದು ಮುಖ್ತಾರ್ ಅಬ್ಬಾಸ್ ನಖ್ವಿ ದೂರಿದ್ದಾರೆ.

'ಪೆಗಾಸಸ್‌ ಬಗ್ಗೆ ನ್ಯಾಯಾಂಗ ತನಿಖೆ ಅಗತ್ಯ': ಪ್ರಧಾನಿಯನ್ನು ಭೇಟಿಯಾದ ಮಮತಾ'ಪೆಗಾಸಸ್‌ ಬಗ್ಗೆ ನ್ಯಾಯಾಂಗ ತನಿಖೆ ಅಗತ್ಯ': ಪ್ರಧಾನಿಯನ್ನು ಭೇಟಿಯಾದ ಮಮತಾ

 ಕಾಂಗ್ರೆಸ್‌ ವಿರುದ್ದ ನಖ್ವಿ ವಾಗ್ದಾಳಿ

ಕಾಂಗ್ರೆಸ್‌ ವಿರುದ್ದ ನಖ್ವಿ ವಾಗ್ದಾಳಿ

ಬಹುತೇಕ ವಿರೋಧ ಪಕ್ಷಗಳು ಚರ್ಚೆ ಮತ್ತು ಮಾತುಕತೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಆದರೆ ದುರದೃಷ್ಟವಶಾತ್ ಕಾಂಗ್ರೆಸ್ ತಮ್ಮ ಸ್ವ-ನಿಯೋಜಿತ ಮುಖ್ಯಸ್ಥರಾಗಲು ಪ್ರಯತ್ನಿಸುತ್ತಿದೆ ಮತ್ತು ಆ ಪ್ರಯತ್ನದಲ್ಲಿ ಅದು "ವಿರೋಧ ಪಕ್ಷದಂತೆ ತನ್ನದೇ ಋಣಾತ್ಮಕ ಧೋರಣೆಯನ್ನು ಪ್ರಚಾರ ಮಾಡುತ್ತಿದೆ. ಕಾಂಗ್ರೆಸ್‌ನವರು ರಚನಾತ್ಮಕ ಮಾರ್ಗಗಳಲ್ಲಿ ಯೋಚಿಸುತ್ತಿರುವ ವಿರೋಧ ಪಕ್ಷಗಳ ಚಿಂತನೆಯನ್ನು ಹೈಜಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಸ್ವತಃ ವಿರೋಧ ಪಕ್ಷದ ನಾಯಕರಾಗಲು ಪ್ರಯತ್ನಿಸುತ್ತಿದೆ," ಎಂದು ರಾಜ್ಯಸಭಾ ಸಂಸದ ಹೇಳಿದರು.

'ನನ್ನ ಫೋನ್ ಕೂಡ ಟ್ಯಾಪ್ ಆಗಿದೆ, ಇದು ಜನರ ದನಿಯ ಮೇಲಿನ ದಾಳಿ': ರಾಹುಲ್‌'ನನ್ನ ಫೋನ್ ಕೂಡ ಟ್ಯಾಪ್ ಆಗಿದೆ, ಇದು ಜನರ ದನಿಯ ಮೇಲಿನ ದಾಳಿ': ರಾಹುಲ್‌

 ಕಾಂಗ್ರೆಸ್‌ ರಫೇಲ್‌ ವಿಚಾರದಲ್ಲೂ ಹೀಗೆ ದಾರಿ ತಪ್ಪಿಸಿದೆ

ಕಾಂಗ್ರೆಸ್‌ ರಫೇಲ್‌ ವಿಚಾರದಲ್ಲೂ ಹೀಗೆ ದಾರಿ ತಪ್ಪಿಸಿದೆ

ಕಾಂಗ್ರೆಸ್ ರಫೇಲ್ ಜೆಟ್ ವಿಚಾರದಲ್ಲಿಯೂ ಜನರನ್ನು "ದಾರಿ ತಪ್ಪಿಸಲು" ಯತ್ನಿಸಿತು ಮತ್ತು ಸಂಸತ್ತಿನ ಸಮಯವನ್ನು ಹಾಳುಮಾಡಿದೆ. ಬಳಿಕ ಏನನ್ನು ಬಹಿರಂಗಪಡಿಸಿದರು ಎಂದು ಎಲ್ಲರಿಗೂ ತಿಳಿದಿದೆ. "ಈ ಜನರೂ (ಕಾಂಗ್ರೆಸ್) ಬೇಹುಗಾರಿಕೆಯ ಜೇಮ್ಸ್ ಬಾಂಡ್ ಆಗಿದ್ದರು (ಅಧಿಕಾರದಲ್ಲಿದ್ದಾಗ). ಕಾಂಗ್ರೆಸ್‌ ಸರ್ಕಾರದಲ್ಲಿದ್ದಾಗ ಮಾಡಿದ ಕೃತ್ಯವನ್ನು ಈಗ ವಿರೋಧ ಪಕ್ಷದಲ್ಲಿರುವಾಗ ಆರೋಪಿಸುವ ಹುನ್ನಾರವನ್ನು ಸೃಷ್ಟಿಸುತ್ತಾರೆ," ಎಂದು ಹಲವಾರು ಚಲನಚಿತ್ರಗಳನ್ನು ಮಾಡಲಾದ ಕಾದಂಬರಿಕಾರ ಇಯಾನ್ ಫ್ಲೆಮಿಂಗ್ ರಚಿಸಿದ ಕಾಲ್ಪನಿಕ ಸೂಪರ್ ಸ್ಪೈ ಪಾತ್ರವನ್ನು ಉಲ್ಲೇಖ ಮಾಡಿ ನಖ್ವಿ ಕಾಂಗ್ರೆಸ್‌ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಯುಪಿಎ ಸಮಯದಲ್ಲಿ, ಅವರದೇ ಹಣಕಾಸು ಸಚಿವರು ತಮ್ಮ ಸರ್ಕಾರವು ತನ್ನ ಮೇಲೆ ಬೇಹುಗಾರಿಕೆ ನಡೆಸಿದೆ ಎಂದು ಆರೋಪಿಸಿದ್ದರು ಎಂದು ನಖ್ವಿ ಹೇಳಿದರು. "ಕಾಂಗ್ರೆಸ್‌ನವರು ಈಗಲೂ ಆ ವಾತಾವರಣವನ್ನು ಸೃಷ್ಟಿಸಲು ಬಯಸುತ್ತಾರೆ, ಆದರೂ ಈ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ," ಎಂದು ಪೆಗಾಸಸ್‌ ಪ್ರಕರಣ ಸುಳ್ಳು ಎಂದು ನಖ್ವಿ ವಾದಿಸಿದರು.

ಅಂತರಾಷ್ಟ್ರೀಯ ಮಾಧ್ಯಮ ಒಕ್ಕೂಟವು 300 ಕ್ಕೂ ಹೆಚ್ಚು ಭಾರತೀಯ ಮೊಬೈಲ್ ಫೋನ್ ಸಂಖ್ಯೆಗಳು ಇಸ್ರೇಲಿ ಎನ್‌ಎಸ್‌ಒ ನ ಪೆಗಾಸಸ್ ಸ್ಪೈವೇರ್ ಬಳಸಿ ಬೇಹುಗಾರಿಕೆಗೆ ಒಳಪಡಿಸಲಾಗಿದೆ ಎಂದು ವರದಿ ಮಾಡಿದೆ. ಹಾಗೆಯೇ ಈ ಪಟ್ಟಿಯಲ್ಲಿ ಸಂಭಾವ್ಯ ವ್ಯಕ್ತಿಗಳ ಹೆಸರು ಇದೆ. ರಾಹುಲ್ ಗಾಂಧಿ, ಇಬ್ಬರು ಕೇಂದ್ರ ಸಚಿವರಾದ ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ರೈಲ್ವೇ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್, ಸಿಬಿಐನ ಮಾಜಿ ಮುಖ್ಯಸ್ಥ ಅನಿಲ್ ಅಂಬಾನಿ ಮತ್ತು ಕನಿಷ್ಠ 40 ಪತ್ರಕರ್ತರು ಸೇರಿದಂತೆ ಎನ್ಎಸ್ಒನ ಸೋರಿಕೆಯಾದ ಡೇಟಾಬೇಸ್ ಪಟ್ಟಿಯಲ್ಲಿ ಪ್ರತಿಪಕ್ಷದ ನಾಯಕರು ಇದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Attacking the Congress which has been protesting in Parliament demanding a discussion on the Pegasus snooping allegations, Mukhtar Abbas Naqvi said Congress Was 'James Bond Of Spying'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X