ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಅಧ್ಯಕ್ಷಸ್ಥಾನ: ಪ್ರಿಯಾಂಕಾ ಸೂಕ್ತ ಎಂದ ನಟ್ವರ್ ಸಿಂಗ್

|
Google Oneindia Kannada News

ನವದೆಹಲಿ, ಜುಲೈ 22: ಗಾಂಧಿ ಕುಟುಂಬದ ಹೊರಗಿನವರು ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನದಲ್ಲಿ ಕೂತರೆ ಪಕ್ಷ 24 ಗಂಟೆಗಳಲ್ಲಿ ಛಿದ್ರ ಛಿದ್ರವಾಗುತ್ತದೆ ಎಂದು ಕಾಂಗ್ರೆಸ್ನ ಮಾಜಿ ನಾಯಕ, ಮಾಜಿ ವಿದೇಶಾಂಗ ಸಚಿವ ನಟ್ವರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನೇ ಪಕ್ಷಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂಬುದು ಹಲವು ಹಿರಿಯ ಕಾಂಗ್ರೆಸ್ ನಾಯಕರ ಅಭಿಪ್ರಾಯವಾಗಿದ್ದು, ಅದಕ್ಕೆ ನಟ್ವರ್ ಸಿಂಗ್ ಸಹ ಹೊರತಲ್ಲ.

 'ಗಾಂಧಿ' ಅಧ್ಯಕ್ಷರಾಗದಿದ್ದರೆ ಕಾಂಗ್ರೆಸ್ ಭವಿಷ್ಯ ಅಯೋಮಯ: ಶಾಸ್ತ್ರಿ ಪುತ್ರ 'ಗಾಂಧಿ' ಅಧ್ಯಕ್ಷರಾಗದಿದ್ದರೆ ಕಾಂಗ್ರೆಸ್ ಭವಿಷ್ಯ ಅಯೋಮಯ: ಶಾಸ್ತ್ರಿ ಪುತ್ರ

ಇತ್ತೀಚೆಗೆ ಉತ್ತರ ಪ್ರದೇಶದ ಸೋನಭದ್ರ ಎಂಬ ಹಳ್ಳಿಗೆ ತೆರಳಿ ಭೂವಿವಾದಕ್ಕೆ ಸಂಬಂಧಿಸಿದಂತೆ ಕೊಲೆಯಾದ ಹತ್ತು ಮಂದಿಯ ಕುಟುಂಬಸ್ಥರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಡೆಯನ್ನು ನಟ್ವರ್ ಸಿಂಗ್ ಶ್ಲಾಘಿಸಿದರು. 'ಪ್ರಿಯಾಂಕಾ ಅವರನ್ನು ಮಾರ್ಗಮಧ್ಯೆ ಪೊಲೀಸರು ತಡೆದರೂ, ಅವರು ಅಂಜದೆ ಸಂತ್ರಸ್ತರನ್ನು ಭೇಟಿ ಮಾಡಿ ತಾವು ಏನು ಮಾಡಬೇಕು ಅಂದುಕೊಂಡಿದ್ದರೋ ಅದನ್ನೇ ಮಾಡಿದರು. ಅದು ಶ್ಲಾಘನೀಯ' ಎಂದು ಸಿಂಗ್ ಹೇಳಿದರು.

Congress veteran Natwar Singh bats for Priyanka Gandhi as party chief

"ಗಾಂಧಿ ಕುಟುಂಬದ ಹೊರಗಿನವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆನ್ನುವ ರಾಹುಲ್ ಗಾಂಧಿ ಅವರ ನಿರ್ಧಾರವನ್ನು ಅವರು ಬದಲಿಸಿಕೊಳ್ಳಬೇಕು. ಅವರ ಕುಟುಂಬಕ್ಕೆ ಮಾತ್ರವೇ ಈ ಸ್ಥಾನವನ್ನು ತುಂಬುವ ಸಾಮರ್ಥ್ಯವಿರುವುದು. ಏಕೆಂದರೆ ಗಾಂಧಿ ಕುಟುಂಬದ ಹೊರಗಿನವರು ಈ ಸ್ಥಾನ ಅಲಂಕರಿಸಿದರೆ 24 ಗಂಟೆಗಳಲ್ಲಿ ಕಾಂಗ್ರೆಸ್ ಛಿದ್ರವಾಗುತ್ತದೆ" ಎಂದು ನಟ್ವರ್ ಸಿಂಗ್ ಎಚ್ಚರಿಕೆ ನೀಡಿದರು.

ಪ್ರಿಯಾಂಕಾ ಗಾಂಧಿ ವಾದ್ರಾ ಹೆಗಲಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ?!ಪ್ರಿಯಾಂಕಾ ಗಾಂಧಿ ವಾದ್ರಾ ಹೆಗಲಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ?!

"134 ವರ್ಷ ಹಳೆಯ ಪಕ್ಷಕ್ಕೆ ಅಧ್ಯಕ್ಷರಿಲ್ಲ ಎಂದರೆ ದುರದೃಷ್ಟವೇ ಸರಿ. ನಾನು ಗಾಂಧಿ ಕುಟುಂಬದ ಹೊರತಾಗಿ ಚಿಂತಿಸುವುದಕ್ಕೂ ಹೋಗುವುದಿಲ್ಲ. ಅವರ ಕುಟುಂಬದಿಂದಲೇ ಯಾರನ್ನಾದರೂ ಅಧ್ಯಕ್ಷರನ್ನಾಗಿ ಮಾಡಬೇಕು" ಎಂದು ಸಿಂಗ್ ಹೇಳಿದರು.

ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುತ್ರ ಅನಿಲ್ ಶಾಸ್ತ್ರಿ ಸಹ ಕಾಂಗ್ರೆಸ್ ಅಧ್ಯಕ್ಷ ಪ್ರಿಯಾಂಕಾ ಗಾಂಧಿ ಅವರನ್ನೇ ನೇಮಿಸುವಂತೆ ಸಲಹೆ ನೀಡಿದ್ದರು. ಅವರಿಗೆ ಈ ಹುದ್ದೆಯನ್ನು ನಿಭಾಯಿಸುವ ಸಾಮರ್ಥ್ಯವಿದೆ ಎಂದಿದ್ದರು.

ಜೊತೆಗೆ ಈಗಾಗಲೇ ಕಾಂಗ್ರೆಸ್ ನ ಕಾರ್ಯಕರ್ತರು, ಹಲವು ನಾಯಕರೂ ಇದೇ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

English summary
Congress veteran Natwar Singh said, non Gandhi chief will cause Congress to split withing 24 hours, he bats for Priyanka Gandhi Vadra as party chief
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X