ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

11 ಕೇಂದ್ರ ಸಚಿವರ ಟ್ವೀಟ್‌ಗೆ 'ಮ್ಯಾನಿಪುಲೆಟೆಡ್ ಮೀಡಿಯಾ' ಟ್ಯಾಗ್‌ ಮಾಡಿ- ಕಾಂಗ್ರೆಸ್‌ ಆಗ್ರಹ

|
Google Oneindia Kannada News

ನವದೆಹಲಿ, ಮೇ 25: ಪಕ್ಷದ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರ ಮಾಡಿದ ಆರೋಪದ ಮೇಲೆ ಹಲವಾರು ಕೇಂದ್ರ ಸಚಿವರ ಟ್ವೀಟ್‌ಗಳಿಗೆ 'ಮ್ಯಾನಿಪುಲೆಟೆಡ್ ಮೀಡಿಯಾ' ಎಂದು ಟ್ಯಾಗ್ ಮಾಡಬೇಕೆಂದು ಕಾಂಗ್ರೆಸ್ ಮಂಗಳವಾರ ಒತ್ತಾಯಿಸಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ವಕ್ತಾರ ರಣ್‌ದೀಪ್‌ ಸಿಂಗ್‌ ಸುರ್ಜೆವಾಲಾ ಈ ಬಗ್ಗೆ ಟ್ವೀಟ್‌ ಮಾಡಿದ್ದು, ಟ್ವೀಟರ್‌ನ ವಿಜಯ ಗಡ್ಡೆ ಮತ್ತು ಉಪ ಪ್ರಧಾನ ಸಲಹೆಗಾರ ಜಿಮ್ ಬೇಕರ್‌ಗೆ ಪತ್ರ ಬರೆದಿದ್ದಾರೆ. '

ಸತ್ಯ ಎಂದಿಗೂ ನಿರ್ಭಯ; ಟೂಲ್‌ಕಿಟ್‌ ಆರೋಪಕ್ಕೆ ರಾಹುಲ್ ಎದುರೇಟುಸತ್ಯ ಎಂದಿಗೂ ನಿರ್ಭಯ; ಟೂಲ್‌ಕಿಟ್‌ ಆರೋಪಕ್ಕೆ ರಾಹುಲ್ ಎದುರೇಟು

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಅದರ ನಾಯಕರ ವಿರುದ್ಧ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ಗಳ ಮೂಲಕ ಅಪಾಯಕಾರಿ, ಸುಳ್ಳು ಮತ್ತು ಕಲ್ಪಿತ ವಿಚಾರಗಳನ್ನು ಹರಡುವ ಮೂಲಕ ಅನಗತ್ಯ ಮತ್ತು ತಪ್ಪಾದ ರಾಜಕೀಯ ಲಾಭವನ್ನು ಪಡೆಯಲು ಕೆಲವು ಬಿಜೆಪಿ ನಾಯಕರು ನಕಲಿ ಟೂಲ್‌ಕಿಟ್ ದಾಖಲೆಯ ಸುದ್ದಿ ಸೃಷ್ಟಿಸಿದ್ದಾರೆ ಎಂದು ಸುರ್ಜೆವಾಲಾ ಆರೋಪಿಸಿದರು.

Congress urges Twiiter to affix manipulative media tag on 11 Union ministers tweets

ಈ ಸಂಬಂಧ ಗಿರಿರಾಜ್ ಸಿಂಗ್, ಪಿಯೂಷ್ ಗೋಯಲ್, ಸ್ಮೃತಿ ಇರಾನಿ, ರವಿಶಂಕರ್ ಪ್ರಸಾದ್, ಪ್ರಹ್ಲಾದ್ ಜೋಶಿ, ಧರ್ಮೇಂದ್ರ ಪ್ರಧಾನ್, ರಮೇಶ್ ಪೋಖ್ರಿಯಾಲ್ ನಿಶಾಂಕ್, ತವಾರ್‌ಚಂದ್‌ ಗೆಹ್ಲೋಟ್, ಹರ್ಷ ವರ್ಧನ್, ಮುಖ್ತಾರ್ ಅಬ್ಬಾಸ್ ನಖ್ಕ್ವಿ ವಿರುದ್ದ ಕಾಂಗ್ರೆಸ್‌ ಕ್ರಮಕ್ಕೆ ಆಗ್ರಹಿಸಿದ್ದು ಈ ಸಚಿವರುಗಳು ತಿರುಚಿದ ವಿಚಾರವನ್ನು ಹಂಚಿದ್ದಾರೆ ಎಂದು ಹೇಳಿದ್ದಾರೆ.

ಜನರು 'ನಿಜ' ಎಂದು ನಂಬಬೇಕೆಂಬ ಕಾರಣಕ್ಕೆ ಕೇಂದ್ರ ಸಚಿವರುಗಳೇ ಸುಳ್ಳು ಸುದ್ದಿಯನ್ನು ಹಚ್ಚುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನಾಯಕ, ಹೀಗಾಗಿ ಬಿಜೆಪಿಯೇ ಸೃಷ್ಟಿಸಿ ಕಾಂಗ್ರೆಸ್‌ನ ಟೂಲ್‌ಕಿಟ್‌ ಎಂದು ಹೇಳುತ್ತಿರುವ ಈ ಟೂ‌ಲ್‌ಕಿಟ್‌ ವಿಚಾರದಲ್ಲಿ ಕೇಂದ್ರ ಸಚಿವರುಗಳು ಮಾಡಿರುವ ಟ್ವೀಟ್‌ಗೆ 'ಮ್ಯಾನಿಪುಲೆಟೆಡ್ ಮೀಡಿಯಾ' ಎಂದು ಟ್ಯಾಗ್‌ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಟೂಲ್ ಕಿಟ್ ಪ್ರಕರಣ: ದೆಹಲಿ ಟ್ವಿಟ್ಟರ್ ಕಚೇರಿ ಮೇಲೆ ಪೊಲೀಸರ ದಾಳಿಟೂಲ್ ಕಿಟ್ ಪ್ರಕರಣ: ದೆಹಲಿ ಟ್ವಿಟ್ಟರ್ ಕಚೇರಿ ಮೇಲೆ ಪೊಲೀಸರ ದಾಳಿ

ಇದಕ್ಕೂ ಮೊದಲು ಬಿಜೆಪಿ ನಾಯಕರಾದ ಸಂಬಿತ್ ಪಾತ್ರಾ ಮತ್ತು ಗಜೇಂದ್ರ ಸಿಂಗ್ ಶೇಖಾವತ್ ಟ್ವೀಟ್‌ಗಳನ್ನು ಟ್ವೀಟರ್‌ ಮ್ಯಾನಿಪುಲೆಟೆಡ್ ಮೀಡಿಯಾ ಎಂದು ಟ್ಯಾಗ್ ಮಾಡಿದೆ

ಕಾಂಗ್ರೆಸ್ ಟೂಲ್‌ಕಿಟ್ ಬಗ್ಗೆ "ಸುಳ್ಳು" ಮಾಹಿತಿಯನ್ನು ಹರಡಿದ ಆರೋಪದ ಮೇಲೆ ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕಾಂಗ್ರೆಸ್ ಈ ಹಿಂದೆ ದೆಹಲಿ ಪೊಲೀಸರಿಗೆ ದೂರು ನೀಡಿತ್ತು.

"ಕಾಂಗ್ರೆಸ್ ಟೂಲ್‌ಕಿಟ್" ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರಾ ಮಾಡಿದ್ದ ಟ್ವೀಟ್‌ಗೆ "ತಿರುಚಿದ ಮಾಧ್ಯಮ" (ಮ್ಯಾನಿಪುಲೆಟೆಡ್ ಮೀಡಿಯಾ) ಎಂದು ಟ್ವಿಟರ್ ಟ್ಯಾಗ್ ಮಾಡಿದ್ದಕ್ಕೆ ವಿವರಣೆ ಪಡೆಯಲು ದೆಹಲಿ ಪೊಲೀಸರು ಸೋಮವಾರ ಸಂಜೆ ದೆಹಲಿಯ ಟ್ವಿಟರ್ ಕಚೇರಿಗೆ ಭೇಟಿ ನೀಡಿದ್ದರು. ಆದರೆ, ಕೋವಿಡ್ ಲಾಕ್‌ಡೌನ್ ಕಾರಣದಿಂದ ಎಲ್ಲರೂ ಮನೆಯಿಂದ ಕೆಲಸ ಮಾಡುತ್ತಿರುವ ಕಾರಣಕ್ಕೆ ಟ್ವಿಟರ್ ಕಚೇರಿಯಲ್ಲಿ ಯಾರೂ ಪೊಲೀಸರಿಗೆ ಲಭ್ಯವಾಗಿಲ್ಲ ಎಂದು ವರದಿಯಾಗಿದೆ.

English summary
Congress urges Twiiter to affix 'manipulative media' tag on 11 Union ministers' tweets. Congress general secretary Randeep Surjewala wrote letter to Twitter Chiefs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X