ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ನಿಂದ ಮೋದಿ ಜನ್ಮದಿನವೇ “ರಾಷ್ಟ್ರೀಯವಾಗಿ ನಿರುದ್ಯೋಗ ದಿನ" ಆಚರಣೆ

|
Google Oneindia Kannada News

ಪ್ರಧಾನಿ ಮೋದಿಯವರ ಜನ್ಮದಿನದಂದು ಕಾಂಗ್ರೆಸ್‌ ಹಾಗೂ ಯುವ ಕಾಂಗ್ರೆಸ್ 'ರಾಷ್ಟ್ರೀಯ ನಿರುದ್ಯೋಗಿಗಳ ದಿನ' ಆಚರಿಸಲಿದೆ. ಈ ನಿರುದ್ಯೋಗಿಗಳ ದಿನಾಚರಣೆಯನ್ನು ಯಶಸ್ವಿಗೊಳಿಸಲು ಯುವ ಕಾಂಗ್ರೆಸ್ ಮುಖಂಡರು ದೇಶದ ನಿರುದ್ಯೋಗವನ್ನು ಹೋಗಲಾಡಿಸಲು ನಿರುದ್ಯೋಗ ದಿನವನ್ನು ಆಚರಿಸುತ್ತಿದೆ ಎಂದು ಹೇಳಿಕೊಂಡಿದ್ದು, ದೇಶದ ಯುವಕರಿಗೆ ಕರೆ ನೀಡಿದೆ. ದೇಶದಲ್ಲಿ ನಿರುದ್ಯೋಗ 45 ವರ್ಷಗಳಿಂದ ಉತ್ತುಂಗದಲ್ಲಿದೆ ಮತ್ತು ಯುವಕರ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳುವುದು ಭಾರತ್ ಜೋಡೋ ಯಾತ್ರೆಯ ಪ್ರಾಥಮಿಕ ಉದ್ದೇಶಗಳಲ್ಲಿ ಒಂದಾಗಿದೆ ಎಂದು ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದರಿಂದ, ಕಾಂಗ್ರೆಸ್ ಶನಿವಾರ ಪ್ರಧಾನಿ ನರೇಂದ್ರ ಮೋದಿ ಜನ್ಮದಿನವನ್ನೇ "ರಾಷ್ಟ್ರೀಯವಾಗಿ ನಿರುದ್ಯೋಗ ದಿನ". ಆಚರಿಸಲು ನಿರ್ಧರಿಸಿದೆ.

 ಇಂದು ಕಾಂಗ್ರೆಸ್‌ನಿಂದ ನಿರುದ್ಯೋಗ ದಿನ ಆಚರಣೆ

ಇಂದು ಕಾಂಗ್ರೆಸ್‌ನಿಂದ ನಿರುದ್ಯೋಗ ದಿನ ಆಚರಣೆ

ಪ್ರಧಾನಿ ಮೋದಿಯವರ ಹುಟ್ಟುಹಬ್ಬವನ್ನು ಐತಿಹಾಸಿಕ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಭಾರತ್ ಜೋಡೋ ಯಾತ್ರೆಯ ಎಂಟನೇ ದಿನದ ಅಂತ್ಯದಲ್ಲಿ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ದ್ವೇಷದ ರಾಜಕೀಯದಿಂದಾಗಿ ಭಾರತವು ತನ್ನ ಅತ್ಯಂತ ಕೆಟ್ಟ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ.

ದ್ವೇಷದಿಂದ ತುಂಬಿರುವ ರಾಷ್ಟ್ರವು ಪ್ರಗತಿಯ ದೃಷ್ಟಿಯನ್ನು ಹೊಂದಲು ಸಾಧ್ಯವಿಲ್ಲ ಎಂದು ಅವರು ಹೇಳಿದರು, ಯಾತ್ರೆಯಲ್ಲಿ ಸೇರುವ ಲಕ್ಷಾಂತರ ಜನರು ಆರ್‌ಎಸ್‌ಎಸ್-ಬಿಜೆಪಿಗೆ ಈ ದೇಶವನ್ನು ನಾಶಮಾಡಲು ಬಿಡುವುದಿಲ್ಲ ಎಂಬ ಸಂದೇಶವನ್ನು ಕಳುಹಿಸಲು ಬಯಸುತ್ತಾರೆ ಎಂದು ಕಾಂಗ್ರೆಸ್‌ ನಾಯಕ ಪ್ರತಿಪಾದಿಸಿದ್ದಾರೆ.

 ಯಾಕೆ ಈ ಕಾಂಗ್ರೆಸ್‌ ಭಾರತ್ ಜೋಡೋ?

ಯಾಕೆ ಈ ಕಾಂಗ್ರೆಸ್‌ ಭಾರತ್ ಜೋಡೋ?

"ಒಮ್ಮೆ ನಾವು ದೇಶವನ್ನು ಒಂದುಗೂಡಿಸಿದಾಗ, ನಾವು ಸಾಮರಸ್ಯವನ್ನು ತಂದಾಗ, ನಾವು ನಿರುದ್ಯೋಗ ಮತ್ತು ಬೆಲೆ ಏರಿಕೆಯ ಸಮಸ್ಯೆಗಳನ್ನು ಪರಿಹರಿಸಬಹುದು. ಮುಖ್ಯ ವಿಷಯವೆಂದರೆ ದ್ವೇಷ ಮತ್ತು ಪ್ರಗತಿಯ ನಡುವೆ ಸಂಬಂಧವಿದೆ ಎಂದು ಅರ್ಥಮಾಡಿಕೊಳ್ಳುವುದು" ಅಗತ್ಯ . ಈ ಭಾರತ್ ಜೋಡೋ ಯಾತ್ರೆಯ ವೇಳೆ ಅಪಾರ ಜನಸ್ತೋಮವನ್ನು ಸೆಳೆಯುತ್ತಿರುವ ರಾಹುಲ್ ಅವರು ಫೇಸ್‌ಬುಕ್‌ನಲ್ಲಿ ಈ ಸಂದೇಶವನ್ನು ಪೋಸ್ಟ್ ಹೀಗೆ ಮಾಡಿದ್ದಾರೆ: "ನಮ್ಮದು ಯುವ ದೇಶ. ನಾವು ಯುವಕರ ರೂಪದಲ್ಲಿ ವಿಶಿಷ್ಟ ಶಕ್ತಿಯನ್ನು ಹೊಂದಿದ್ದೇವೆ. ನಮ್ಮ ಯುವಕರ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ನಮ್ಮ ದೇಶವು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದಬಹುದು. ಆದರೆ ನಾವು ನಿರುದ್ಯೋಗದಲ್ಲಿ 45 ವರ್ಷಗಳ ಏರಿಕೆ ಪ್ರಮಾನವನ್ನು ಎದುರಿಸುತ್ತಿದ್ದೇವೆ" ವಿದ್ಯಾವಂತ ಯುವಕರು ಉದ್ಯೋಗ ಅರಸಿ ಅಲೆದಾಡುತ್ತಿದ್ದಾರೆ. ಅವರು ಹತಾಶತೆಯ ಹಿಡಿತದಲ್ಲಿದ್ದಾರೆ. ನಮ್ಮ ಯುವಕರ ಬೆನ್ನೆಲುಬನ್ನು ಬಲಪಡಿಸುವುದು, ಅವರನ್ನು ರಚನಾತ್ಮಕ ಹಾದಿಯಲ್ಲಿ ಕೊಂಡೊಯ್ಯುವುದು ನಮ್ಮ ಕರ್ತವ್ಯ ಹಾಗೂ ಇಂದಿನ ಅಗತ್ಯವಾಗಿದೆ ಎಂದು ರಾಹುಲ್‌ ಗಾಂಧಿ ಹೇಳಿಕೊಂಡಿದ್ದಾರೆ.

 ಲಕ್ಷಗಟ್ಟಲೆ ಭಾರತೀಯರು ನಿರುದ್ಯೋಗಿಗಳಾಗಿದ್ದಾರೆ

ಲಕ್ಷಗಟ್ಟಲೆ ಭಾರತೀಯರು ನಿರುದ್ಯೋಗಿಗಳಾಗಿದ್ದಾರೆ

ದೇಶದಲ್ಲಿ ನಿರುದ್ಯೋಗ ಪ್ರಮಾಣ ಅತ್ಯಧಿಕ ಮಟ್ಟದಲ್ಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಬಿಜೆಪಿ ಸರ್ಕಾರ ಶ್ರೀಮಂತರನ್ನು ಉಳಿಸಲು ಮಾತ್ರ ಆಸಕ್ತಿ ಹೊಂದಿದೆ. ಭಾರತ್ ಜೋಡೋ ಯಾತ್ರೆಯು ಹಣದುಬ್ಬರ, ನಿರುದ್ಯೋಗ ಮತ್ತು ಕೈಗಾರಿಕೋದ್ಯಮಿಗಳೊಂದಿಗೆ ಸಂಪರ್ಕವಿದೆ ಎಂದು ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು ದೇಶದಲ್ಲಿ ನಿರುದ್ಯೋಗ ದರ ಹೆಚ್ಚಳದ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಅನ್ನು ಗುರಿಯಾಗಿಸಿದ್ದಾರೆ. ಕೇಂದ್ರದ ಮೋದಿ ಸರ್ಕಾರವು ದೇಶದ ಕೆಲವು ಕೈಗಾರಿಕೋದ್ಯಮಿಗಳನ್ನು ರಕ್ಷಿಸಲು ಮಾತ್ರ ಆಸಕ್ತಿ ಹೊಂದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಭಾರತ್ ಜೋಡೋ ಯಾತ್ರೆಯ ಒಂಬತ್ತನೇ ದಿನದಂದು ಕರುನಾಗಪಲ್ಲಿಯಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಈ ದೇಶದ ನಾಯಕನಿಗೆ ಹತ್ತಿರವಾಗಿದ್ದಾರೆ. ಅವರು ಹೇಳಿದರು, 'ನಾನೊಂದು ಸರಳವಾದ ಪ್ರಶ್ನೆಯನ್ನು ಕೇಳುತ್ತೇನೆ. ಭಾರತವು ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯನ್ನು ಹೊಂದಿದ್ದರೆ, ನಾವು ಅತಿ ಹೆಚ್ಚು ನಿರುದ್ಯೋಗ ದರವನ್ನು ಏಕೆ ಹೊಂದಿದ್ದೇವೆ ?, ಲಕ್ಷಗಟ್ಟಲೆ ಭಾರತೀಯರು ನಿರುದ್ಯೋಗಿಗಳಾಗಿದ್ದಾರೆ, ಇದಕ್ಕೆ ಕಾರಣ ಸರ್ಕಾರವು ಕೆಲವೇ ಕೈಗಾರಿಕೋದ್ಯಮಿಗಳನ್ನು ಉಳಿಸಲು ಆಸಕ್ತಿ ಹೊಂದಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

 ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ

ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ

ಸಾರ್ವಜನಿಕ ವಲಯದ ಕಂಪನಿಗಳ ಹೂಡಿಕೆ ಮತ್ತು ಖಾಸಗೀಕರಣದಿಂದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು. ರಾಹುಲ್ ಗಾಂಧಿ, 'ಈ ಸಾರ್ವಜನಿಕ ವಲಯದ ಉದ್ಯಮಗಳನ್ನು ಯಾರು ತೆಗೆದುಕೊಳ್ಳುತ್ತಿದ್ದಾರೆ? ಈ ಸರ್ಕಾರದಿಂದ ಲಾಭ ಪಡೆಯುತ್ತಿರುವ ದೇಶದ ಐದಾರು ಕೈಗಾರಿಕೋದ್ಯಮಿಗಳ ಬಳಿಗೆ ಹೋಗುತ್ತಿದ್ದಾರೆ.

English summary
Bharat Jodo Yatra: Congress to observe Modi’s birthday as 'National Unemployment Day' Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X