• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಾರ್ವತ್ರಿಕ ಚುನಾವಣಾ ಪ್ರಚಾರಕ್ಕೆ ಕೋಟಿ ಕೋಟಿ ಖರ್ಚು ಮಾಡಿದ ಕಾಂಗ್ರೆಸ್

|

ನವದೆಹಲಿ, ನವೆಂಬರ್.08: ಲೋಕಸಭಾ ಚುನಾವಣೆ ಮುಗಿದು ಎನ್ ಡಿಎ ಸರ್ಕಾರ ರಚಿಸಿದ್ದು ಆಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡನೇ ಬಾರಿ ಆಡಳಿತ ಶುರು ಮಾಡಿದ್ದು ಆಗಿದೆ. ಇದೀಗ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಪ್ರಚಾರಕ್ಕೆ ಖರ್ಚು ಮಾಡಿರುವ ಮೊತ್ತ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.

ಕಳೆದ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಪಕ್ಷಗಳೂ ಪ್ರಚಾರಕ್ಕಾಗಿ ಭಾರಿ ಮೊತ್ತವನ್ನೇ ಖರ್ಚು ಮಾಡಿವೆ. ಈ ಪೈಕಿ ಕಾಂಗ್ರೆಸ್ ತನ್ನ ಚುನಾವಣಾ ವೆಚ್ಚದ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಲೆಕ್ಕ ನೀಡಿದೆ. ಅದು 2014ರ ಚುನಾವಣಾ ವೆಚ್ಚಕ್ಕಿಂತ ಹೆಚ್ಚಾಗಿದೆ. ಈಗ ಕಾಂಗ್ರೆಸ್ ಸಲ್ಲಿಸಿರುವ ದಾಖಲೆಗಳು ಇದೀಗ ಸಾಕಷ್ಟು ಚರ್ಚೆ ಎಡೆಮಾಡಿ ಕೊಟ್ಟಿದೆ.

ಲೋಕಸಭೆ ಚುನಾವಣೆ ಕಾಂಗ್ರೆಸ್ ಸೋಲಿಗೆ 7 ಕಾರಣಗಳು

2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 516 ಕೋಟಿ ರೂಪಾಯಿ ವೆಚ್ಚ ಮಾಡಿತ್ತು. ಇನ್ನು, ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಗಿಂತಲೂ ಅಧಿಕ ಹಣವನ್ನು ಪ್ರಚಾರಕ್ಕಾಗಿ ವ್ಯಯ ಮಾಡಿತ್ತು. ಅಂದರೆ 2014ರಲ್ಲಿಯೇ ಬಿಜೆಪಿ ಚುನಾವಣಾ ವೆಚ್ಚ 714 ಕೋಟಿ ರೂಪಾಯಿ ಆಗಿತ್ತು. ಈಗ ಕಾಂಗ್ರೆಸ್ ಕೇಂದ್ರ ಚುನಾವಣಾ ಆಯೋಗಕ್ಕೆ ನೀಡಿರುವ ಲೆಕ್ಕದ ಪ್ರಕಾರ ಕಳೆದ ಬಾರಿಗಿಂತಲೂ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕ ಹಣವನ್ನು ಖರ್ಚು ಮಾಡಿರುವುದಾಗಿ ತಿಳಿಸಿದೆ.

ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಲೆಕ್ಕ

ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಲೆಕ್ಕ

ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಇತ್ತೀಚಿಗೆ ತನ್ನ ಚುನಾವಣಾ ವೆಚ್ಚದ ಕುರಿತು ಲೆಕ್ಕ ನೀಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟಾರೆ 820 ಕೋಟಿ ರೂಪಾಯಿ ವೆಚ್ಚ ಮಾಡಿರುವುದಾಗಿ ಮಾಹಿತಿ ನೀಡಿದೆ. ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯಕ್ಕಾಗಿ 626.3 ಕೋಟಿ ರೂಪಾಯಿ, ಅಭ್ಯರ್ಥಿಗಳಿಗಾಗಿ 193.9 ಕೋಟಿ ರೂಪಾಯಿ ವ್ಯಯ ಮಾಡಲಾಗಿದೆ. ಈ ಪೈಕಿ 573 ಕೋಟಿ ರೂಪಾಯಿ ಹಣವನ್ನು ಚೆಕ್ ಮೂಲಕ ನೀಡಲಾಗಿದೆ. ಕೇವಲ 14.33 ಕೋಟಿ ಹಣವನ್ನು ನಗದು ರೂಪದಲ್ಲಿ ನೀಡಲಾಗಿದೆ. ಇನ್ನು, ಮಾಧ್ಯಮಗಳಲ್ಲಿ ಪ್ರಚಾರಕ್ಕಾಗಿ 356 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.

ಇದಿಷ್ಟೇ ಅಲ್ಲದೇ, ಲೋಕಸಭಾ ಚುನಾವಣೆಯಲ್ಲಿ ಪ್ರಚಾರದ ಪೋಸ್ಟರ್ ಗಾಗಿ 47 ಕೋಟಿ ರೂಪಾಯಿ, ಸ್ಟಾರ್ ಪ್ರಚಾರಕರ ಪ್ರಯಾಣ ವೆಚ್ಚಕ್ಕಾಗಿ 86.82 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಈ ಪೈಕಿ ಛತ್ತೀಸ್ ಗಢ ಹಾಗೂ ಒಡಿಶಾದಲ್ಲಿ 40 ಕೋಟಿ ರೂಪಾಯಿ, ಉತ್ತರ ಪ್ರದೇಶದಲ್ಲಿ 36 ಕೋಟಿ ರೂಪಾಯಿ, ಮಹಾರಾಷ್ಟ್ರದಲ್ಲಿ 18 ಕೋಟಿ ರೂಪಾಯಿ, ಪಶ್ಚಿಮ ಬಂಗಾಳದಲ್ಲಿ 15 ಕೋಟಿ ರೂಪಾಯಿ ಹಾಗೂ ಕೇರಳದಲ್ಲಿ 13 ಕೋಟಿ ರೂಪಾಯಿ ಖರ್ಚು ಮಾಡಿರುವುದಾಗಿ ಮಾಹಿತಿ ನೀಡಿದೆ.

ಚರ್ಚೆಗೆ ಗ್ರಾಸವಾಗಿತ್ತು ಅದೊಂದು ಟ್ವೀಟ್

ಚರ್ಚೆಗೆ ಗ್ರಾಸವಾಗಿತ್ತು ಅದೊಂದು ಟ್ವೀಟ್

ಭಾರತೀಯ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರಾಗಿದ್ದ ದಿವ್ಯ ಸ್ಪಂದನ ಈ ಹಿಂದೆ ಮಾಡಿದ್ದ ಟ್ವೀಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಖರ್ಚು ಮಾಡಲು ತಮ್ಮ ಬಳಿ ಹಣವೇ ಇಲ್ಲ. ಪಕ್ಷದಿಂದ ಯಾವುದೇ ರೀತಿಯ ಫಂಡ್ ಬಂದಿಲ್ಲ ಎಂದು ಸಾರ್ವಜನಿಕವಾಗಿ ಟ್ವೀಟ್ ಮಾಡಿದ್ದರು. ಇದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ದಿವ್ಯಸ್ಪಂದನ ಟ್ವೀಟ್ ಗೆ ಸ್ವತಃ ಕಾಂಗ್ರೆಸ್ ನಾಯಕರೆ ನಿಗಿನಿಗಿ ಕೆಂಡ ಕಾರಿದ್ದರು.

ಲೆಕ್ಕ ಇನ್ನೂ ಸಿಕ್ಕಿಲ್ಲ!

ಲೆಕ್ಕ ಇನ್ನೂ ಸಿಕ್ಕಿಲ್ಲ!

ಕಾಂಗ್ರೆಸ್ ಬರೋಬ್ಬರಿ 820 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿರುವ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಲೆಕ್ಕವನ್ನು ನೀಡಿದೆ. ಆದರೆ, ಭಾರತೀಯ ಜನತಾ ಪಕ್ಷ ಇನ್ನೂ ಕೂಡಾ ಯಾವುದೇ ರೀತಿಯ ಮಾಹಿತಿಯನ್ನು ನೀಡಿಲ್ಲ. ಕೇಂದ್ರ ಚುನಾವಣಾ ಆಯೋಗಕ್ಕೆ ತನ್ನ ಚುನಾವಣಾ ವೆಚ್ಚದ ಬಗ್ಗೆ ಲೆಕ್ಕವನ್ನು ನೀಡಿಲ್ಲ ಎನ್ನಲಾಗಿದೆ. ಅಧಿಕಾರದಲ್ಲಿ ಇರದ ರಾಷ್ಟ್ರೀಯ ಪಕ್ಷವೇ 820 ಕೋಟಿ ರೂಪಾಯಿ ಹಣ ಖರ್ಚು ಮಾಡಿರುವಾಗ, ಬಿಜೆಪಿ ಅದಕ್ಕಿಂತಲೂ ಹೆಚ್ಚು ಹಣವನ್ನು ಚುನಾವಣೆಗೆ ಖರ್ಚು ಮಾಡಿರುವ ಸಾಧ್ಯತೆಗಳು ಹೆಚ್ಚಿವೆ. ಏಕಂದರೆ ಕಳೆದ 2014ರ ಚುನಾವಣೆಯಲ್ಲಿಯೇ ಬಿಜೆಪಿ ಕಾಂಗ್ರೆಸ್ ಗಿಂತ ಅಧಿಕ ಹಣವನ್ನು ಚುನಾವಣೆಗೆ ಖರ್ಚು ಮಾಡಿತ್ತು. ಅಂದು ಕಾಂಗ್ರೆಸ್ 516 ಕೋಟಿ ಖರ್ಚು ಮಾಡಿದ್ದರೆ, ಬಿಜೆಪಿ 714 ಕೋಟಿ ರೂಪಾಯಿ ಖರ್ಚು ಮಾಡಿತ್ತು.

ದೀದಿ ಖರ್ಚು ಮಾಡಿದ್ದೇ ಹೆಚ್ಚು

ದೀದಿ ಖರ್ಚು ಮಾಡಿದ್ದೇ ಹೆಚ್ಚು

ಕಳೆದ 2019ರ ಲೋಕಸಭಾ ಚುನಾವಣೆಯ ಖರ್ಚು ವೆಚ್ಚದಲ್ಲಿ ಇನ್ನುಳಿದ ರಾಜಕೀಯ ಪಕ್ಷಗಳು ಕೂಡಾ ಹಿಂದೆ ಬಿದ್ದಿಲ್ಲ. ಸ್ಥಳೀಯ ಪಕ್ಷಗಳು ಸಹ ಲೋಕಸಭಾ ಚುನಾವಣೆಯಲ್ಲಿ ಕೋಟಿ ಕೋಟಿ ಖರ್ಚು ಮಾಡಿವೆ. ಇದರಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷವೇ ಅಗ್ರಸ್ಥಾನದಲ್ಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ 83.6 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿದೆ. ಎನ್ ಸಿಪಿ 72.3 ಕೋಟಿ ರೂಪಾಯಿ, ಬಹುಜನ ಸಮಾಜವಾದಿ ಪಕ್ಷ 55.4 ಕೋಟಿ ರೂಪಾಯಿ, ಸಿಪಿಎಂ ಅತಿಕಡಿಮೆ ಅಂದರೆ 73.1 ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡಿದೆ.

English summary
2019 Lok Sabha Eletion Congress Spent 820 Crore. The National Party Filed The Election Expenditure Report For Election Commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X