ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿ ಯುವರಾಜನನ್ನು ಅಪ್ಪಿಕೊಂಡ ಮೋದಿಯಿಂದ ಯೋಧರಿಗೆ ಅವಮಾನ: ಕಾಂಗ್ರೆಸ್ ಆರೋಪ

|
Google Oneindia Kannada News

Recommended Video

Pulwama : ಸೌದಿ ಯುವರಾಜನನ್ನು ಅಪ್ಪಿಕೊಂಡ ಮೋದಿಯಿಂದ ಯೋಧರಿಗೆ ಅವಮಾನ | Oneindia Kannada

ನವದೆಹಲಿ, ಫೆಬ್ರವರಿ 20: ಸೌದಿಯ ಯುವರಾಜನನ್ನು ಅಪ್ಪಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಅವಮಾನ ಎಸಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಸೌದಿ ಯುವರಾಜನ ವೆಲ್ ಕಮ್ ಗೆ ಖುದ್ದು ಮೋದಿಯೇ ಏರ್ ಪೋರ್ಟ್ ಗೆ ಸೌದಿ ಯುವರಾಜನ ವೆಲ್ ಕಮ್ ಗೆ ಖುದ್ದು ಮೋದಿಯೇ ಏರ್ ಪೋರ್ಟ್ ಗೆ

ಶಿಷ್ಟಾಚಾರ ಮುರಿದು ಸೌದಿ ಯುವರಾಜನನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ತೆರಳಿದ್ದ ಪ್ರಧಾನಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

ಭಾರತದಲ್ಲಿ 44 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ‌ಮಾಡಲಿರುವ ಸೌದಿ ಭಾರತದಲ್ಲಿ 44 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ‌ಮಾಡಲಿರುವ ಸೌದಿ

ಪಾಕಿಸ್ತಾನಕ್ಕೆ ಕೋಟ್ಯಂತರ ಡಾಲರ್ ಹಣಕಾಸಿನ ನೆರವು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಆದರದಿಂದ ಸ್ವಾಗತಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹುತಾತ್ಮರು ಮತ್ತು ಪ್ರತಿ ಸೈನಿಕರಿಗೆ ಅವರ ಸೇವೆ ಹಾಗೂ ತ್ಯಾಗದ ಬಗ್ಗೆ ಹೇಗೆ ಆಲೋಚಿಸುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಟ್ವಿಟ್ಟರ್‌ನಲ್ಲಿ ಟೀಕಾಪ್ರಹಾರ ನಡೆಸಿದೆ.

ಭಾರತದ ಗಾಯಕ್ಕೆ ಉಪ್ಪು ಸವರಿದಂತೆ, ಇಮ್ರಾನ್ ಖಾನ್ ಮತ್ತು ಮೊಹಮ್ಮದ್ ಬಿನ್ ಸಲ್ಮಾನ್ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆ, ಹಿಂಸಾಚಾರವನ್ನು ಖಂಡಿಸುವ ಬದಲು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಪ್ರಯತ್ನಗಳನ್ನು ಶ್ಲಾಘಿಸಿದೆ. ಮಸೂದ್ ಅಜರ್‌ನನ್ನು ಜಾಗರಿಕ ಭಯೋತ್ಪಾದಕ ಎಂದು ಘೊಷಿಸಬೇಕು ಎಂಬ ನಮ್ಮ ಒತ್ತಾಯವನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ರಾಷ್ಟ್ರೀಯ ಹಿತಾಸಕ್ತಿ Vs ಮೋದಿ ಅವರ ಅಪ್ಪುಗೆ ನೀತಿ. ಪಾಕಿಸ್ತಾನಕ್ಕೆ 20 ಬಿಲಿಯನ್ ಡಾಲರ್ ನೀಡುವ ಭರವಸೆ ನೀಡಿದ ಮತ್ತು ಪಾಕಿಸ್ತಾನದ 'ಭಯೋತ್ಪಾದನಾ ನಿಗ್ರಹ' ಪ್ರಯತ್ನಗಳನ್ನು ಶ್ಲಾಘಿಸಿರುವವರಿಗೆ ಶಿಷ್ಟಾಚಾರ ಮುರಿದು ಭವ್ಯ ಸ್ವಾಗತ ನೀಡಲಾಗಿದೆ.

Congress slams Narendra Modi for hugging welcoming saudi crown prince pakistan

ಮೋದಿಜಿ, ಮಸೂದ್‌ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಬೇಕೆಂಬ ಭಾರತದ ಒತ್ತಾಯವನ್ನು ತಿರಸ್ಕರಿಸುತ್ತಿರುವ ಪಾಕಿಸ್ತಾನದ ಜತೆ ನೀಡಿರುವ ಜಂಟಿ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಸೌದಿ ಅರೇಬಿಯಾ ಮೇಲೆ ಒತ್ತಡ ಹೇರುವ ಧೈರ್ಯ ನಿಮಗಿದೆಯೇ? ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಪ್ರಶ್ನಿಸಿದ್ದಾರೆ.

English summary
Congress slams Prime Minister Narendra Modi for breaking protocal and welcoming Saudi Crown prince who promised Pakistan 20$ billions help. PM Modi has shown the country, the martyrs and every soldier in India what he thinks of their service & sacrifice, Congress criticised.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X