ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಸೂದ್ ಅಝರ್ ಪ್ರಕರಣ ಕೇಂದ್ರ ಸರ್ಕಾರದ ರಾಜತಾಂತ್ರಿಕ ದುರಂತ'

|
Google Oneindia Kannada News

ನವದೆಹಲಿ, ಮಾರ್ಚ್ 14: ಜೈಶ್ ಇ ಮೊಹಮ್ಮದ್ ನ ಮಸೂದ್ ಅಝರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಲಾಗದ್ದನ್ನು ಕೇಂದ್ರ ಸರ್ಕಾರದ ವೈಫಲ್ಯ ಎಂದು ಕಾಂಗ್ರೆಸ್ ಕರೆದಿದೆ.

ಮಸೂದ್ ಅಝರ್ ನನ್ನು ಜಾಗತಿಕ ಉಗ್ರ ಎಂದು ಕಪ್ಪುಪಟ್ಟಿಗೆ ಸೇರಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಂದೆ ಮಾಡಿದ್ದ ಪ್ರಸ್ತಾವಕ್ಕೆ ಚೀನಾ ಅಡ್ಡಗಾಲು ಹಾಕಿದ ಪರಿಣಾಮ ನಾಲ್ಕನೇ ಬಾರಿಗೆ ಆತನನ್ನು ಜಾಗತಿಕ ಉಗ್ರ ಎಂದು ಕರೆಯುವ ಪ್ರಯತ್ನ ವೈಫಲ್ಯ ಕಂಡಿದೆ.

ನಾಲ್ಕನೇ ಬಾರಿಗೆ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಅಜರ್ ನನ್ನು ರಕ್ಷಿಸಿದ ಚೀನಾನಾಲ್ಕನೇ ಬಾರಿಗೆ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಅಜರ್ ನನ್ನು ರಕ್ಷಿಸಿದ ಚೀನಾ

ಇದನ್ನು ಕೇಮದ್ರ ಸರ್ಕಾರದ 'ರಾಜತಾಂತ್ರಿಕ ದುರಂತ' ಎಂದು ಕರೆದಿರುವ ಕಾಂಗ್ರೆಸ್, ಮಸೂದ್ ಅಝರ್ ನ ರಕ್ಷಣೆಗೆ ನಿಂತ ಚೀನಾವನ್ನೂ ತರಾಟೆಗೆ ತೆಗೆದುಕೊಂಡಿದೆ.

Congress says, Masood Azhar issue is diplomatic disaster of NDA government

ಭಾರತದ ಎನ್ ಡಿಎ ಸರ್ಕಾರ ಈ ಸನ್ನಿವೇಶವನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲವಾಗಿದೆ, ವಿಶ್ವಸಂಸ್ಥೆಯ ಮುಂದೆ, ಅಝರ್ ನನ್ನು ಕಪ್ಪು ಪಟ್ಟಿಗೆ ಸೇರಿಸಲು ಪರಿಣಾಮಕಾರಿಯಾಗಿ ವಾದ ಮಾಡದ ಕಾರಣ ಇದು ಕೇಂದ್ರ ಸರ್ಕಾರದ್ದೇ ವೈಫಲ್ಯ ಎಂದು ಕಾಂಗ್ರೆಸ್ ದೂರಿದೆ.

ಮಸೂದ್ ಒಬ್ಬ ಜಾಗತಿಕ ಉಗ್ರ ಅಮೆರಿಕದಿಂದ ಘೋಷಣೆ ಮಾತ್ರ ಬಾಕಿಮಸೂದ್ ಒಬ್ಬ ಜಾಗತಿಕ ಉಗ್ರ ಅಮೆರಿಕದಿಂದ ಘೋಷಣೆ ಮಾತ್ರ ಬಾಕಿ

ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾರತೀಯ ಸೇನೆಯ ನಲವತ್ತಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಈ ಘಟನೆಯ ಹೊಣೆಯನ್ನು ಸ್ವತಃ ಮಸೂದ್ ಅಝರ್ ಒಪ್ಪಿಕೊಂಡಿದ್ದ. ಪಾಕಿಸ್ತಾನ ಮೂಲದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಮೂಲಕವೇ ಈ ಘಟನೆ ನಡೆದಿದೆ ಎಂದಿದ್ದ. ಸಾಕಷ್ಟು ಉಗ್ರದಾಳಿಯ ಹೊಣೆ ಹೊತ್ತಿದ್ದರೂ ಆತನನ್ನು ಜಾಗತಿಕ ಉಗ್ರ ಎಂದು ಕತರೆಯಲು ಚೀನಾ ಒಪ್ಪುತ್ತಿಲ್ಲ. ಭಾರತದ ಮೇಲೆ ಸೇಡು ತೀರಿಸಿಕೊಳ್ಳುವ ಒಂದೇ ಒಂದು ಕಾರಣಕ್ಕೆ ಈ ಮೂಲಕ ಭಯೋತ್ಪಾದನೆಯ ಬೆಂಬಲಕ್ಕೆ ಚೀನಾ ನಿಂತಿದೆ.

English summary
Congress said, failure in designating Jaish e Mohammad chief Masood Azhar as a global terrorist is diplomatic disaster of PM Modi government
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X