• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜೀವ್ ಗಾಂಧಿ ಹತ್ಯೆಯ ಅಪರಾಧಿಯ ಬಿಡುಗಡೆಗೆ ಕಾಂಗ್ರೆಸ್ ಪ್ರತಿಕ್ರಿಯೆ

|
Google Oneindia Kannada News

ನವದೆಹಲಿ, ಮೇ 18: "ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ನಾವು ತೀವ್ರ ದುಃಖಿತರಾಗಿದ್ದೇವೆ; ಮಾಜಿ ಪ್ರಧಾನಿಯನ್ನು ಕೊಂದ ಭಯೋತ್ಪಾದಕರು ಮತ್ತು ಹಂತಕರ ಬಿಡುಗಡೆಯ ಬಗ್ಗೆ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ಪ್ರಾಮಾಣಿಕವಾಗಿರಬೇಕು" ಎಂದು ರಾಜೀವ್ ಗಾಂಧಿ ಹತ್ಯೆಯ ಅಪರಾಧಿಯ ಬಿಡುಗಡೆಗೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ.

ಪೇರರಿವಾಳನ್‌ಗೆ ಜೈಲಿನಿಂದ ಮುಕ್ತಿ: ರಾಜೀವ್ ಗಾಂಧಿ ಹತ್ಯೆ ನಂತರದ ಘಟನೆಗಳ ಟೈಮ್‌ಲೈನ್ಪೇರರಿವಾಳನ್‌ಗೆ ಜೈಲಿನಿಂದ ಮುಕ್ತಿ: ರಾಜೀವ್ ಗಾಂಧಿ ಹತ್ಯೆ ನಂತರದ ಘಟನೆಗಳ ಟೈಮ್‌ಲೈನ್

ತಮಿಳುನಾಡಿನ ಕಾಂಗ್ರೆಸ್ ಘಟಕ ಕೂಡ ಪೇರರಿವಾಳನ್ ಬಿಡುಗಡೆಗೆ ಅಸಮಾಧಾನ ವ್ಯಕ್ತಪಡಿಸಿದೆ. "ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಏಳು ಮಂದಿಯನ್ನು ಅಪರಾಧಿ ಎಂದು ಹೇಳಿದ್ದ ಇದೇ ಸುಪ್ರೀಂ ಕೋರ್ಟ್ ಇದೀಗ ಕೆಲ ಕಾನೂನು ಅಂಶಗಳನ್ನು ಉಲ್ಲೇಖಿಸಿ ಪೇರರಿವಾಳನ್‌ನನ್ನು ಬಿಡುಗಡೆ ಮಾಡಿದೆ" ಎಂದು ಹೇಳಿದ ಕೆಎಸ್ ಅಳಗಿರಿ, ತಮಗೆ ಸುಪ್ರೀಂ ಕೋರ್ಟ್ ತೀರ್ಪು ಟೀಕಿಸುವ ಉದ್ದೇಶವಿಲ್ಲ. ಆದರೆ, ಈ ಅಪರಾಧಿಗಳು ಅಮಾಯಕರಲ್ಲ, ಕೊಲೆಗಾರರು ಎಂದು ಟೀಕಿಸಿದ್ದಾರೆ.

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 31 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಜೀವಾವಧಿ ಅಪರಾಧಿಗಳಲ್ಲಿ ಒಬ್ಬರಾದ ಎಜಿಪೇರರಿವಾಳನ್ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದೆ. ಈ ತೀರ್ಪು ಶ್ರೀಲಂಕಾ ಪ್ರಜೆಯಾದ ನಳಿನಿ ಶ್ರೀಹರನ್ ಮತ್ತು ಅವರ ಪತಿ ಮುರುಗನ್ ಸೇರಿದಂತೆ ಇತರ ಆರು ಅಪರಾಧಿಗಳ ಬಿಡುಗಡೆಗೆ ದಾರಿ ಮಾಡಿಕೊಟ್ಟಿದೆ.

Congress reaction on release of Rajiv Gandhis assassination convict AG Perarivalan

ಹತ್ಯೆಯ ಸಮಯದಲ್ಲಿ ಹತ್ತೊಂಬತ್ತು ವರ್ಷ ವಯಸ್ಸಿನವನಾಗಿದ್ದ ಪೇರರಿವಾಳನ್ ರಾಜೀವ್ ಹತ್ಯೆಯ ಮಾಸ್ಟರ್‌ಮೈಂಡ್‌ನ ಎಲ್‌ಟಿಟಿಇ ವ್ಯಕ್ತಿ ಶಿವರಸನ್‌ಗಾಗಿ ಎರಡು 9-ವೋಲ್ಟ್ ಬ್ಯಾಟರಿಗಳನ್ನು ಖರೀದಿಸಿದ್ದನೆಂದು ಆರೋಪಿಸಲಾಯಿತು. ರಾಜೀವ್ ಗಾಂಧಿ ಹತ್ಯೆಗೆ ಬಾಂಬ್ ನಲ್ಲಿ ಬ್ಯಾಟರಿಗಳನ್ನು ಬಳಸಲಾಗಿತ್ತು. 1998 ರಲ್ಲಿ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಪೆರಾರಿವಾಲನ್‌ಗೆ ಮರಣದಂಡನೆ ವಿಧಿಸಿತು.

ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಮೇ 21, 1991 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಧನು ಎಂದು ಗುರುತಿಸಲ್ಪಟ್ಟ ಮಹಿಳಾ ಆತ್ಮಾಹುತಿ ಬಾಂಬರ್‌ನಿಂದ ಹತ್ಯೆಗೀಡಾದರು. ಪ್ರಕರಣದಲ್ಲಿ ಏಳು ಮಂದಿಗೆ ಶಿಕ್ಷೆಯಾಗಿತ್ತು. ಎಲ್ಲರಿಗೂ ಮರಣದಂಡನೆ ವಿಧಿಸಲಾಗಿದ್ದರೂ, 2014 ರಲ್ಲಿ, ಸುಪ್ರೀಂ ಕೋರ್ಟ್ ಅವರ ಕ್ಷಮಾದಾನ ಅರ್ಜಿಗಳನ್ನು ನಿರ್ಧರಿಸುವಲ್ಲಿ ರಾಷ್ಟ್ರಪತಿಗಳ ಅತಿಯಾದ ವಿಳಂಬವನ್ನು ಉಲ್ಲೇಖಿಸಿ, ಅವರನ್ನು ಜೀವಾವಧಿಗೆ ಪರಿವರ್ತಿಸಿತು.

(ಒನ್ಇಂಡಿಯಾ ಸುದ್ದಿ)

English summary
Modi government must be clean about the release of assassins: Congress has responded to the release of Rajiv Gandhi assassin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X