ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿವಿ, ಪೇಪರ್‌ಗೆ ಜಾಹೀರಾತು ನೀಡಬೇಡಿ ಎಂದ ಸೋನಿಯಾ ಗಾಂಧಿ!

|
Google Oneindia Kannada News

ನವದೆಹಲಿ, ಏಪ್ರಿಲ್ 7: ಟಿವಿ ಹಾಗೂ ಮುದ್ರಣ ಮಾಧ್ಯಮಗಳಿಗೆ ನೀಡುವ ಸರ್ಕಾರಿ ಜಾಹೀರಾತುಗಳನ್ನು ಎರಡು ವರ್ಷಗಳ ಕಾಲ ಸಂಪೂರ್ಣ ನಿಷೇಧಿಸಲು ಸೋನಿಯಾ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಸಲಹೆ ನೀಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಕೊರೊನಾ ವೈರಸ್ ಸೋಂಕು ಹರಡುವುದನ್ನು ನಿಭಾಯಿಸಲು ಐದು ಸಲಹೆಗಳನ್ನು ನೀಡಿದ್ದಾರೆ.

Video: ಗುಣಮುಖನಾದ ಕೊರೊನಾ ರೋಗಿಗೆ, ರೋಗಿಗಳಿಂದಲೇ ಬೀಳ್ಕೊಡುಗೆ!Video: ಗುಣಮುಖನಾದ ಕೊರೊನಾ ರೋಗಿಗೆ, ರೋಗಿಗಳಿಂದಲೇ ಬೀಳ್ಕೊಡುಗೆ!

ಹೆಚ್ಚು ಹಣ ವಿನಿಯೋಗಿಸಲು ನಿರ್ಧರಿಸುವ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ಕೋವಿಡ್ -19 ವಿರುದ್ಧ ಹೋರಾಡಲ ಬಳಸಬಹುದಾದ ಕಠಿಣ ಕ್ರಮಗಳನ್ನು ಮೋದಿ ಅವರು ಕೈಗೊಳ್ಳಬೇಕು ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ವಿಸ್ಟಾ ಬ್ಯೂಟಿಪಿಕೇಶನ್ ಸ್ಥಗೀತಗೊಳಿಸಿ

ವಿಸ್ಟಾ ಬ್ಯೂಟಿಪಿಕೇಶನ್ ಸ್ಥಗೀತಗೊಳಿಸಿ

20,000 ಕೋಟಿ ರೂ.ಗಳ ಕೇಂದ್ರ ವಿಸ್ಟಾ ಬ್ಯೂಟಿಪಿಕೇಶನ್ ನಿರ್ಮಾಣ ಯೋಜನೆಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಅವರು ಪ್ರಧಾನಿಯನ್ನು ಒತ್ತಾಯಿಸಿದ್ದಾರೆ. ಇದರಿಂದ ಕೋವಿಡ್ -19 ವಿರುದ್ಧ ಹೋರಾಡಲು ಹಣಕಾಸಿನ ಸಂಗ್ರಹಣೆಗೆ ಅನುಕೂಲವಾಗುವುದು ಎಂದು ಹೇಳಿದ್ದಾರೆ.

ಮುಂದಿನ ಐದು ವರ್ಷಕ್ಕೆ ವಿಸ್ತರಿಸಿ

ಮುಂದಿನ ಐದು ವರ್ಷಕ್ಕೆ ವಿಸ್ತರಿಸಿ

ಶಾಸಕರ, ಸಂಸದರ ಸಂಬಳ ಕಡಿತವನ್ನು ಮುಂದಿನ ಐದು ವರ್ಷಕ್ಕೂ ಸೇರಿದಂತೆ ಕಡಿಗೊಳಿಸಿ ಆದೇಶಿಸಬೇಕು ಎಂದು ಸಲಹೆ ನೀಡಿದ್ದಾರೆ. ಅಲ್ಲದೇ ಈಗ ಸರ್ಕಾರ ಸೋಂಕು ಹರಡುವುದನ್ನು ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಜೊತೆ ಅಂತಾರಾಷ್ಟ್ರೀಯ ತಜ್ಞರ ಜೊತೆ ಸಮಾಲೋಚಿಸಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಈ ಸಲಹೆಗಳಲ್ಲಿ ನೀವು ಮೌಲ್ಯವನ್ನು ಕಾಣುವಿರಿ ಎಂದು ನನಗೆ ಖಾತ್ರಿಯಿದೆ ಎಂದು ಬರೆದಿದ್ದಾರೆ.

ಮೋದಿ ಜೊತೆ ಟೆಲಿಪೊನ್ ಸಂಭಾಷಣೆ

ಮೋದಿ ಜೊತೆ ಟೆಲಿಪೊನ್ ಸಂಭಾಷಣೆ

ಕೊರೊನಾ ಸೋಂಕು ಹರಡುವುದನ್ನು ತಡೆಯುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ಮುಖಂಡರ ಹಾಗೂ ರಾಜ್ಯಗಳಲ್ಲಿ ಕೆಲ ಮುಖಂಡರ ಸಲಹೆಯನ್ನು ದೂರವಾಣಿ ಮುಖಾಂತರ ಸೋಮವಾರ ಪಡೆದುಕೊಂಡಿದ್ದರು. ಸೋನಿಯಾ ಗಾಂಧಿ ಅವರೂ ಕೂಡ ಮೋದಿ ಅವರ ಜೊತೆ ಸಂಭಾಷಣೆ ನಡೆಸಿ, ಕೊರೊನಾ ವಿಷಯದಲ್ಲಿ ಸರ್ಕಾರದ ಜೊತೆ ನಾವಿದ್ದೇವೆ ಎಂದು ಬೆಂಬಲ ನೀಡಿದ್ದರು.

ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಒಂದು ಕಡೆ ಸೋನಿಯಾ ಗಾಂಧಿ ಅವರು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಮೇಲೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನು ವಿಡಿಯೋ ಕಾನ್ಪರೆನ್ಸ ಮೂಲಕ ನಡೆಸಿರುವ ಅವರು, ಈ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಅಧಿಕಾರವಿರುವ ರಾಜ್ಯದ ಮುಖ್ಯಮಂತ್ರಿಗಳು ಕೇಂದ್ರದಿಂದ ಹೆಚ್ಚಿನ ಹಣದ ನೆರವಿಗೆ ಬೇಡಿಕೆ ಇಟ್ಟಿದ್ದಾರೆ.

English summary
Congress President Sonia Gandhi Letter To PM Narendra Modi Ahead Of Coronavirus Panic. Sonia gandhi suggest for, ban government advertise for print and electronic media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X