ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ 'ಅಭದ್ರತೆಯ ಸರ್ವಾಧಿಕಾರಿ': ರಾಹುಲ್ ಗಾಂಧಿ ಟೀಕೆ

|
Google Oneindia Kannada News

ನವದೆಹಲಿ, ಡಿಸೆಂಬರ್ 21: ತನಿಖಾ ಸಂಸ್ಥೆಗಳಿಗೆ ಕಂಪ್ಯೂಟರ್‌ಗಳಲ್ಲಿರುವ ಮಾಹಿತಿಗಳನ್ನು ಪರಿಶೀಲಿಸುವ 'ಇಣುಕುವ ಅಧಿಕಾರ' ನೀಡಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು 'ಪೊಲೀಸ್ ರಾಜ್ಯ'ವನ್ನಾಗಿಸಲು ಹೊರಟಿರುವ 'ಅಭದ್ರತೆಯ ಸರ್ವಾಧಿಕಾರಿ' ಎಂದು ಟೀಕಿಸಿದ್ದಾರೆ.

ಕೇಂದ್ರದ ಹತ್ತು ಸಂಸ್ಥೆಗಳಿಗೆ ಯಾವುದೇ ಕಂಪ್ಯೂಟರ್ ನಲ್ಲಿ ಸಂಗ್ರಹಿಸಿದ, ಪಡೆದ, ಸೃಷ್ಟಿಸಿದ ಹಾಗೂ ಕಳುಹಿಸಿದ ಮಾಹಿತಿ ಮೇಲೆ ನಿಗಾ ಇಡಲು, ಭೇದಿಸಲು ಅಧಿಕಾರ ನೀಡಲಾಗಿದೆ. ಸಚಿವಾಲಯದ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಸಹಿ ಹಾಕಿದ್ದಾರೆ.

10 ಕೇಂದ್ರ ಸಂಸ್ಥೆಗಳಿಗೆ ವಿಶೇಷ ಅಧಿಕಾರ, ಕಂಪ್ಯೂಟರ್ ಮಾಹಿತಿಗಳಿಗೂ ಕೈ ಇಡಬಹುದು10 ಕೇಂದ್ರ ಸಂಸ್ಥೆಗಳಿಗೆ ವಿಶೇಷ ಅಧಿಕಾರ, ಕಂಪ್ಯೂಟರ್ ಮಾಹಿತಿಗಳಿಗೂ ಕೈ ಇಡಬಹುದು

ಇದೇ ಮೊದಲ ಬಾರಿಗೆ ದತ್ತಾಂಶವನ್ನು ಸ್ಕ್ಯಾನಿಂಗ್ ಮಾಡುವ ಅಧಿಕಾರವನ್ನು ವಿವಿಧ ಸಂಸ್ಥೆಗಳಿಗೆ ನೀಡಲಾಗಿದೆ. ಇದಕ್ಕೂ ದತ್ತಾಂಶಗಳು ಹಾಗೆ ನಿಗಾ ಮಾಡುವಂಥ ಅಧಿಕಾರ ಇರಲಿಲ್ಲ. ಆದರೆ ಈಗ ದತ್ತಾಂಶವನ್ನು ಪರಿಶೀಲಿಸಬಹುದು. ಈಗಾಗಲೇ ಸಂಗ್ರಹಿಸಿದ ಹಾಗೂ ಸೃಷ್ಟಿಸಿದ ಮಾಹಿತಿಯನ್ನು ಕೂಡ ತನಿಖೆ ಮಾಡುವಂಥ, ವಶಕ್ಕೆ ಪಡೆಯುವಂಥ ಅಧಿಕಾರ ಕೂಡ ನೀಡಲಾಗಿದೆ.

ಅಭದ್ರತೆಯ ಸರ್ವಾಧಿಕಾರಿ

'ಭಾರತವನ್ನು ಪೊಲೀಸ್ ರಾಜ್ಯವನ್ನಾಗಿಸುವುದು ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ ಮೋದಿ ಜೀ. ಇದು ನೂರು ಕೋಟಿಗೂ ಅಧಿಕ ಸಂಖ್ಯೆಯ ಭಾರತೀಯರಿಗೆ ನೀವು ನಿಜಕ್ಕೂ ಎಂತಹ ಅಭದ್ರತೆಯ ಸರ್ವಾಧಿಕಾರಿ ಎಂಬುದನ್ನು ಸಾಬೀತುಪಡಿಸುತ್ತದೆಯಷ್ಟೇ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಈಗ ಮೋದಿಜೀ ಕಾಂಗ್ರೆಸ್ ನ ಮೂರ್ಖ ಆಲೋಚನೆಯೇ ಬಳಸಲಿದ್ದಾರೆ, ರಾಹುಲ್ಈಗ ಮೋದಿಜೀ ಕಾಂಗ್ರೆಸ್ ನ ಮೂರ್ಖ ಆಲೋಚನೆಯೇ ಬಳಸಲಿದ್ದಾರೆ, ರಾಹುಲ್

ಕಾಂಗ್ರೆಸ್ ಅವಧಿಯದ್ದು

ವಿರೋಧಪಕ್ಷಗಳ ತೀವ್ರ ಟೀಕಾಪ್ರಹಾರಕ್ಕೆ ಪ್ರತ್ಯುತ್ತರ ನೀಡಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ, ತನಿಖಾ ಸಂಸ್ಥೆಗಳಿಗೆ ವಿಶೇಷ ಅಧಿಕಾರ ನೀಡುವ ನಿಯಮವನ್ನು ರಚಿಸಿರುವುದು 2009ರಲ್ಲಿ ಯುಪಿಎ ಸರ್ಕಾರದ ಆಡಳಿತ ಅವಧಿಯಲ್ಲಿ ಎಂದು ತಿರುಗೇಟು ಕೊಟ್ಟಿದ್ದಾರೆ.

ಅಪನಗದೀಕರಣ, ಜಿಎಸ್ ಟಿಯಿಂದ ಭಾರತ ನಲುಗಿದೆ ಎಂದ ರಘುರಾಮ್ ರಾಜನ್ಅಪನಗದೀಕರಣ, ಜಿಎಸ್ ಟಿಯಿಂದ ಭಾರತ ನಲುಗಿದೆ ಎಂದ ರಘುರಾಮ್ ರಾಜನ್

ಹಿಂದೆಯೂ ಕಾನೂನು ಇತ್ತು

2009ರಿಂದ ಅಸ್ತಿತ್ವದಲ್ಲಿರುವ ವಿಶೇಷಾಧಿಕಾರದ ಆದೇಶವನ್ನೇ ಡಿಸೆಂಬರ್ 20ರಂದು ಪುನರಾವರ್ತಿಸಲಾಗಿದೆ ಎಂದು ಜೇಟ್ಲಿ ಹೇಳಿಕೆ ನೀಡಿದ್ದಾರೆ. ಮಾಹಿತಿಗಳ ಮೇಲೆ ಕಣ್ಣಿರಿಸುವ ಅಧಿಕಾರ ಕೆಲವು ನಿರ್ದಿಷ್ಟ ಸಂಸ್ಥೆಗಳಿಗೆ ಯಾವಾಗಲೂ ಇರುತ್ತವೆ. 2009ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಈ ಸಂಸ್ಥೆಗಳಿಗೆ ಅಧಿಕಾರ ನೀಡುವುದನ್ನು ಕಾನೂನಿನ ಅಡಿಯಲ್ಲಿ ಜಾರಿಗೆ ತರಲಾಗಿತ್ತು. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸದೆ ಇದ್ದರೆ ನಾವು ಯಾರದ್ದೇ ಫೋನ್ ಅಥವಾ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಭದ್ರತೆಯ ಉಲ್ಲೇಖವಿಲ್ಲ

ರಾಷ್ಟ್ರೀಯ ಭದ್ರತೆಯ ಉಲ್ಲೇಖವಿಲ್ಲ

ಗೃಹ ಸಚಿವಾಲಯದ ಆದೇಶದಲ್ಲಿ ಎಲ್ಲಿಯೂ ರಾಷ್ಟ್ರೀಯ ಭದ್ರತೆಯ ಬಗ್ಗೆ ಉಲ್ಲೇಖ ಮಾಡಿಲ್ಲ ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ಇದಕ್ಕೆ ಉತ್ತರಿಸಿರುವ ಜೇಟ್ಲಿ, 'ರಾಷ್ಟ್ರೀಯ ಭದ್ರತೆಯು ಸೆಕ್ಷನ್ 69ರಲ್ಲಿ ಉಲ್ಲೇಖವಾಗಿದೆ. ನೀವು ದೇಶದ ಭದ್ರತೆಯೊಂದಿಗೆ ಆಟವಾಡುತ್ತಿದ್ದೀರಿ. ನೀವು ಈಗ ಮಾಡಿದ್ದೂ ಅದನ್ನೇ' ಎಂದು ಕಿಡಿಕಾರಿದ್ದಾರೆ.

ಈ ಆದೇಶವು ಖಾಸಗಿತನದ ಹಕ್ಕು ಮತ್ತು ಮೂಲಭೂತ ಹಕ್ಕುಗಳ ಮೇಲಿನ ಭಾರಿ ಹಲ್ಲೆ ಎಂದು ಕಾಂಗ್ರೆಸ್ ಆರೋಪಿಸಿದೆ.

English summary
Congress president Rahul Gandhi slams Prime Minister Narendra Modi for ordering of snooping powers to some agencies. Modi is a Insecure Dictator who is trying to turn India into a 'police state'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X