ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಯಾಮ್ ಪಿತ್ರೋಡಾ ಹೇಳಿಕೆಗೂ ತನಗೂ ಸಂಬಂಧವಿಲ್ಲ ಎಂದ ಕಾಂಗ್ರೆಸ್

|
Google Oneindia Kannada News

ನವದೆಹಲಿ, ಮೇ 10: ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೇಳಿಕೆಗೂ, ತನಗೂ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟೀಕರಣ ನೀಡಿದೆ.

'ಹುವಾ ತೋ ಹುವಾ' ಎಂದ ಸ್ಯಾಮ್ ಪಿತ್ರೋಡಾಗೆ ಪಂಚ್ ನೀಡಿದ ಮೋದಿ'ಹುವಾ ತೋ ಹುವಾ' ಎಂದ ಸ್ಯಾಮ್ ಪಿತ್ರೋಡಾಗೆ ಪಂಚ್ ನೀಡಿದ ಮೋದಿ

1984 ರ ಸಿಖ್ ದಂಗೆಯಲ್ಲಿ, ಸಿಖ್ಕರನ್ನು ಕೊಲ್ಲುವಂತೆ ಆದೇಶ ನೀಡಿದ್ದೇ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ಸ್ಯಾಮ್ ಪಿತ್ರೋಡಾ, "ಆಗಿದ್ದೆಲ್ಲ ಆಗಿಹೋಯ್ತು, ಭೂತಕಾಲದ ಬಗ್ಗೆ ಮಾತನಾಡಿ ಏನು ಪ್ರಯೋಜನ(ಹುವಾ ತೋ ಹುವಾ)?" ಎಂದು ಪ್ರಶ್ನಿಸಿದ್ದರು.

ಸಿಖ್ ದಂಗೆ, ಭೋಪಾಲ್ ದುರಂತಕ್ಕೆ ಯಾರು ನ್ಯಾಯ ಕೊಡುತ್ತಾರೆ?: ಮೋದಿ ಪ್ರಶ್ನೆಸಿಖ್ ದಂಗೆ, ಭೋಪಾಲ್ ದುರಂತಕ್ಕೆ ಯಾರು ನ್ಯಾಯ ಕೊಡುತ್ತಾರೆ?: ಮೋದಿ ಪ್ರಶ್ನೆ

ಅವರ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಈ ಬಗ್ಗೆ ಇಂದು ಹರ್ಯಾಣದಲ್ಲಿ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೊದಿ, "ಕಾಂಗ್ರೆಸ್ ನ ಹಿರಿಯ ನಾಯಕರು, ಗಾಂಧಿ ಕುಟುಂಬದ ಆಪ್ತರು ನೀಡಿದ ಹುವಾ ತೋ ಹುವಾ ಎಂಬ ಮೂರು ಪದ ಸಾಕು, ಕಾಂಗ್ರೆಸ್ಸಿಗರ ಮನಸ್ಥಿತಿ, ನಡವಳಿಕೆಯನ್ನು ಅರಿಯುವುದಕ್ಕೆ. ಅವರ ದುರಹಂಕಾರಕ್ಕೆ ಇದೇ ಸಾಕ್ಷಿ" ಎಂದಿದ್ದರು.

ನಂತರ ಎಚ್ಚೆತ್ತುಕೊಂಡ ಕಾಂಗ್ರೆಸ್, 'ಸ್ಯಾಮ್ ಪಿತ್ರೋಡಾ ನೀಡಿದ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಷ್ಟೇ. ಪಕ್ಷದ ಅಭಿಪ್ರಾಯವಲ್ಲ. ಸ್ಯಾಮ್ ಪಿತ್ರೋಡಾ ಅವರೇ ಇರಬಹುದು ಅಥವಾ ಯಾರೇ ವೈಯಕ್ತಿಕವಾಗಿ ನೀಡುವ ಹೇಳಿಕೆ ಇರಬಹುದು. ಅದು ಅವರವರ ವೈಯಕ್ತಿಕ ವಿಷಯ ಅಷ್ಟೇ. ಕಾಂಗ್ರೆಸ್ ಪಕ್ಷದ ಅಭಿಪ್ರಾಯವಲ್ಲ' ಎಂದಿದೆ.

Congress party issues statement over Sam Pitrodas remark on 1984 anti-Sikh riots

"ಹಿಂಸೆ ಮತ್ತು ದಂಗೆ ಎಂದಿಗೂ ಸ್ವೀಕಾರಾರ್ಹವಲ್ಲ, ಕ್ಷಮ್ಯಾರ್ಹವೂ ಅಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಅದರ ನಾಯಕತ್ವ ಎಂದಿಗೂ 2002 ರ ಗುಜರಾತ್ ದಂಗೆಯಂತೆಯೇ 1984ರ ದಂಗೆಗೂ ನ್ಯಾಯ ಸಿಗಬೇಕು ಎಂಬ ಬೇಡಿಕೆ ಇಡುತ್ತದೆ. ಪಿತ್ರೋಡಾ ಹೇಳಿಕೆಗೂ ನಮಗೂ ಸಂಬಂಧವಿಲ್ಲ. ಯಾವುದೇ ಸೂಕ್ಷ್ಮ ವಿಷಯಗಳ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದಿರಿ ಎಂದು ನಾವು ಸೂಚಿಸಿದ್ದೇವೆ. ಬಿಜೆಪಿ ಈ ಹೇಳಿಕೆಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದೆ" ಎಂದು ಕಾಂಗ್ರೆಸ್ ದೂರಿದೆ.

English summary
Congress party issues statement over Sam Pitroda's remark on 1984 anti-Sikh riots. States, '...We continue to support the quest for justice for 1984 riot victims. Any opinion remark made by any individual to the contrary including Sam Pitroda is not the opinion of Congress party'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X