ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶ ಸಿಎಂ ಅಭ್ಯರ್ಥಿ ಎಂದು ಘೋಷಿಸಿ'

|
Google Oneindia Kannada News

ಲಕ್ನೌ, ಜುಲೈ 2: ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಉತ್ತರ ಪ್ರದೇಶದ ಸಿಎಂ ಅಭ್ಯರ್ಥಿ ಎಂದು ಘೋಷಿಸಿ ಎಂದು ಎಐಸಿಸಿಗೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಒತ್ತಾಯಿಸಿದ್ದಾರೆ.

Recommended Video

Corona Cases,Hassan ಹಾಸನದಲ್ಲಿ ಕೊರೊನಾಗೆ ಮತ್ತೊಂದು ಬಲಿ , ಆತಂಕದಲ್ಲಿ ಜನಗಳು | Oneindia Kannada

ಈ ಕುರಿತು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಕಾರ್ತಿ ಚಿದಂಬರಂ ''ಹಿರಿಯ ನಾಯಕರು ಲಕ್ನೌದಲ್ಲಿ ನೆಲೆಸಬೇಕು ಹಾಗೂ ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಮುನ್ನಡೆಸಬೇಕು'' ಎಂದಿದ್ದಾರೆ.

ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಪ್ರಿಯಾಂಕಾ ಗಾಂಧಿಗೆ ಕೇಂದ್ರ ಸೂಚನೆಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಪ್ರಿಯಾಂಕಾ ಗಾಂಧಿಗೆ ಕೇಂದ್ರ ಸೂಚನೆ

''ಉತ್ತರ ಪ್ರದೇಶದ ಮೂಲಕ ರಾಷ್ಟ್ರೀಯ ಕಾಂಗ್ರೆಸ್‌ಗೆ ಪುನರುಜ್ಜೀವನದ ಹಾದಿ ಸಿಗಲಿದೆ. ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶದ ಸಿಎಂ ಅಭ್ಯರ್ಥಿಯಾಗಿ ಘೋಷಿಸುವುದು ಸ್ಪಷ್ಟ ಉದ್ದೇಶವಾಗಿದೆ. ಪ್ರಿಯಾಂಕಾ ಲಕ್ನೌನಲ್ಲಿ ನೆಲೆಸಬೇಕು ಮತ್ತು ಪಕ್ಷವನ್ನು ಮುನ್ನಡೆಸಬೇಕು'' ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಿಯಾಂಕಾ ಗಾಂಧಿಗೆ ನೀಡಲಾಗಿದ್ದ ಎಸ್‌ಪಿಜಿ ಭದ್ರತೆ ಮತ್ತು ಝಡ್+ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಹಾಗಾಗಿ, ದೆಹಲಿಯ ಲೂದಿ ಎಸ್ಟೇಟ್‌ನಲ್ಲಿರುವ ಸರ್ಕಾರಿ ಬಂಗಲೆಯನ್ನು ಪ್ರಿಯಾಂಕಾ ಖಾಲಿ ಮಾಡುವಂತೆ ಸರ್ಕಾರ ಸೂಚಿಸಿದೆ.

Congress MP Karti Chidambaram Demanding That Declare Priyanka Gandhi UP CM candidate

ಕೇಂದ್ರದ ಆದೇಶದ ಬೆನ್ನಲ್ಲೆ ಪ್ರಿಯಾಂಕಾ ಗಾಂಧಿ ಲಕ್ನೌಗೆ ಶಿಫ್ಟ್ ಆಗಲಿದ್ದಾರೆ ಎನ್ನಲಾಗಿದೆ. ಲಕ್ನೌನಲ್ಲಿ ಕಾಂಗ್ರೆಸ್ ಹಿರಿಯ ನಾಯಕಿಯೊಬ್ಬರು ತಂಗಿದ್ದ ಮನೆಯನ್ನು ಪ್ರಿಯಾಂಕಾ ಉಳಿಯಲು ಸಿದ್ಧತೆ ಮಾಡಲಾಗುತ್ತಿದೆ ಎಂಬ ಮಾತಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶ ಉಸ್ತುವಾರಿ ವಹಿಸಿಕೊಂಡಿದ್ದರು. ಕೊರೊನಾ ವೈರಸ್ ಅಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರದ ವೈಫಲ್ಯವನ್ನು ಎತ್ತು ತೋರಿಸುವ ಕೆಲಸ ಮಾಡುತ್ತಿದ್ದಾರೆ.

English summary
Congress MP Karti Chidambaram urge to AICC to Declare Priyanka Gandhi Vadra uttara pradesh Chief Minister candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X