• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ ಪ್ರಣಾಳಿಕೆ ಘೋಷಣೆಗಳಲ್ಲಿ ಭಾರತ ಛಿದ್ರವಾಗುವ ಅಪಾಯ: ಜೇಟ್ಲಿ

|

ನವದೆಹಲಿ, ಏಪ್ರಿಲ್ 2: ಲೋಕಸಭಾ ಚುನಾವಣೆ ಸಲುವಾಗಿ ಭಾರತವನ್ನು ಸಣ್ಣ ತುಂಡುಗಳಾಗಿ ಮಾಡಲು, ಒಬ್ಬರ ವಿರುದ್ಧ ಮತ್ತೊಬ್ಬರನ್ನು ರಾಜಕೀಯವಾಗಿ ಎತ್ತಿಕಟ್ಟಲು (ಬಾಲ್ಕನೈಸೇಷನ್ ಆಫ್ ಇಂಡಿಯಾ) ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾವ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಆರೋಪ ಮಂಗಳವಾರ ಆರೋಪ ಮಾಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಾಂಗ್ರೆಸ್ ನ ಪ್ರಣಾಳಿಕೆಯಲ್ಲಿನ ಕೆಲವು ಆಲೋಚನೆಗಳಂತೂ ಗಂಭೀರವಾಗಿ ಅಪಾಯಕಾರಿ ಆಗಿದೆ. ಅದು ಭಾರತವನ್ನು ಸಣ್ಣ ತುಂಡುಗಳನ್ನಾಗಿ ಮಾಡಲು ಹೊಂದಿರುವ ಅಜೆಂಡಾವನ್ನು ಸೂಚಿಸುತ್ತದೆ ಎಂದು ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆ : ಕಾಮ್, ದಾಮ್, ಶಾನ್, ಸುಶಾಸನ್, ಸ್ವಾಭಿಮಾನ್ ಮತ್ತು ಸಮ್ಮಾನ್!

ಈ ಬಾರಿಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನ ಪ್ರಣಾಳಿಕೆ ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ಅರುಣ್ ಜೇಟ್ಲಿ ಈ ಆರೋಪ ಮಾಡಿದ್ದಾರೆ. ಅಂದ ಹಾಗೆ ಈ ಪ್ರಣಾಳಿಕೆಯನ್ನು ಸಿದ್ಧಪಡಿಸಿರುವುದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ನೇತೃತ್ವದ ಸಮಿತಿ.

ಜೇಟ್ಲಿ ಮಾತನಾಡಿ, ಪ್ರಣಾಳಿಕೆ ರಚನಾ ಸಮಿತಿ ಅಂತಿದ್ದರೂ ಮುಖ್ಯವಾದ ಅಂಶಗಳನ್ನು ತುಕ್ಡೆ ತುಕ್ಡೆ ಗ್ಯಾಂಗ್ ನಲ್ಲಿನ ಕಾಂಗ್ರೆಸ್ ಅಧ್ಯಕ್ಷರ ಸ್ನೇಹಿತ ತಂದಂತೆ ಇದೆ. ಅದರಲ್ಲೂ ಜಮ್ಮು-ಕಾಶ್ಮೀರದ ವಿಷಯದಲ್ಲಿ ಹಾಗೆ ಅನಿಸುತ್ತದೆ ಎಂದಿದ್ದಾರೆ.

ನಿರುದ್ಯೋಗ ನಿವಾರಣೆಗೆ ಕಾಂಗ್ರೆಸ್ ನೀಡಿದೆ ಭಾರಿ ಭರವಸೆಗಳು

ಐಪಿಸಿ ಸೆಕ್ಷನ್ 124A ತೆಗೆಯುವ ಬಗ್ಗೆ ಕಾಂಗ್ರೆಸ್ ಭರವಸೆ ನೀಡಿದೆ. ಇದು ಬಹಳ ಅಪಾಯಕಾರಿ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅಥವಾ ಮನ್ ಮೋಹನ್ ಸಿಂಗ್ ಸರಕಾರ ಕೂಡ ಇದನ್ನು ಮಾಡಿರಲಿಲ್ಲ. ಆದರೆ ಕಾಂಗ್ರೆಸ್ ಪ್ರಣಾಳಿಕೆ ಪ್ರಕಾರ ಐಪಿಸಿ 124A ತೆಗೆಯಲಾಗುವುದು. ಇದರ ಅರ್ಥ ದೇಶದ್ರೋಹವು ಇನ್ನು ಮುಂದೆ ಅಪರಾಧವಲ್ಲ. ಯಾವ ಪಕ್ಷ ಇಂಥ ಭರವಸೆ ನೀಡುತ್ತದೋ ಅದು ಒಂದು ಮತ ಪಡೆಯಲು ಕೂಡ ಅರ್ಹವಲ್ಲ ಎಂದು ಜೇಟ್ಲಿ ಹೇಳಿದ್ದಾರೆ.

ಬಿಜೆಪಿಯಿಂದ ಅಮಿತ್ ಶಾ, ಯೋಗಿ ಆದಿತ್ಯನಾಥ್ ಏನು ಹೇಳಿದ್ದಾರೆ ಗೊತ್ತೆ:

ಅಮಿತ್ ಶಾ

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸಶಸ್ತ್ರ ಸೇನಾ (ವಿಶೇಷಾಧಿಕಾರ) ಕಾಯ್ದೆಗೆ ತಿದ್ದುಪಡಿ ತರುವುದಾಗಿ ಭರವಸೆ ನೀಡಿದೆ. ನಾನು ಕಾಂಗ್ರೆಸ್ ಅಧ್ಯಕ್ಷರಿಗೆ ಕೇಳಲು ಬಯಸುತ್ತೇನೆ: ದೇಶದ ಗಡಿಯಲ್ಲಿ ಸೈನಿಕರು ಹೋರಾಡುತ್ತಿದ್ದಾರೆ. ಅವರಿಗೆ ನೀವು ಬಲ ನೀಡಲು ಬಯಸುತ್ತೀರೋ ಅಥವಾ ಅವರ ಮನೋಬಲ ಕುಗ್ಗಿಸಲು ಬಯಸುತ್ತೀರೋ?

ಕಾಂಗ್ರೆಸ್ ಪ್ರಣಾಳಿಕೆ ಮುಖ್ಯಾಂಶ ತಿಳಿಯಲು ಕೆಪಿಸಿಸಿ ಟ್ವೀಟ್ ನೋಡಿ

ಯೋಗಿ ಆದಿತ್ಯನಾಥ್

ಈ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಈ ಸುಳ್ಳು ಮತ್ತೊಮ್ಮೆ ವಿಫಲ ಆಗಲಿದೆ. ಮತ್ತು ಜನರು ಕಾಂಗ್ರೆಸ್ ಮತ್ತು ಅದರ ಸಹಯೋಗಿ ಪಕ್ಷಗಳಿಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ. ಅವರು (ಕಾಂಗ್ರೆಸ್) ತಮ್ಮ ಐವತ್ತೈದು ವರ್ಷದ ಆಡಳಿತದಲ್ಲಿ ಕೆಲಸ ಮಾಡದೇ ಇದ್ದಿದ್ದನ್ನು ತಮ್ಮ ಐವತ್ತೈದು ಪುಟಗಳ ಘೋಷಣಾ ಪತ್ರದ ಮೂಲಕ ವ್ಯಕ್ತಪಡಿಸಿದ್ದಾರೆ.

English summary
Union Finance Minister Arun Jaitley on Tuesday hit out at the Congress party accusing of proposing dangerous promises in its manifesto for the Lok Sabha election. Jaitley said the Congress’s manifesto has imprints of what he termed “tukde tukde gang”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more