ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಿಯಾಂಕಾ ಗಾಂಧಿ ವಾದ್ರಾ ಹೆಗಲಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ?!

|
Google Oneindia Kannada News

ಪ್ರಶ್ನೆಗೆನವದೆಹಲಿ, ಜುಲೈ 17: ಅಭಿನವ ಇಂದಿರಾ ಗಾಂಧಿ ಎಂದೇ ಅಭಿಮಾನಿಗಳ ಬಳಿ ಕರೆಸಿಕೊಳ್ಳುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಬೇಕೆಂಬ ಬೇಡಿಕೆ ಹಿರಿಯ ಕಾಂಗ್ರೆಸ್ ನಾಯಕರಿಂದ ಕೇಳಿಬರುತ್ತಿದೆ.

ರಾಹುಲ್ ಗಾಂಧಿ ಅವರು ಅಧ್ಯಕ್ಷ ಪಟ್ಟದಿಂದ ಕೆಳಗಿಳಿದ ನಂತರ ತೆರವಾದ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆಗೆ ಇದುವರೆಗೂ ಉತ್ತರ ದೊರಕಿಲ್ಲ. ಪಕ್ಷದ ವರ್ಚಸ್ಸು ಉಳಿಯಬೇಕಾದರೆ ಗಾಂಧಿ ಕುಟುಂಬದವರನ್ನೇ ಮತ್ತೆ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬುದು ಕಾಂಗ್ರೆಸ್ ಹಿರಿಯ ನಾಯಕರ ಅಪೇಕ್ಷೆ.

ಅಣ್ಣನನ್ನು ಕೊಂಡಾಡಿದ ಪ್ರಿಯಾಂಕಾ ಗಾಂಧಿಗೆ ಟ್ವಿಟ್ಟಿಗರಿಂದ ವ್ಯಂಗ್ಯದ ಬಾಣಅಣ್ಣನನ್ನು ಕೊಂಡಾಡಿದ ಪ್ರಿಯಾಂಕಾ ಗಾಂಧಿಗೆ ಟ್ವಿಟ್ಟಿಗರಿಂದ ವ್ಯಂಗ್ಯದ ಬಾಣ

ಆದರೆ ಇದಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ ಒಪ್ಪುತ್ತಾರಾ? ಈಗಷ್ಟೇ ರಾಜಕೀಯದಲ್ಲಿ ಅಂಬೆಗಾಲಿಡುತ್ತಿರುವ ಪ್ರಿಯಾಂಕಾ ಗಾಂಧಿ ಈ ಆಯಕಟ್ಟಿನ ಹುದ್ದೆಗೆ ಅರ್ಹರಾ? ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಸಂದಿಗ್ಧದಲ್ಲಿರುವಾಗ ಪ್ರಿಯಾಂಕಾ ಗಾಂಧಿ ಅವರ ಹೆಗಲಿಗೆ ಈ ಮಣಬಾರದ ಜವಾಬ್ದಾರಿ ಹಾಕುವುದು ಪಕ್ಷದ ಭವಿಷ್ಯದ ಮಟ್ಟಿಗೆ ಆರೋಗ್ಯಕರವೇ? ಇತ್ಯಾದಿ ಪ್ರಶ್ನೆಗಳು ಇದೀಗ ಎದ್ದಿವೆ.

ರಾಹುಲ್ ಗಾಂಧಿ ಒಪ್ಪುತ್ತಾರಾ?

ರಾಹುಲ್ ಗಾಂಧಿ ಒಪ್ಪುತ್ತಾರಾ?

ರಾಹುಲ್ ಗಾಂಧಿ ಅವರು ಪಕ್ಷಾಧ್ಯಕ್ಷ ಸ್ಥಾನದಿಂದ ನಿರ್ಗಮಿಸುವ ವೇಳೆಯಲ್ಲಿ, "ಪಕ್ಷವು ಅಧ್ಯಕ್ಷ ಪಟ್ಟಕ್ಕೆ ಗಾಂಧಿ ಕುಟುಂಬದ ಹೊರತಾಗಿ ಪರ್ಯಾಯ ನಾಯಕರನ್ನು ಹುಡುಕಿಕೊಳ್ಳಬೇಕು" ಎಂದು ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದ್ದರು. ಅಂದರೆ ಪ್ರಿಯಾಂಕಾ ಗಾಂಧಿ ಅವರನ್ನು ಈ ಸ್ಥಾನಕ್ಕೆ ಸೂಚಿಸಿದರೆ ಅದಕ್ಕೆ ಸ್ವತಃ ರಾಹುಲ್ ಗಾಂಧಿ ಅವರೇ ಬೇಡ ಎನ್ನಬಹುದು!

ರಾಹುಲ್ ಗಾಂಧಿ ಮನಸ್ಸಿಗೆ ಬೇಸರ

ರಾಹುಲ್ ಗಾಂಧಿ ಮನಸ್ಸಿಗೆ ಬೇಸರ

ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ನ ಹೀನಾಯ ಪ್ರದರ್ಶನಕ್ಕೆ ರಾಹುಲ್ ಗಾಂಧಿ ಅವರೇ ಹೊಣೆ ಎಂಬಂತೆ ಬಿಂಬಿಸಲಾಗಿತ್ತು. ನೇರವಾಗಿಯಲ್ಲದಿದ್ದರೂ, ಪರೋಕ್ಷವಾಗಿ ಹಲವು ಕಾಂಗ್ರೆಸ್ ನಾಯಕರು ಸೋಲಿಗೆ ರಾಹುಲ್ ಗಾಂಧಿಯತ್ತ ಬೊಟ್ಟು ಮಾಡಿ ತೋರಿಸಿದ್ದರು. ಅದರಲ್ಲೂ ಅಮೇಥಿಯಲ್ಲೂ ಸೋತಿದ್ದ ರಾಹುಲ್ ಗಾಂಧಿ ಅವರಿಗೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಯಾವ ದಾರಿಯೂ ಇರಲಿಲ್ಲ. ಚುನಾವಣೆ ಪ್ರಚಾರದ ಸಮಯದಲ್ಲಿ ಪಕ್ಷದ ಯಶಸ್ಸಿಗಾಗಿ ಹಗಲಿರುಳೂ ಪ್ರವಾಸ ಮಾಡಿದರೂ ಕೊನೆಗೆ ಇಂಥ ಮಾತು ಕೇಳಬೇಕಾದ ಸ್ಥಿತಿಯಿಂದಾಗಿ ರಾಹುಲ್ ಗಾಂಧಿ ನೋವನುಭವಿಸಿದ್ದರು. ಆದ್ದರಿಂದಲೇ ಆ ಸ್ಥಾನದಿಂದ ಕೆಳಗಿಳಿದಿದಿದ್ದಲ್ಲದೆ, ಗಾಂಧಿ ಕುಟುಂಬದ ಹೊರತಾಗಿ ಪರ್ಯಾಯ ನಾಯಕರನ್ನು ಆರಿಸಿ ಎಂದಿದ್ದರು. ಇದು ಒಂದರ್ಥದಲ್ಲಿ ರಾಹುಲ್ ಗಾಂಧಿ ಅವರು ಪಕ್ಷದ ಇತರ ನಾಯಕರಿಗೆ ಎಸೆದ ಸವಾಲೂ ಆಗಿತ್ತು!

ಸಹೋದರನ ಧೈರ್ಯವನ್ನು ಮೆಚ್ಚಿಕೊಂಡ ಪ್ರಿಯಾಂಕಾ ಗಾಂಧಿಸಹೋದರನ ಧೈರ್ಯವನ್ನು ಮೆಚ್ಚಿಕೊಂಡ ಪ್ರಿಯಾಂಕಾ ಗಾಂಧಿ

ಒಲ್ಲೆ ಎಂದ ಸೋನಿಯಾ ಗಾಂಧಿ

ಒಲ್ಲೆ ಎಂದ ಸೋನಿಯಾ ಗಾಂಧಿ

ತಾತ್ಕಾಲಿಕವಾಗಿ ಪಕ್ಷದ ಉನ್ನತ ಜವಾಬ್ದಾರಿಯನ್ನು ಹೊತ್ತುಕೊಳ್ಳುವಂತೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಲ್ಲೂ ಮನವಿ ಮಾಡಲಾಗಿತ್ತು. ಆದರೆ ಅದಕ್ಕೆ ಒಪ್ಪದ ಸೋನಿಯಾ ಗಾಂಧಿ, ಅನಾರೋಗ್ಯದ ಕಾರಣ ನೀಡಿದ್ದರು. ಗಾಂಧಿ ಕುಟುಂಬದ ಹೊರತಾಗಿ ಬೇರೆ ನಾಯಕರನ್ನು ಆರಿಸುವುದು ಕಷ್ಟವಲ್ಲ. ಆದರೆ 'ಗಾಂಧಿ-ನೆಹರು' ಎಂಬ ಹೆಸರಿನಿಂದಲೇಪಕ್ಷಕ್ಕಿರುವ ವರ್ಚಸ್ಸನ್ನು ಕಳೆದುಕೊಳ್ಳಲು ಯಾರೂ ಸಿದ್ಧರಿಲ್ಲ. ಇಂಥ ಸಂದರ್ಭದಲ್ಲಿ ಕಾಣಿಸಿದ್ದು ಪ್ರಿಯಾಂಕಾ ಗಾಂಧಿ ವಾದ್ರಾ!

ಅಭಿನವ ಇಂದಿರಾ ಗಾಂಧಿ

ಅಭಿನವ ಇಂದಿರಾ ಗಾಂಧಿ

ನೋಡುವುದಕ್ಕೆ ಥೇಟ್ ಇಂದಿರಾ ಗಾಂಧಿ ಅವರಂತೆಯೇ ಕಾಣುವ ಪ್ರಿಯಾಂಕಾ ಗಾಂಧಿ, ಮ್ಮ ಮಾತು, ವರ್ಚಸ್ವೀ ವ್ಯಕ್ತಿತ್ವದ ಮೂಲಕ ಸುಲಭವಾಗಿ ಜನರನ್ನು ಸೆಳೆಯಬಲ್ಲರು ಎಂಬುದು ಕಾಂಗ್ರೆಸ್ ನ ಹಿರಿಯ ನಾಯಕರ ಅಭಿಪ್ರಾಯ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಯುವಕರನ್ನೇ ಆರಿಸಬೇಕು ಎಂದುಕೊಂಡಿರುವ ಕಾಂಗ್ರೆಸ್ಸಿಗೆ ಪ್ರಿಯಾಂಕಾ ಗಾಮಧಿ ಪರ್ಯಾಯವಾಗಿ ಕಾಣಿಸಿದ್ದರಲ್ಲಿ ಅಚ್ಚರಿಯಿಲ್ಲ. ಮಹಿಳೆ ಎಂಬ ಕಾರಣವೂ ಒಂದಷ್ಟು ಲಾಭ ಕೊಡಬಹುದು.

ಸಂಕಷ್ಟದಲ್ಲಿರುವ ಕಾಂಗ್ರೆಸ್‌ನಿಂದ ಎರಡು ಬದಲಾವಣೆ, ಒಂದು ನಿರ್ಣಯ!ಸಂಕಷ್ಟದಲ್ಲಿರುವ ಕಾಂಗ್ರೆಸ್‌ನಿಂದ ಎರಡು ಬದಲಾವಣೆ, ಒಂದು ನಿರ್ಣಯ!

ಲಕ್ಷಾಂತರ ಕಾರ್ಯಕರ್ತರ ಬೇಡಿಕೆ

ಲಕ್ಷಾಂತರ ಕಾರ್ಯಕರ್ತರ ಬೇಡಿಕೆ

ಪ್ರಿಯಾಂಕಾ ಗಾಂಧಿ ಅವರನ್ನು ಪಕ್ಷದ ಅಧ್ಯಕ್ಶಶರನ್ನಾಗಿ ಮಾಡಿ ಎಮಬ ಬೇಡಿಕೆ ಇಟ್ಟಿರುವ ಕಾಂಗ್ರೆಸ್ ನ ಹಿರಿಯ ನಾಯಕರಾದ, ಶ್ರೀಪ್ರಕಾಶ್ ಜೈಸ್ವಾಲ್, ಭಕ್ತ ಚರಣ್ ದಾಸ್ ಮುಂತಾದವರು, "ಕಾಂಗ್ರೆಸ್ ಪಕ್ಷದ ಲಕ್ಷಾಂತರ ತಳಮಟ್ಟದ ಕಾರ್ಯಕರ್ತರ ಬೇಡಿಕೆ ಅದೇ, ಪ್ರಿಯಾಂಕಾ ಗಾಂಧಿ ಪಕ್ಶಃಸದ ಅಧ್ಯಕ್ಷರಾಗಬೇಕು ಎಂಬುದು. ಅವರೊಬ್ಬ ವರ್ಚಸ್ವೀ ನಾಯಕಿ, ಪಕ್ಷವನ್ನು ಮುನ್ನಡೆಸುವ ಎಲ್ಲಾ ಸಾಮರ್ಥ್ಯ ಅವರಿಗಿದೆ, ಅದು ಅಲ್ಲದೆ ಅವರು ಗಾಂಧಿ ಕುಟುಂಬದವರು" ಎಂದಿದ್ದಾರೆ. ಈ ಬಗ್ಗೆ ಇದುವರೆಗೆ ಪ್ರಿಯಾಂಕಾ ಗಾಂಧಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ! 'ಮೌನಂ ಸಮ್ಮತಿ ಲಕ್ಷಣಂ' ಎನ್ನಬಹುದಾ?!

English summary
Some senior Congress leaders want Congress general secretary Priyanka Gandhi as Congress chief. But she has not given any reply for this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X