ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷಾಧ್ಯಕ್ಷರಾಗಿ ಎಂದ ಬೆಂಬಲಿಗರಿಗೆ 'ಒಲ್ಲೆ' ಎಂದ ಸೋನಿಯಾ ಗಾಂಧಿ

|
Google Oneindia Kannada News

Recommended Video

ಪಕ್ಷದ ಅಧ್ಯಕ್ಷರಾಗಿ ಎಂದು ಕೇಳಿದ ಕಾಂಗ್ರೆಸ್ ನಾಯಕರಿಗೆ ಒಲ್ಲೆ ಎಂದ ಸೋನಿಯಾ ಗಾಂಧಿ | Oneindia Kannada

ನವದೆಹಲಿ, ಜುಲೈ 11: ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಮೇಲೆ ತೆರವಾಗಿರುವ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ಆದರೆ ಹಂಗಾಮಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಾಂಗ್ರೆಸ್ ನ ಕೆಲ ಹಿರಿಯ ನಾಯಕರು ಮನವಿ ಮಾಡಿದ್ದಾರೆ.

ಈ ಮನವಿಯನ್ನು ನಯವಾಗಿ ತಿರಸ್ಕರಿಸಿರುವ ಸೋನಿಯಾ ಗಾಂಧಿ, 'ನಾನು ಅನಾರೋಗ್ಯದ ಸಮಸ್ಯೆಯಿಂದಾಗಿ ರಾಜಕೀಯದಿಂದ ಆದಷ್ಟು ದೂರವಿದ್ದೇನೆ. ನನ್ನ ಬಳಿ ಹಂಗಾಮಿ ಅಧ್ಯಕ್ಷೆಯಾಗಿ ಕೆಲವೇ ದಿನ ಕೆಲಸ ನಿರ್ವಹಿಸುವುದಕ್ಕೂ ಸಾಧ್ಯವಾಗುವುದಿಲ್ಲ, ಕ್ಷಮಿಸಿ' ಎಂದಿದ್ದಾರೆ.

ದೆಹಲಿಯಲ್ಲಿ ಸೋನಿಯಾ ಗಾಂಧಿ-ಸೌಮ್ಯಾ ರೆಡ್ಡಿ ಭೇಟಿದೆಹಲಿಯಲ್ಲಿ ಸೋನಿಯಾ ಗಾಂಧಿ-ಸೌಮ್ಯಾ ರೆಡ್ಡಿ ಭೇಟಿ

ಅನಾರೋಗ್ಯದಿಂದ ಬಳಲುತ್ತಿರುವ 72 ವರ್ಷ ವಯಸ್ಸಿನ ಸೋನಿಯಾ ಗಾಂಧಿ, ಈ ಬಾರಿ ಲೋಕಸಭೆ ಚುನಾವಣೆಯಲ್ಲೇ ಸ್ಪರ್ಧಿಸುವುದು ಅನುಮಾನ ಎನ್ನಲಾಗಿತ್ತು. ಆದರೆ ಬೆಂಬಲಿಗರ ಒತ್ತಾಯದ ಮೇರೆಗೆ ಅವರು ಉತ್ತರ ಪ್ರದೇಶದ ತಮ್ಮ ರಾಯ್ಬರೇಲಿ ಕ್ಷೇತ್ರದಿಂದಲೇ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

Congress leaders requests Sonia Gandhi to become temporary chief of Congress, she said no

14 ವರ್ಷದಲ್ಲಿ ಮೊದಲ ಬಾರಿಗೆ ರಾಜ್ ಠಾಕ್ರೆ ದೆಹಲಿಗೆ, ಸೋನಿಯಾ ಜತೆ ಚರ್ಚೆ14 ವರ್ಷದಲ್ಲಿ ಮೊದಲ ಬಾರಿಗೆ ರಾಜ್ ಠಾಕ್ರೆ ದೆಹಲಿಗೆ, ಸೋನಿಯಾ ಜತೆ ಚರ್ಚೆ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಸಾಧನೆಯಿಂದಾಗಿ ನೈತಿಕ ಹೊಣೆ ಹೊತ್ತು ರಾಹುಲ್ ಗಾಮಧಿ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದಾರೆ. ಆದರೆ ಅವರ ಸ್ಥಾನಕ್ಕೆ ಸೂಕ್ತವಾಗುವಂಥ ವ್ಯಕ್ತಿಯ ಹುಡುಕಾಟದಲ್ಲಿರುವ ಕಾಂಗ್ರೆಸ್ ನಾಯಕರು ಗಾಂಧಿ ಕುಟುಂಬದ ಹೊರಗಿನವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದರೆ ಪಕ್ಷದ ವರ್ಚಸ್ಸು ಕುಗ್ಗಬಹುದು ಎಂಬ ಆತಂಕದಲ್ಲಿ ಸೋನಿಯಾ ಗಾಂಧಿ ಅವರನ್ನೇ ಮತ್ತೆ ಅಧ್ಯಕ್ಷರನ್ನಾಗಿ ಮಾಡಲು ಮುಂದಾಗಿದ್ದರು.

English summary
UPA chairperson Sonia Gandhi has requested by her supporters and senior Congress leaders to lead the Party as temporary president. But she, with respect, rejected the request.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X