ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ ತತ್ತರಿಸುತ್ತಿರುವಾಗ ಅದಾನಿ ಸಂಪತ್ತು ಹೆಚ್ಚಾಗಿದ್ದು ಹೇಗೆ?; ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಮಾರ್ಚ್ 13: ಕೊರೊನಾ ಸೋಂಕಿನಿಂದ ಇಡೀ ದೇಶವೇ ತತ್ತರಿಸುತ್ತಿದ್ದು, ಆರ್ಥಿಕ ಸ್ಥಿತಿಯೇ ತಲೆ ಕೆಳಗಾಗಿರುವಾಗ ಉದ್ಯಮಿ ಗೌತಮ್ ಅದಾನಿ ಅವರ ಸಂಪತ್ತು ಹೇಗೆ ಈ ವರ್ಷ ಇಷ್ಟು ಏರಿಕೆಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಅದಾನಿ ಆಸ್ತಿ ಮೌಲ್ಯದ ವರದಿ ಉಲ್ಲೇಖಿಸಿ ಶನಿವಾರ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 2020ರಲ್ಲಿ ನಿಮ್ಮ ಸಂಪತ್ತು ಎಷ್ಟು ಹೆಚ್ಚಾಗಿದೆ? ಶೂನ್ಯ. ನೀವೆಲ್ಲಾ ಕೊರೊನಾದಿಂದ ತತ್ತರಿಸಿ ಜೀವನ ನಡೆಸಲು ಕಷ್ಟಪಡುತ್ತಿರುವಾಗ, ಅದಾನಿ ಅವರು ತಮ್ಮ ಸಂಪತ್ತನ್ನು ಶೇ.50ರಷ್ಟು ಹೆಚ್ಚಿಸಿಕೊಂಡಿದ್ದಾರೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಸಂಪತ್ತಿನಲ್ಲಿ ಭಾರಿ ಏರಿಕೆ: ಮಸ್ಕ್, ಬೆಜೊಸ್‌ರನ್ನೂ ಹಿಂದಿಕ್ಕಿದ ಅದಾನಿಸಂಪತ್ತಿನಲ್ಲಿ ಭಾರಿ ಏರಿಕೆ: ಮಸ್ಕ್, ಬೆಜೊಸ್‌ರನ್ನೂ ಹಿಂದಿಕ್ಕಿದ ಅದಾನಿ

ಅದಾನಿ ಅವರು 2021ರಲ್ಲಿ 12 ಲಕ್ಷ ಕೋಟಿ ರೂಪಾಯಿ ಗಳಿಸಿ ಇಡೀ ವಿಶ್ವದಲ್ಲೇ ಸಂಪತ್ತು ಗಳಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇದರೊಂದಿಗೆ ಒಟ್ಟು ನಿವ್ವಳ ಆಸ್ತಿ ಮೌಲ್ಯ 50 ಬಿಲಿಯನ್ ಅಮೆರಿಕನ್ ಡಾಲರ್ ಮುಟ್ಟಿದೆ. ಇದೆಲ್ಲಾ ಸಾಧ್ಯವಾಗಿದ್ದು ಹೇಗೆ ಎಂದು ಕೇಳಿದ್ದಾರೆ.

 Congress Leader Rahul Gandhi Questions Adanis Wealth Surge

ಮೊದಲ ಪೀಳಿಗೆಯ ಉದ್ಯಮಿಯಾಗಿರುವ ಅದಾನಿ ಅವರ ನಿವ್ವಳ ಸಂಪತ್ತಿನ ಮೌಲ್ಯ 2021ರಲ್ಲಿ 16.2 ಬಿಲಿಯನ್ ಡಾಲರ್‌ನಿಂದ 50 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್ ತಿಳಿಸಿತ್ತು. ಈ ಮೂಲಕ ಅವರನ್ನು ಈ ವರ್ಷ ಜಗತ್ತಿನಲ್ಲಿ ಈವರೆಗೆ ಅತಿ ಹೆಚ್ಚು ಸಂಪತ್ತು ಸಂಪಾದಿಸಿದ ವ್ಯಕ್ತಿ ಎಂದು ಪ್ರಕಟಿಸಲಾಗಿತ್ತು. ಸಂಪತ್ತು ಗಳಿಕೆಯಲ್ಲಿ ವಿಶ್ವದಲ್ಲಿಯೇ ಅದಾನಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಮೆಜಾನ್ ಸಂಸ್ಥಾಪಕ ಹಾಗೂ ಸಿಇಒ ಜೆಫ್ ಬೆಜೋಸ್ ಹಾಗೂ ಟೆಸ್ಲಾ ಸಿಇಒ ಎಲನ್ ಮಸ್ಕ್ ಅವರನ್ನೂ ಅದಾನಿ ಹಿಂದಿಕ್ಕಿದ್ದಾರೆ.

English summary
Congress leader Rahul Gandhi on Saturday questioned how is Gautam adani making money when everyone else has been struggling with the COVID-19 pandemic
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X