ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾದ ಮೋದಿ-ದೆವೊರಾ ಮಾತುಕತೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 24: ಅಮೆರಿಕದ ಹ್ಯೂಟ್ಸನ್ ನಲ್ಲಿ ನಡೆದ ಹೌಡಿ-ಮೋದಿ ಕಾರ್ಯಕ್ರಮದ ಕುರಿತು ಮೆಚ್ಚುಗೆ ಸೂಚಿಸಿದ ಕಾಂಗ್ರೆಸ್ ನಾಯಕ ಮಿಲಿಂದ್ ದೆವೊರಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದ್ದಾರೆ. ಉಭಯ ನಾಯಕರ ಟ್ವಿಟ್ಟರ್ ಸಂಭಾಷಣೆ ಇದೀಗ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಮೋದಿ-ಟ್ರಂಪ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಈ ಹುಡುಗ ಸಾತ್ವಿಕ್ ಹೆಗಡೆ!ಮೋದಿ-ಟ್ರಂಪ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಈ ಹುಡುಗ ಸಾತ್ವಿಕ್ ಹೆಗಡೆ!

"ಪ್ರಧಾನಿ ನರೇಂದ್ರ ಮೋದಿ ಅವರ ಹ್ಯೂಟ್ಸನ್ ಭಾಷಣ ಭಾರತದ ರಾಜತಾಂತ್ರಿಕ ಬೆಳವಣಿಗೆಯಲ್ಲಿ ಮಹತ್ವದ್ದು. ನಮ್ಮ ತಂದೆ ಮುರಳಿ ಭಾಯಿ(ಮಾಜಿ ಸಚಿವ ಮುರಳಿ ದೆವೊರಾ) ಅವರು ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯಕ್ಕೆ ಮೊದಲು ಅಡಿಪಾಯ ಹಾಕಿದವರು. ಡೊನಾಲ್ಡ್ ಟ್ರಂಪ್ ಅವರ ಆತಿಥ್ಯ ಮತ್ತು ಭಾರತೀಯ ಅಮೆರಿಕನ್ನರ ಕೊಡುಗೆಯನ್ನು ನೆನಪಿಸಿಕೊಂಡ ಅವರ ನಡೆ ನಮಗೆ ಹೆಮ್ಮೆ ಮೂಡಿಸಿದೆ" ಎಂದು ಮಿಲಿಂದ್ ದೆವೊರಾ ಟ್ವೀಟ್ ಮಾಡಿದ್ದರು.

ಹ್ಯೂಸ್ಟನ್ ಹೌಡಿ: ಮೋದಿ ಸಮ್ಮುಖದಲ್ಲಿ ನೆಹರೂ ಗುಣಗಾನ ಮಾಡಿದ ಅಮೆರಿಕ ಮುಖಂಡಹ್ಯೂಸ್ಟನ್ ಹೌಡಿ: ಮೋದಿ ಸಮ್ಮುಖದಲ್ಲಿ ನೆಹರೂ ಗುಣಗಾನ ಮಾಡಿದ ಅಮೆರಿಕ ಮುಖಂಡ

ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ, "ಧನ್ಯವಾದಗಳು ಮಿಲಿಂದ್ ದೆವೊರಾ. ಅಮೆರಿಕದೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವಲ್ಲಿ ನನ್ನ ಸ್ನೇಹಿತ, ದಿ. ಮುರಳಿ ದೆವೊರಾ ಜೀ ಅವರ ಕೊಡುಗೆಯನ್ನು ನೀವು ನೆನಪಿಸಿದ್ದು ಸರಿಯಾಗಿದೆ. ಅವರು ಇದ್ದಿದ್ದರೆ ಉಭಯ ದೇಶಗಳ ನಡುವೆ ಈಗಿರುವ ಬಾಂಧವ್ಯ ಮತ್ತು ಭಾರತೀಯರಿಗೆ ಅವರು ನೀಡಿದ ಆತಿಥ್ಯವನ್ನು ಕಂಡು ಖುಷಿ ಪಡುತ್ತಿದ್ದರು" ಎಂದು ಪ್ರತಿಕ್ರಿಯೆ ನೀಡಿದ್ದರು.

Congress Leader Milind Deora Praises Narendra Modi

ನಂತರ ಮತ್ತೆ ನರೇಂದ್ರ ಮೋದಿ ಅವರ ಈ ಟ್ವೀಟ್ ಗೆ ಉತ್ತರಿಸಿದ ದೆವೊರಾ, "ಧನ್ಯವಾದಗಳು ನರೇಂದ್ರ ಮೋದಿ ಜೀ. ಮುರಳಿ ಭಾಯಿ ಅವರು ದೇಶ ಮೊದಲು ಎಂಬ ಪರಿಕಲ್ಪನೆಯಲ್ಲಿ ನಂಬಿಕೆ ಇಟ್ಟು ಉಭಯ ದೇಶಗಳ ನಡುವಿನ ಬಾಂಧವ್ಯ ಗಟ್ಟಿಯಾಗುವಂತೆ ಮಾಡಿದರು. ನಾನು ಡೆಮಾಕ್ರೆಟಿಕ್ ಮತ್ತು ರಿಪಬ್ಲಿಕ್ ಸ್ನೇಹಿತರೊಂದಿಗೆ ಚರ್ಚೆ ನಡೆಸುವಾಗ, ಭಾರತ 21 ನೇ ಶತಮಾನದಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರವಾಗಿದೆಎಂಬುದನ್ನು ಅವರೇ ಒಪ್ಪಿಕೊಳ್ಳುತ್ತಾರೆ" ಎಂದು ಟ್ವೀಟ್ ಮಾಡಿದ್ದರು.

ವಿಡಿಯೋ: 'ಹೌಡಿ ಮೋದಿ' ಯಲ್ಲಿ ಕನ್ನಡ ಸೇರಿ ಹತ್ತು ಭಾಷೆ ಉಲಿದ ಮೋದಿವಿಡಿಯೋ: 'ಹೌಡಿ ಮೋದಿ' ಯಲ್ಲಿ ಕನ್ನಡ ಸೇರಿ ಹತ್ತು ಭಾಷೆ ಉಲಿದ ಮೋದಿ

ದೆವೊರಾ ಮತ್ತು ಪ್ರಧಾನಿ ಮೋದಿ ನಡುವಿನ ಈ ಸಂಭಾಷಣೆ ಕಾಂಗ್ರೆಸ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ನಾಯಕರ ಕೆಂಗಣ್ಣಿಗೆ ದೆವೊರಾ ತುತ್ತಾಗಿದ್ದಾರೆ.

English summary
Congress Leader Milind Deora Praises Narendra Modi for his Howdy, Modi Address.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X