ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರದ ಲಸಿಕೆ ನೀತಿಗೆ ಕಾಂಗ್ರೆಸ್ ಮತ್ತೆ ವಾಗ್ದಾಳಿ

|
Google Oneindia Kannada News

ನವದೆಹಲಿ, ಮೇ 18: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೊರೊನಾ ಲಸಿಕೆ ನೀತಿಯ ವಿರುದ್ಧ ಕಾಂಗ್ರೆಸ್ ಮತ್ತೊಮ್ಮೆ ವಾಗ್ದಾಳಿಯನ್ನು ನಡೆಸಿದೆ. ಭಾರತದ ಜನರ ಬದುಕಿನ ಹಣದಲ್ಲಿ ಸರ್ಕಾರ ಸುಳ್ಳು ರೂಪವನ್ನು ನಿರ್ಮಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪವನ್ನು ಮಾಡಿದೆ.

ಪಂಜಾಬ್‌ನ ಶ್ರೀ ಆನಂದ್‌ಪುರ್ ಸಾಹಿಬ್‌ನ ಸಂಸದ ಮನೀಶ್ ತಿವಾರಿ ಟ್ವಿಟ್ಟರ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ಈ ಮಾತುಗಳನ್ನು ಆಡಿದ್ದಾರೆ. ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿಯಾಗಿರುವ ತಿರುಮೂರ್ತಿ ವಿಶ್ವಸಂಸ್ಥೆಯಲ್ಲಿ ಆಡಿದ ಮಾತಿನ ವಿಡಿಯೋವನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.

Congress Leader Manish Tiwari slams Centre on Covid vaccine policy

ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿಯಾಗಿರುವ ತಿರುಮೂರ್ತಿ ಮಾತನಾಡುತ್ತಾ "ಭಾರತ ತನ್ನ ಸ್ವಂತ ಜನರಿಗೆ ನೀಡಿದ ಲಸಿಕೆಗಿಂತ ಹೆಚ್ಚಿನ ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡಿದೆ" ಎಂದು ವಿವರಿಸಿದ್ದರು. ಈ ವಿಡಿಯೋ ತುಣುಕಿನೊಂದಿಗೆ ಮನೀಶ್ ತಿವಾರಿ ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ವಾಗ್ದಾಳಿಯನ್ನು ನಡೆಸಿದ್ದಾರೆ.

ಇದರ ಜೊತೆಗೆ ಮನೀಶ್ ತಿವಾರಿ ಈ ಬಗ್ಗೆ ಲೋಕಸಭೆಯಲ್ಲಿ ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಅವರಿಗೆ ನಾನು ಎಚ್ಚರಿಕೆಯನ್ನು ಕೂಡ ನೀಡಿದ್ದೆ ಎಂದು ಈ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ದೇಶದ ಬಹುತೇಕ ರಾಜ್ಯಗಳಲ್ಲಿ ಕೊರೊನಾ ವೈರಸ್‌ನ ಲಸಿಕೆಯ ಕೊರತೆ ದೊಡ್ಡ ಪ್ರಮಾಣದಲ್ಲಿದೆ. ಈ ಕಾರಣದಿಂದಾಗಿ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಸತತ ವಾಗ್ದಾಳಿಯನ್ನು ನಡೆಸುತ್ತಿದೆ.

English summary
Congress Leader Manish Towari slams central on Covid vaccine policy with sharing a clipping of UN Permanent Representative TS Tirumurti briefing in UN.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X