ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಲಸಿಕೆ ಮೇಲೆ ಅಷ್ಟು ನಂಬಿಕೆಯಿದ್ದರೆ ನೀವೆಲ್ಲಾ ಇನ್ನೂ ತೆಗೆದುಕೊಂಡಿಲ್ಲ ಏಕೆ?"

|
Google Oneindia Kannada News

ನವದೆಹಲಿ, ಜನವರಿ 16: ಭಾರತದಲ್ಲಿ ಕೊರೊನಾ ಸೋಂಕಿನ ವಿರುದ್ಧದ ಲಸಿಕಾ ಅಭಿಯಾನ ಶನಿವಾರ ಆರಂಭಗೊಂಡಿದೆ. ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳನ್ನು ಭಾರತದಲ್ಲಿ ನೀಡಲಾಗುತ್ತಿದ್ದು, ಲಸಿಕೆ ಸಾಮರ್ಥ್ಯದ ಕುರಿತು ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಕೇಂದ್ರ ಸರ್ಕಾರದ ಮೇಲೆ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಈ ಹಿಂದೆಯೇ ಹಲವು ವೈದ್ಯರು ಕೊವ್ಯಾಕ್ಸಿನ್ ಲಸಿಕೆಯ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಜನರಿಗೆ ಈ ಲಸಿಕೆಗಳ ಆಯ್ಕೆ ಬಗ್ಗೆಯೂ ಸ್ವಾತಂತ್ರ್ಯ ನೀಡಲಾಗಿಲ್ಲ. ಇದು ನಿಯಮಗಳಿಗೆ ಸಂಪೂರ್ಣ ತದ್ವಿರುದ್ಧವಾಗಿದೆ ಎಂದು ತಿವಾರಿ ಮತ್ತೆ ಕೇಂದ್ರವನ್ನು ಪ್ರಶ್ನೆ ಮಾಡಿದ್ದಾರೆ. ಮುಂದೆ ಓದಿ...

"ಸರ್ಕಾರಿ ಕಾರ್ಯಕರ್ತರು ಲಸಿಕೆ ತೆಗೆದುಕೊಳ್ಳುತ್ತಿಲ್ಲವೇಕೆ?"

ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಈ ಲಸಿಕೆಗಳು ಸುರಕ್ಷಿತ ಎಂದು ಸರ್ಕಾರ ಪದೇ ಪದೇ ಹೇಳುತ್ತಿದೆ. ಆದರೆ ಸರ್ಕಾರದ ಯಾವೊಬ್ಬ ಕಾರ್ಯಕರ್ತನೂ ಲಸಿಕೆ ಪಡೆದುಕೊಂಡಿಲ್ಲ. ರಾಜಕೀಯ ನಾಯಕರು ಕೂಡ ಲಸಿಕೆ ತೆಗೆದುಕೊಳ್ಳುತ್ತಿಲ್ಲ. ಬೇರೆ ದೇಶಗಳಲ್ಲಿ ಹಾಗಾಗಿಲ್ಲ ಎಂದು ತಿವಾರಿ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಸಂಸದ ಆನಂದಪುರ ಸಾಹಿಬ್ ಕೂಡ ಪ್ರಶ್ನೆ ಮಾಡಿದ್ದು, "ಕೊರೊನಾ ಲಸಿಕೆಯನ್ನು ಸರ್ಕಾರಿ ಕಾರ್ಯಕರ್ತರು ಯಾಕೆ ಸ್ವೀಕರಿಸುತ್ತಿಲ್ಲ" ಎಂದಿದ್ದಾರೆ.

ಜನರು ಪ್ರಯೋಗ ಪಶುಗಳೆಂದುಕೊಂಡಿದ್ದೀರಾ?; ಮನೀಶ್ ತಿವಾರಿಜನರು ಪ್ರಯೋಗ ಪಶುಗಳೆಂದುಕೊಂಡಿದ್ದೀರಾ?; ಮನೀಶ್ ತಿವಾರಿ

"ಲಸಿಕೆ ಬಗ್ಗೆ ಜನರಿಗೆ ಆಯ್ಕೆ ಇಲ್ಲ"

ಕೊರೊನಾ ಲಸಿಕೆ ಬಗ್ಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿರುವುದು ಇದೇ ಮೊದಲಲ್ಲ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಕೊರೊನಾ ಲಸಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕೊರೊನಾ ಲಸಿಕೆ ಸ್ವೀಕರಿಸುವಲ್ಲಿ ಜನರಿಗೆ ಆಯ್ಕೆ ಇಲ್ಲ ಎಂದು ಸರ್ಕಾರ ಹೇಳಿದ ಮರುದಿನವೂ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ವಿರೋಧ ವ್ಯಕ್ತಪಡಿಸಿದ್ದರು.

 ಕೋವ್ಯಾಕ್ಸಿನ್ ಬಳಕೆ ಬಗ್ಗೆ ಅನುಮಾನ

ಕೋವ್ಯಾಕ್ಸಿನ್ ಬಳಕೆ ಬಗ್ಗೆ ಅನುಮಾನ

ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆಯ ಬಳಕೆಗೆ ಸರ್ಕಾರ ಅನುಮತಿ ನೀಡುತ್ತಿದ್ದಂತೆ ವಿಜ್ಞಾನಿಗಳು ಕೂಡ ಆತಂಕ ವ್ಯಕ್ತಪಡಿಸಿದ್ದರು. ಮೂರನೇ ಹಂತದ ಪ್ರಯೋಗವನ್ನು ಪೂರೈಸದ ಲಸಿಕೆಯನ್ನು ನೀಡಲಾಗುತ್ತಿದೆ. ಜೊತೆಗೆ ಜನರಿಗೂ ತಮಗೆ ಬೇಕಾದ ಲಸಿಕೆ ತೆಗೆದುಕೊಳ್ಳಲು ಅನುಮತಿ ನೀಡುತ್ತಿಲ್ಲವೇಕೆ? ಈ ಅಂಶಗಳು ಲಸಿಕೆಯ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡಿಸುತ್ತವೆ ಎಂದಿದ್ದರು.

 ವದಂತಿಗಳಿಗೆ ಕಿವಿಗೊಡಬೇಡಿ ಎಂದ ಪ್ರಧಾನಿ

ವದಂತಿಗಳಿಗೆ ಕಿವಿಗೊಡಬೇಡಿ ಎಂದ ಪ್ರಧಾನಿ

ಶನಿವಾರ ಕೊರೊನಾ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿಯೇ, ಕೊರೊನಾ ಸೋಂಕಿನ ಸಾಮರ್ಥ್ಯದ ಬಗ್ಗೆ ಅನುಮಾನ ಬೇಡ. ನಮ್ಮ ವಿಜ್ಞಾನಿಗಳು ಲಸಿಕೆಗಳ ಸಮರ್ಥತೆ ಬಗ್ಗೆ ಭರವಸೆ ನೀಡಿದ್ದಾರೆ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಲಸಿಕೆಗಳು ಪಡೆದುಕೊಂಡಿವೆ ಎಂದು ಪ್ರಧಾನಿ ಮೋದಿ ಜನರಲ್ಲಿ ಮನವಿ ಮಾಡಿದ್ದರು.

Recommended Video

ಕೊರೊನಾ ಲಸಿಕೆಯನ್ನ ಮೊದಲು ಜನಪ್ರತಿನಿಧಿಗಳು ತೆಗೆದುಕೊಳ್ಳಬೇಕು- ಶಾಸಕಿ ಸೌಮ್ಯ ರೆಡ್ಡಿ ಅಭಿಪ್ರಾಯ |Oneindia Kannada

English summary
Congress leader Manish Tewari once again attacked the Centre on Saturday over the vaccines against the coronavirus disease
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X