ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜರ್ ಬಿಡುಗಡೆ ಮಾಡಿದ್ದರಿಂದಲೇ ದಾಳಿ: ಬಿಜೆಪಿ ವಿರುದ್ಧ ದಿಗ್ವಿಜಯ್ ಆರೋಪ

|
Google Oneindia Kannada News

ನವದೆಹಲಿ, ಮಾರ್ಚ್ 14: ಜೈಶ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು 1999ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಬಿಡುಗಡೆ ಮಾಡಿದ್ದಕ್ಕೆ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

'ಮಸೂದ್ ಅಜರ್ ಜೀ' ಹೇಳಿಕೆ ರಾಹುಲ್ ಗಾಂಧಿ ವಿರುದ್ಧ ದೂರು'ಮಸೂದ್ ಅಜರ್ ಜೀ' ಹೇಳಿಕೆ ರಾಹುಲ್ ಗಾಂಧಿ ವಿರುದ್ಧ ದೂರು

ಉಗ್ರ ಮಸೂದ್‌ಗೆ ಚೀನಾ ಬೆಂಬಲ ವ್ಯಕ್ತವಾಗಿರುವುದಕ್ಕೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕಾರಣ ಎಂದು ಆರೋಪಿಸಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ತಿರುಗೇಟು ನೀಡಿರುವ ದಿಗ್ವಿಜಯ್ ಸಿಂಗ್, 'ನಿಮ್ಮ ಬಿಜೆಪಿ ಸರ್ಕಾರ ಮಸೂದ್ ಅಜರ್‌ನನ್ನು ತಾಲಿಬಾನ್‌ಗೆ ಹಸ್ತಾಂತರಿಸಿತ್ತು ಮತ್ತು ಅವರಿಗೆ ಮಿಲಿಯನ್‌ಗಟ್ಟಲೆ ಡಾಲರ್ ಹಣ ನೀಡಿತ್ತು. ಇದರ ಬಗ್ಗೆ ನೀವು ಏನಾದರೂ ಹೇಳಲು ಬಯಸಿದ್ದೀರಾ?' ಎಂದು ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ.

'ಅಜಿತ್ ದೋವಲ್, ಜೈಶೆ ಉಗ್ರ ಮಸೂದ್ ಅಜರ್ ಜೊತೆ ಪ್ರಯಾಣಿಸಿಲ್ಲ''ಅಜಿತ್ ದೋವಲ್, ಜೈಶೆ ಉಗ್ರ ಮಸೂದ್ ಅಜರ್ ಜೊತೆ ಪ್ರಯಾಣಿಸಿಲ್ಲ'

'44 ಸಿಆರ್‌ಪಿಎಫ್ ಯೋಧರು ಜೀವ ಕಳೆದುಕೊಂಡ ಪುಲ್ವಾಮಾ ದಾಳಿಯಲ್ಲಿ ಸಂಪೂರ್ಣ ಗುಪ್ತಚರ ವೈಫಲ್ಯ ಉಂಟಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಎಸ್‌ಎಯನ್ನು ನೀವು ಪ್ರಶ್ನಿಸಿದ್ದೀರಾ? ಕಂದಹಾರ್ ವಿಮಾನ ಹೈಜಾಕ್ ಸಂದರ್ಭದಲ್ಲಿ ನಿಮ್ಮ ಬಿಜೆಪಿ ಸರ್ಕಾರ ಜೈಶ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನನ್ನು ಬಿಡುಗಡೆ ಮಾಡದೆ ಇದ್ದಿದ್ದರೆ, 2002ರ ಸಂಸತ್ ದಾಳಿ ಮತ್ತು ಪುಲ್ವಾಮಾ ದಾಳಿಗಳನ್ನು ತಡೆಯಬಹುದಾಗಿತ್ತು' ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

Congress leader Digvijay Singh attacks bjp over Masood Azhar release in 1999

ಪುಲ್ವಾಮಾ ಉಗ್ರರ ದಾಳಿಯು ಒಂದು ಅಪಘಾತ ಎಂದು ಹೇಳಿಕೆ ನೀಡುವ ಮೂಲಕ ದಿಗ್ವಿಜಯ್ ಸಿಂಗ್ ವಿವಾದ ಸೃಷ್ಟಿಸಿದ್ದರು. ಅಲ್ಲದೆ, ಉಗ್ರರ ವಿರುದ್ಧ ಭಾರತ ನಡೆಸಿದ ವೈಮಾನಿಕ ದಾಳಿಯ ಫಲಿತಾಂಶ ಏನು ಎಂದು ಪ್ರಶ್ನಿಸಿದ್ದರು.

English summary
Congress senior leader Digvijay Singh on Thursday attacked the BJP government for releasing Jaish-e-Mohammad chief Masood Azhar in 1999.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X