ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಬರ್ಟ್‌ ವಾದ್ರಾ ಮೇಲೆ ಐಟಿ ದಾಳಿ, ಕಾಂಗ್ರೆಸ್‌ನಿಂದ ವಿರೋಧ

|
Google Oneindia Kannada News

Recommended Video

ಸೋನಿಯಾ ಅಳಿಯನಿಗೆ ಕಂಟಕ..! | Oneindia Kannada

ನವದೆಹಲಿ, ಡಿಸೆಂಬರ್ 07: ಸೋನಿಯಾ ಗಾಂಧಿ ಅಳಿಯ, ಉದ್ಯಮಿ ರಾಬರ್ಟ್‌ ವಾದ್ರಾ ಅವರ ಮೇಲೆ ಇಡಿ ದಾಳಿ ನಡೆಸಿರುವುದನ್ನು ಕಾಂಗ್ರೆಸ್‌ ವಿರೋಧಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಿಡಿಸಿರುವ ಕಾಂಗ್ರೆಸ್‌, ಬಿಜೆಪಿಯು ಉದ್ದೇಶಪೂರ್ವಕವಾಗಿ ಈ ಕಾರ್ಯ ಎಸಗಿದೆ ಎಂದಿದೆ.

ಸೋನಿಯಾ ಅಳಿಯನ ಆಪ್ತರಿಗೆ 'ಇಡಿ' ಆಘಾತ, ಬೆಂಗಳೂರಲ್ಲೂ ದಾಳಿ ಸೋನಿಯಾ ಅಳಿಯನ ಆಪ್ತರಿಗೆ 'ಇಡಿ' ಆಘಾತ, ಬೆಂಗಳೂರಲ್ಲೂ ದಾಳಿ

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ರಣದೀಪ್ ಸುರ್ಜೆವಾಲಾ, ಪಂಚ ರಾಜ್ಯಗಳ ಚುನಾವಣೆ ಸೋಲು ಖಚಿತವಾಗಿರುವ ಕಾರಣ ಮೋದಿ ಅವರು ತಮ್ಮ ಹಳೆಯ ತಂತ್ರವನ್ನು ಮುಂದುವರೆಸಿದ್ದು, ಐಟಿ, ಇಡಿ ಸಂಸ್ಥೆಗಳನ್ನು ತಮ್ಮ ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಬಳಸುತ್ತಿದ್ದಾರೆ ಎಂದಿದ್ದಾರೆ.

ಭೂ ಹಗರಣ: ರಾಬರ್ಟ್ ವದ್ರಾಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಭೂ ಹಗರಣ: ರಾಬರ್ಟ್ ವದ್ರಾಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್

ಕಳೆದ 54 ತಿಂಗಳುಗಳಿಂದಲೂ ರಾಬರ್ಟ್‌ ವಾದ್ರಾ ವಿರದ್ಧ ಮೋದಿ ಸರ್ಕಾರ ಒಂದಲ್ಲಾ ಒಂದು ರೀತಿಯಲ್ಲಿ ಪಿತೂರಿ ಮಾಡುತ್ತಲೇ ಬಂದಿತ್ತು, ಈಗ ಅಂತಿಮವಾಗಿ ರಾಜಕೀಯ ಲಾಭಕ್ಕಾಗಿ ವಾದ್ರಾ ವಿರುದ್ಧ ಐಟಿ, ಇಡಿ ಅಸ್ತ್ರ ಬಳಸಲಾಗಿದೆ ಎಂದು ಅವರು ಹೇಳಿದರು.

Congress lambasted on Modi after ED raids on Robert Vadra

ಎಫ್‌ಐಆರ್‌ ಸಹ ಇಲ್ಲದೆ, ವಾದ್ರಾ ಅವರ ನವದೆಹಲಿ, ಜೈಪುರ ನಿವಾಸ, ದೆಹಲಿಯ ಅವರ ಆಪ್ತರ ನಿವಾಸ, ನೋಯ್ಡಾದ ಅವರ ಸಹೋದರಿಯ ನಿವಾಸಗಳ ಮೇಲೆ ದಾಳಿ ಮಾಡಲಾಗಿದೆ. ಇದು ಕಾನೂನಿಗೆ ವಿರುದ್ಧ ಎಂದು ಕಾಂಗ್ರೆಸ್ ಆರೋಪಿಸಿದೆ.

ಬೆಂಗಳೂರಲ್ಲಿ 1100 ಎಕರೆ ಭೂಮಿ ಕಬಳಿಸಿದ್ದಾರೆ ರಾಬರ್ಟ್ ವಾದ್ರಾ ಬೆಂಗಳೂರಲ್ಲಿ 1100 ಎಕರೆ ಭೂಮಿ ಕಬಳಿಸಿದ್ದಾರೆ ರಾಬರ್ಟ್ ವಾದ್ರಾ

ವಾದ್ರಾ ವಕೀಲರು ಹೇಳಿರುವಂತೆ, ಕಚೇರಿಗಳು ತೆರೆಯುವ ಮುನ್ನವೇ ಇಡಿ ಅಧಿಕಾರಿಗಳು ಕಚೇರಿಗೆ ನುಗ್ಗಿ, ಬೀಗಗಳು ಒಡೆದು ಅಕ್ರಮ ಪ್ರವೇಶ ಮಾಡಿದ್ದಾರೆ. ವಾದ್ರಾ ಅವರು ಎಲ್ಲ ಸಂಸ್ಥೆಗಳಿಂದ ಬಂದಿದ್ದ ಎಲ್ಲ ನೊಟೀಸ್‌ಗಳಿಗೆ ಉತ್ತರ ನೀಡಿದ್ದರೂ ಸಹ ಹೀಗೆ ಮಾಡಲಾಗಿರುವುದು ವೈಯಕ್ತಿಕ ದ್ವೇಷ ತೋರಿಸುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.

English summary
Today ED raids on Robert Vadra house and office and his linked peoples. But Congress oppossed it it says Modi behaving like don.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X