ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಮತಾ ಸಮ್ಮುಖದಲ್ಲಿ ಕೀರ್ತಿ ಆಜಾದ್ ಹಾಗೂ ಅಶೋಕ್ ತನ್ವರ್ ಟಿಎಂಸಿಗೆ ಸೇರ್ಪಡೆ

|
Google Oneindia Kannada News

ನವದೆಹಲಿ, ನವೆಂಬರ್ 24: ಜೆಡಿಯು ಮಾಜಿ ನಾಯಕ ಪವನ್ ವರ್ಮಾ ನಂತರ, ಮಾಜಿ ಕ್ರಿಕೆಟಿಗ ಮತ್ತು ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್, ಅವರ ಪತ್ನಿ ಪೂನಂ ಆಜಾದ್ ಮತ್ತು ಮಾಜಿ ಹರ್ಯಾಣ ಕಾಂಗ್ರೆಸ್ ನಾಯಕ ಅಶೋಕ್ ತನ್ವರ್ ಅವರು ಮಂಗಳವಾರ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಭಾರತೀಯ ವಿದೇಶಾಂಗ ಸೇವೆಯ ಮಾಜಿ ಅಧಿಕಾರಿ ಪವನ್ ವರ್ಮಾ ಅವರು ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಅವರು ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಲಹೆಗಾರರಾಗಿದ್ದಾರೆ. ಪವನ್ ವರ್ಮಾ ಅವರನ್ನು 2020 ರಲ್ಲಿ ಜೆಡಿಯುನಿಂದ ಹೊರಹಾಕಲಾಯಿತು. 2016ರ ಜುಲೈವರೆಗೆ ಸಂಸದರಾಗಿದ್ದರು.

ಟಿಎಂಸಿ ಅಧ್ಯಕ್ಷೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೆಹಲಿಗೆ ಭೇಟಿ ನೀಡುತ್ತಿದ್ದಾರೆ. ಇದೇ ವೇಳೆ ಈ ನಾಯಕರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರು ನವೆಂಬರ್ 25 ರವರೆಗೆ ರಾಷ್ಟ್ರ ರಾಜಧಾನಿಯಲ್ಲಿರುತ್ತಾರೆ.

Congress Kirti Azad, Pavan Varma, Ex-Janata Dal United, Join Trinamool

ಟಿಎಂಸಿ ನಿರಂತರವಾಗಿ ಕಾಂಗ್ರೆಸ್‌ಗೆ ಹೊಡೆತ ನೀಡುತ್ತಿದೆ. ಇತ್ತೀಚೆಗೆ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಹಲವು ನಾಯಕರು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ.

ಪವನ್ ವರ್ಮಾ ಮತ್ತು ಕೀರ್ತಿ ಆಜಾದ್ ಅವರಲ್ಲದೆ, ಅಕ್ಟೋಬರ್ 2019 ರಲ್ಲಿ ಕಾಂಗ್ರೆಸ್ ತೊರೆದು ತಮ್ಮ ಪಕ್ಷವನ್ನು ಸ್ಥಾಪಿಸಿದ ಅಶೋಕ್ ತನ್ವರ್ ಕೂಡ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಸೇರಿದ್ದಾರೆ.

ಅವರನ್ನು ರಾಹುಲ್ ಗಾಂಧಿಯವರಿಗೆ ಬಹಳ ನಿಕಟವರ್ತಿ ಎಂದೇ ಪರಿಗಣಿಸಲಾಗಿತ್ತು. ಅವರು 2009-2014ರ ಅವಧಿಯಲ್ಲಿ ಸಿರ್ಸಾದಿಂದ ಸಂಸದರಾಗಿದ್ದರು ಮತ್ತು ಪಕ್ಷದ ಹರಿಯಾಣ ಘಟಕದ ಅಧ್ಯಕ್ಷರೂ ಆಗಿದ್ದರು. ಅವರು ಅಕ್ಟೋಬರ್ 2019 ರಲ್ಲಿ ಹರಿಯಾಣ ವಿಧಾನಸಭೆ ಚುನಾವಣೆಗೆ ಕೆಲವು ದಿನಗಳ ಮೊದಲು ಕಾಂಗ್ರೆಸ್ ತೊರೆದಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಅವರು ಅಪ್ನಾ ಭಾರತ್ ಮೋರ್ಚಾ ಎಂಬ ಪಕ್ಷವನ್ನು ಸ್ಥಾಪಿಸಿದರು.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಬಳಿಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ತಮ್ಮ ಹಕ್ಕು ಚಲಾಯಿಸಲು ಆರಂಭಿಸಿದ್ದಾರೆ.

ಮಮತಾ ಅವರ ಈ ಧ್ಯೇಯೋದ್ದೇಶದಲ್ಲಿ ಕಾಂಗ್ರೆಸ್ ಪಕ್ಷ ಗುರಿಯಾಗಿದೆ. ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್‌ನ ದೊಡ್ಡ ನಾಯಕರನ್ನು ಒಬ್ಬರ ನಂತರ ಒಬ್ಬರುನ್ನು ತೃಣಮೂಲ ಕಾಂಗ್ರೆಸ್‌ಗೆ ಬರ ಮಾಡಿಕೊಳ್ಳುತ್ತಿದ್ದಾರೆ. ದೇಶಾದ್ಯಂತ ತನ್ನ ನೆಲೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ.

ಟಿಎಂಸಿ ಸೇರಿದ್ದಾರೆ ಹಲವು ಕಾಂಗ್ರೆಸ್ ನಾಯಕರು: ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾದ ಕಾಂಗ್ರೆಸ್ ನಾಯಕರಲ್ಲಿ ಪ್ರಮುಖರೆಂದರೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್, ಮಾಜಿ ಗೋವಾ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಲುಯಿಜಿನ್ಹೋ ಫಲೈರೊ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ಮತ್ತು ಲಲಿತೇಶ್ ಪತಿ ತ್ರಿಪಾಠಿ, ಮಹಾನ್- ಹಿರಿಯ ಕಾಂಗ್ರೆಸ್ ನಾಯಕ ಕಮಲಾಪತಿ ತ್ರಿಪಾಠಿ ಅವರ ಮೊಮ್ಮಗ. ಇವರಲ್ಲಿ ಟಿಎಂಸಿ ಸುಶ್ಮಿತಾ ಮತ್ತು ಫೆಲೆರಿಯೊ ಅವರನ್ನು ರಾಜ್ಯಸಭೆಯ ಸಂಸದರನ್ನಾಗಿಯೂ ಮಾಡಿದೆ.

ಮಮತಾ ಬ್ಯಾನರ್ಜಿಯವರ ಮಿಷನ್ 2024 ಅನ್ನು ಅವರ ಕಾರ್ಯತಂತ್ರದ ಸಲಹೆಗಾರ ಪ್ರಶಾಂತ್ ಕಿಶೋರ್ ಅವರು ಕಾರ್ಯಗತಗೊಳಿಸುತ್ತಿದ್ದಾರೆ. ದೇಶದ ಎಲ್ಲ ಪ್ರಾದೇಶಿಕ ಪಕ್ಷಗಳ ನಾಯಕರ ಜತೆಗೂಡಿ ಈ ಕೆಲಸ ಮಾಡುತ್ತಿದ್ದಾರೆ. ಈ ಸಂಬಂಧ ದೆಹಲಿಯ ಶರದ್ ಪವಾರ್ ಅವರ ಮನೆಯಲ್ಲೂ ಸಭೆ ನಡೆದಿದ್ದು, ಶರದ್ ಪವಾರ್, ಯಶವಂತ್ ಸಿನ್ಹಾ ಸೇರಿದಂತೆ ಎಲ್ಲಾ ಪಕ್ಷಗಳ ನಾಯಕರು ಭಾಗಿಯಾಗಿದ್ದಾರೆ.

ನವೆಂಬರ್ 29 ರಂದು ಪ್ರಾರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಕೆಲವು ದಿನಗಳ ಮುಂಚಿತವಾಗಿ ಬ್ಯಾನರ್ಜಿ ಅವರು ರಾಜಧಾನಿಗೆ ಭೇಟಿ ನೀಡುತ್ತಿದ್ದಾರೆ. ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.

ಅಷ್ಟೇ ಅಲ್ಲ ಕಾಂಗ್ರೆಸ್ ಪಕ್ಷವನ್ನು ಒಡೆಯುವ ಈ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಮಮತಾ ಬ್ಯಾನರ್ಜಿ ಪ್ರಸ್ತುತ ದೆಹಲಿಯಲ್ಲಿದ್ದಾರೆ ಮತ್ತು ಇಂದು ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್ ಮತ್ತು ಹರ್ಯಾಣ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮತ್ತು ಸಂಸದ ಅಶೋಕ್ ತನ್ವರ್ ಅವರು ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.

Recommended Video

ಪುನೀತ್ ರಾಜ್‍ಕುಮಾರ್ ರನ್ನು ಪಕ್ಷಕ್ಕೆ ಕರೆತರಲು BJP ಮಾಡಿದ ಪ್ರಯತ್ನ ಒಂದಾ ಎರಡಾ? | Oneindia Kannada

English summary
Expelled Janata Dal (United) leader Pavan Varma and the Congress' Kirti Azad joined the Trinamool Congress in Delhi on Tuesday in the presence of Mamata Banerjee, in a move that marks the Bengal Chief Minister's first foray into Bihar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X