ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕೋಡಾ ಪೊಲಿಟಿಕ್ಸ್: ಪಿ.ಚಿದಂಬರಂ ಗೆ ಬಿಜೆಪಿ ತರಾಟೆ

|
Google Oneindia Kannada News

ನವದೆಹಲಿ, ಜನವರಿ 29: ಪ್ರಧಾನಿ ನರೇಂದ್ರ ಮೋದಿಯವರ 'ಪಕೋಡ' ಹೇಳಿಕೆಯನ್ನು ಗೇಲಿ ಮಾಡಿದ್ದ ಪಿ.ಚಿದಂಬರಂ ಅವರ ನಡೆಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ.

ಪಕೋಡಾ ಮಾರಾಟ ಮಾಡುವುದೂ ಒಂದು ಉದ್ಯೋಗ ಎಂಬ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ, ಪಕೋಡಾ ಮಾರುವುದೂ ಒಂದು ಉದ್ಯೋಗ ಎಂಬುದಾದರೆ ಭಿಕ್ಶಃಎ ಬೇಡುವುದೂ ಒಂದು ಉದ್ಯೋಗವೇ. ಇನ್ನು ಮೇಲೆ ತಮ್ಮ ಬದುಕನ್ನು ನಡೆಸುವುದಕ್ಕಾಗಿ ಭಿಕ್ಷೆ ಬೇಡುವ ಬಡ ಮತ್ತು ದುರ್ಬಲ ವರ್ಗದ ಜನರನ್ನೂ ಉದ್ಯೋಗಿಗಳು ಎಂದು ಪರಿಗಣಿಸೋಣ ಎಂದು ಪಿ.ಚಿದಂಬರಂ ವ್ಯಂಗ್ಯವಾಗಿ ಹೇಳಿದ್ದರು.

ಗುಜರಾತ್ ಅಭಿವೃದ್ಧಿಯ ಹುಳುಕುಗಳನ್ನು ಬಿಚ್ಚಿಟ್ಟ ಪಿ. ಚಿದಂಬರಂಗುಜರಾತ್ ಅಭಿವೃದ್ಧಿಯ ಹುಳುಕುಗಳನ್ನು ಬಿಚ್ಚಿಟ್ಟ ಪಿ. ಚಿದಂಬರಂ

"ತಮ್ಮ ಜೀವನ ನಿರ್ವಹಣೆಗಾಗಿ ಕಷ್ಟಪಟ್ಟು ದುಡಿವ ಯಾವುದೇ ಕೆಲಸವಾದರೂ ಅದನ್ನು ಪ್ರಧಾನಿ ನರೇಂದ್ರ ಮೋದಿ ಗೌರವಿಸುತ್ತಾರೆ. ಕೆಲಸದಲ್ಲಿ ಮೇಲು, ಕೀಳು ಎಂಬುದಿಲ್ಲ. ಪಕೋಡಾ ಮಾರುವುದೂ ಒಂದು ಉದ್ಯೋಗವೇ. ಅದನ್ನೂ ಗೌರವಿಸಬೇಕು ಎಂದು ಅವರು ಹೇಳಿದ್ದು. ಆದರೆ ಕಾಂಗ್ರೆಸ್ ಅದನ್ನು ಬೇರೆಯದೇ ರೀತಿಯಲ್ಲಿ ಅರ್ಥ ಮಾಡಿಕೊಂಡಿದೆ" ಎಂದು ಚಿದಂಬರಂ ಅವರನ್ನು ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.

Congress insulted 'poor Indians': BJP on Chidambaram's pakoda jibe

"ಸ್ವಾತಂತ್ರ್ಯ ಸಿಕ್ಕ ಲಾಗಾಯ್ತು ಕಾಂಗ್ರೆಸ್ ದೇಶಕ್ಕಾಗಿ ಏನು ಮಾಡಿದೆ? ತನಗಾಗಿ ಹಣ ಕೊಳ್ಳೆ ಹೊಡೆದು ದೇಶದ ಬಡವರು ಭಿಕ್ಷೆ ಬೇಡುವಂತೆ ಮಾಡಿದ್ದು ಕಾಂಗ್ರೆಸ್" ಎಂದವರು ಹೇಳಿದ್ದಾರೆ.

English summary
The Bharatiya Janata Party (BJP) on Sunday accused Congress of insulting "poor Indians" after its leader P Chidambaram took a jibe at Prime Minister Narendra Modi for saying that a 'pakoda' (fried snacks) seller earning Rs 200 a day should also be considered employed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X