ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಎನ್ ಯು ಹಿಂಸಾಚಾರ: ವಿವಿಗೆ ಕಾಂಗ್ರೆಸ್ ಸತ್ಯಪರಿಶೋಧನಾ ತಂಡ

|
Google Oneindia Kannada News

ನವದೆಹಲಿ, ಜನವರಿ.07: ನವದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರಕ್ಕೆ ವಿದ್ಯಾರ್ಥಿಗಳು ಕೆರಳಿ ಕೆಂಡವಾಗಿದ್ದಾರೆ. ಜ್ಞಾನದೇಗುಲದಲ್ಲಿ ರಾಜಕಾರಣ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.

ಹಿಂಸಾಚಾರ ನಡೆಸಿದ ದುಷ್ಕರ್ಮಿಗಳ ವಿರುದ್ಧ ಇಡೀ ವಿದ್ಯಾರ್ಥಿ ಸಮೂಹವೇ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದೆ. ಇದರ ಮಧ್ಯೆ ಹಿಂಸಾಚಾರದ ಹಿಂದಿನ ಅಸಲಿ ಸತ್ಯ ತಿಳಿಯಲು ಕಾಂಗ್ರೆಸ್ ವಿಶೇಷ ತಂಡವನ್ನು ರಚಿಸಿದೆ.

ದೀಪಿಕಾ ಪಡುಕೋಣೆ ಸಿನಿಮಾಗಳಿಗೆ ಬಿಜೆಪಿ ಬಹಿಷ್ಕಾರ, ಯಾಕೆ ಗೊತ್ತಾ?ದೀಪಿಕಾ ಪಡುಕೋಣೆ ಸಿನಿಮಾಗಳಿಗೆ ಬಿಜೆಪಿ ಬಹಿಷ್ಕಾರ, ಯಾಕೆ ಗೊತ್ತಾ?

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಸೋನಿಯಾ ಗಾಂಧಿ ಸಮಿತಿಯನ್ನು ರಚನೆ ಮಾಡಿದ್ದಾರೆ. ನಾಲ್ವರು ಸದಸ್ಯರನ್ನು ಒಳಗೊಂಡ ಸತ್ಯ ಪರಿಶೋಧನಾ ಸಮಿತಿಯು ಹಿಂಸಾಚಾರದ ಹಿಂದಿನ ಅಸಲಿ ಸತ್ಯವನ್ನು ತಿಳಿಯಲು ಮುಂದಾಗಲಿದೆ.

Congress Fact Finding Commitee Visit To JNU Campus At Jan.08

ಜನವರಿ.08ರಂದು ಜೆಎನ್ ಯು ಕ್ಯಾಂಪಸ್ ಗೆ ಸಮಿತಿ:

ಕಾಂಗ್ರೆಸ್ ನ ನಾಲ್ವರು ಸದಸ್ಯರನ್ನೊಳಗೊಂಡ ಸತ್ಯ ಪರಿಶೋಧನಾ ಸಮಿತಿಯು ಜನವರಿ.08ರ ಬುಧವಾರ ನವದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಕ್ಯಾಂಪಸ್ ಗೆ ಭೇಟಿ ನೀಡಲಿದೆ. ಈ ಹಿಂದೆ ಜನವರಿ.05ರಂದು ನಡೆದ ಹಿಂಸಾಚಾರದ ಹಿಂದಿರುವ ಅಸಲಿ ಸತ್ಯ ಏನು ಎಂಬುದರ ಬಗ್ಗೆ ಸಮಿತಿ ಸದಸ್ಯರು ವಿದ್ಯಾರ್ಥಿಗಳಿಂದಲೇ ಮಾಹಿತಿ ಸಂಗ್ರಹಿಸಲಿದ್ದಾರೆ.

English summary
Delhi JNU Protest: AICC Interim President Sonia Gandhi Form A Team. Congress Fact Finding Committee Visit To JNU Campus At Jan.08.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X