ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎ ಸ್ಯಾಟ್ ಯಶಸ್ವಿ: ಮನಮೋಹನ್ ಸಿಂಗ್ ಕನಸು ನನಸು ಎಂದ ಕಾಂಗ್ರೆಸ್

|
Google Oneindia Kannada News

ನವದೆಹಲಿ, ಮಾರ್ಚ್ 27: ಬಾಹ್ಯಾಕಾಶದಲ್ಲೇ ಸಕ್ರಿಯ ಉಪಗ್ರಹವನ್ನು ಹೊಡೆದುರುಳಿಸಿದ ಡಿಆರ್ ಡಿಒ ವಿಜ್ಞಾನಿಗಳನ್ನು ಅಭಿನಂದಿಸಿರುವ ಕಾಂಗ್ರೆಸ್ ಇದು ಮನಮೋಹನ್ ಸಿಂಗ್ ಅವಧಿಯಲ್ಲಿ ಆರಂಭಿಸಿದ್ದ ಮಿಷನ್ ಶಕ್ತಿ ಯೋಜನೆಯನ್ನು ಇಸ್ರೋ ಪೂರ್ಣಗೊಳಿಸಿದೆ ಎಂದು ಟ್ವೀಟ್ ಮಾಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಾಹ್ಯಾಕಾಶದಲ್ಲಿ ಸಕ್ರಿಯ ಉಪಗ್ರಹವೊಂದನ್ನು ಎ-ಸ್ಯಾಟ್ ಕ್ಷಿಪಣಿ ಬಳಕೆ ಮಾಡಿ ಹೊಡೆದುರುಳಿಸಿದ ಡಿಆರ್ ಡಿಒ ವಿಜ್ಞಾನಿಗಳ ಅಭೂತಪೂರ್ವ ಸಾಧನೆಯನ್ನು ಮುಕ್ತಕಂಠದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶ್ಲಾಘಿಸಿದ್ದಾರೆ.ಟ್ವಿಟ್ಟರ್ ನಲ್ಲಿ ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ವಿಜ್ಞಾನಿಗಳ ಈ ಸಾಧನೆ ನಿಜಕ್ಕೂ ಅದ್ಬುತ. ಅವರ ಸಾಧನೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಏನಿದು ಮಿಷನ್ ಶಕ್ತಿ- Anti- ಉಪಗ್ರಹ ಕ್ಷಿಪಣಿ ಅಸ್ತ್ರ? ಏನಿದು ಮಿಷನ್ ಶಕ್ತಿ- Anti- ಉಪಗ್ರಹ ಕ್ಷಿಪಣಿ ಅಸ್ತ್ರ?

ಇದೇ ವೇಳೆ ಈ ವಿಚಾರವನ್ನು ತಾವೇ ಖುದ್ದು ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತೂ ವ್ಯಂಗ್ಯ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವ ರಂಗಭೂಮಿ ದಿನಾಚರಣೆಯ ಶುಭಾಶಯಗಳು ಎಂದು ಹೇಳಿ ವ್ಯಂಗ್ಯ ಮಾಡಿದ್ದಾರೆ. ಆ ಮೂಲಕ ಡಿಆರ್ ಡಿಒ ಮಾಡಬೇಕಿದ್ದ ಘೋಷಣೆಯನ್ನು ಪ್ರಧಾನಿ ಮೋದಿ ಮಾಡಿದ್ದೇಕೆ ಎಂದು ಪರೋಕ್ಷವಾಗಿ ಕಿಡಿಕಾರಿದ್ದಾರೆ.

ಮನಮೋಹನ್ ಸಿಂಗ್ ಕನಸು ನನಸು ಎಂದ ಕಾಂಗ್ರೆಸ್

ಅಂತರಿಕ್ಷದಲ್ಲಿ ಕೃತಕ ಉಪಗ್ರಹ ನಾಶ ಪಡಿಸುವ ಎಸ್ಯಾಟ್ ತಂತ್ರಜ್ಞಾನದ ಯಶಸ್ವೀ ಪರೀಕ್ಷೆ ನಡೆಸಿದ ಡಿಆರ್‌ಡಿಓಗೆ ಅಭಿನಂದನೆಗಳು ಮನಮೋಹನ್ ಸಿಂಗ್ ಅವಧಿಯಲ್ಲಿ ಆರಂಭಿಸಿದ್ದ ಮಿಷನ್ ಶಕ್ತಿ ಯೋಜನೆಯನ್ನು ಇಸ್ರೊ ಪೂರ್ಣಗೊಳಿಸಿದೆ ಅಮೆರಿಕ, ರಷ್ಯ, ಚೀನಾ ಬಳಿಕ ದೇಶವನ್ನು ಸ್ಥಾಪಿತ ಅಂತರಿಕ್ಷ ಶಕ್ತಿಯಾಗಿಸುವ ಕಾಂಗ್ರೆಸ್ ಕನಸು ನನಸಾಗಿದೆ.

ಡಿಆರ್‌ಡಿಓ ವಿಜ್ಞಾನಿಗಳನ್ನು ಅಭಿನಂದಿಸಿ ಮೋದಿ ಕಾಲೆಳೆದ ರಾಹುಲ್

ಬಾಹ್ಯಾಕಾಶದಲ್ಲೇ ಸಕ್ರಿಯ ಉಪಗ್ರಹವನ್ನು ಹೊಡೆದುರುಳಿಸಿದ ಡಿಆರ್ ಡಿಒ ವಿಜ್ಞಾನಿಗಳನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅಭಿನಂಧಿಸಿದ್ದು, ಇದೇ ವೇಳೆ ಪ್ರಧಾನಿ ಮೋದಿ ಅವರಿಗೆ ವಿಶ್ವ ರಂಗಭೂಮಿ ದಿನಾಚರಣೆಯ ಶುಭಾಶಯ ಹೇಳುವ ಮೂಲಕ ಮೋದಿ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.

ಸ್ಯಾಟಲೈಟ್ ಮಿಸೈಲ್ ಮೂಲಕ ಬಾಹ್ಯಾಕಾಶದಲ್ಲೇ ಸಕ್ರಿಯ ಉಪಗ್ರಹವನ್ನು ಹೊಡೆದುರುಳಿಸಿದ ಡಿಆರ್ ಡಿಒ ವಿಜ್ಞಾನಿಗಳಿಗೆ ಕಾಂಗ್ರೆಸ್ ಅಭಿನಂದನೆ ಸಲ್ಲಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಸಾಧನೆ ಕುರಿತು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿ ಮಾಹಿತಿ ನೀಡಿದ ಬೆನ್ನಲ್ಲೇ ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ಡಿಆರ್ ಡಿಒ, ಇಸ್ರೋ ವಿಜ್ಞಾನಿಗಳ ಅಭೂತಪೂರ್ವ ಸಾಧನೆಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದೆ.

ಮೋದಿ ಹೇಳಿದ 'ಲೋ ಅರ್ಥ್ ಆರ್ಬಿಟ್ ಸ್ಯಾಟಲೈಟ್' ತಂತ್ರಜ್ಞಾನ: ಏನಿದು ಎಲ್‌ಇಒ? ಮೋದಿ ಹೇಳಿದ 'ಲೋ ಅರ್ಥ್ ಆರ್ಬಿಟ್ ಸ್ಯಾಟಲೈಟ್' ತಂತ್ರಜ್ಞಾನ: ಏನಿದು ಎಲ್‌ಇಒ?

ನೆಹರೂ ಅವರು 1962ರಲ್ಲಿ ಸ್ಪೇಸ್ ಪ್ರೋಗ್ರಾಮ್ ಆರಂಭಿಸಿದ್ದರು

ನೆಹರೂ ಅವರು 1962ರಲ್ಲಿ ಸ್ಪೇಸ್ ಪ್ರೋಗ್ರಾಮ್ ಆರಂಭಿಸಿದ್ದರು

ಅಂತೆಯೇ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಡಿಆರ್ ಡಿಒಗಳ ನಿರ್ಮಾಣದ ಕುರಿತು ಹಳೆಯ ನೆನಪುಗಳನ್ನು ಮೆಲುಕು ಹಾಕಿರುವ ಕಾಂಗ್ರೆಸ್, 1962ರಲ್ಲಿ ಅಂದಿನ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ಇಂಡಿಯನ್ ಸ್ಪೇಸ್ ಪ್ರೋಗ್ರಾಮ್ ಅನ್ನು ಆರಂಭಿಸಿದ್ದರು. ಆ ಬಳಿಕ ಮಾಜಿ ಪ್ರಧಾನಿ ದಿವಂಗತ ಶ್ರೀಮತಿ ಇಂದಿರಾಗಾಂಧಿ ಅವರು ಇಸ್ರೋ ಸಂಸ್ಥೆಯನ್ನು ನಿರ್ಮಾಣ ಮಾಡಿದ್ದರು. ಈ ಇಬ್ಬರು ಮಹಾನ್ ಸಾಧಕರ ಕಾರ್ಯದಿಂದಾಗಿ ಇಂದು ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆ ಪಡುವಂತಾಗಿದೆ.

1958ರಲ್ಲಿ ನೆಹರೂ ಅವರಿಂದ ಡಿಆರ್‌ಡಿಓ ಸ್ಥಾಪನೆಯಾಗಿತ್ತು

1958ರಲ್ಲಿ ನೆಹರೂ ಅವರಿಂದ ಡಿಆರ್‌ಡಿಓ ಸ್ಥಾಪನೆಯಾಗಿತ್ತು

ಅಂತೆಯೇ 1958ರಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರು ಅವರು ಡಿಆರ್ ಡಿಒ ಸ್ಥಾಪನೆ ಮಾಡಿದ್ದರು. ಭಾರತದ ರಕ್ಷಣಾ ಕ್ಷೇತ್ರದಲ್ಲಿ ಡಿಆರ್ ಡಿಒದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

English summary
Congress leaders congratulates ISRO and DRDO scientists for sattellite missile tests but ocks Prime minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X