ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಹೆಲಿಕಾಪ್ಟರ್ ನಲ್ಲಿದ್ದ ಆ 'ಕಪ್ಪು ಟ್ರಂಕ್' ಬಗ್ಗೆ ಕಾಂಗ್ರೆಸ್ ದೂರು

|
Google Oneindia Kannada News

Recommended Video

Lok Sabha Elections 2019: ಅನುಮಾನ ಹುಟ್ಟಿಸಿದ ಮೋದಿಯವರ ಟ್ರಂಕ್ ಬಗ್ಗೆ ದೂರು ಸಲ್ಲಿಸಿದ ಕಾಂಗ್ರೆಸ್

ನವದೆಹಲಿ, ಏಪ್ರಿಲ್ 14: ಕರ್ನಾಟಕದ ಚಿತ್ರದುರ್ಗಕ್ಕೆ ಚುನಾವಣೆ ಪ್ರಚಾರಕ್ಕೆ ತೆರಳಿದ ವೇಳೆ 'ಅನುಮಾನಾಸ್ಪದವಾದ ಕಪ್ಪು ಟ್ರಂಕ್' ವೊಂದು ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ನಲ್ಲಿ ಇದ್ದ ಬಗ್ಗೆ ಸಮಗ್ರವಾದ ತನಿಖೆ ಮಾಡಬೇಕು ಎಂದು ಭಾನುವಾರ ಕಾಂಗ್ರೆಸ್ ಪಕ್ಷ ಒತ್ತಾಯ ಮಾಡಿದೆ.

ಈ ವಿಚಾರದಲ್ಲಿ ನರೇಂದ್ರ ಮೋದಿ ಅವರು ತಾವು ಸ್ವಚ್ಛ ಎಂಬುದನ್ನು ಸಾಬೀತುಪಡಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ ಹೇಳಿದ್ದಾರೆ. ಆ ಟ್ರಂಕ್ ನಲ್ಲಿ ಏನಿತ್ತು ಎಂಬ ಬಗ್ಗೆ ಚುನಾವಣೆ ಆಯೋಗ ವಿಚಾರಣೆ ನಡೆಸಬೇಕು ಎಂದು ಕೂಡ ಅವರು ಹೇಳಿದ್ದಾರೆ.

ಮೋದಿ ಹೆಲಿಕಾಪ್ಟರ್ ನಿಂದ ಇಳಿಸಿದ(?) ಆ ನಿಗೂಢ ಬಾಕ್ಸ್ ನ ರಹಸ್ಯವೇನು?ಮೋದಿ ಹೆಲಿಕಾಪ್ಟರ್ ನಿಂದ ಇಳಿಸಿದ(?) ಆ ನಿಗೂಢ ಬಾಕ್ಸ್ ನ ರಹಸ್ಯವೇನು?

ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಕರ್ನಾಟಕದ ಕಾಂಗ್ರೆಸ್ ಘಟಕ ಈಗಾಗಲೇ ಚುನಾವಣೆ ಆಯೋಗಕ್ಕೆ ದೂರು ನೀಡಿದೆ. "ಪ್ರಧಾನಿಗಳ ಹೆಲಿಕಾಪ್ಟರ್ ಭದ್ರತೆಯಾಗಿ ಇತರ ಮೂರು ಹೆಲಿಕಾಪ್ಟರ್ ಗಳನ್ನು ನಾವು ನೋಡಿದ್ದೇವೆ. ಭೂ ಸ್ಪರ್ಶ ಅದ ಮೇಲೆ ಒಂದು ಕಪ್ಪು ಟ್ರಂಕ್ ತೆಗೆದು, ಅದನ್ನು ಖಾಸಗಿ ಕಾರಿನಲ್ಲಿ ತೆಗೆದುಕೊಂಡು ಹೋಗಲಾಯಿತು. ಆ ಕಾರು ಎಸ್ ಪಿಜಿಗೆ ಸೇರಿರಲಿಲ್ಲ" ಎಂದು ಆರೋಪಿಸಿದ್ದಾರೆ.

narendra modi

ಈ ಐದು ವರ್ಷದ ಬಿಜೆಪಿಯ ಆಡಳಿತಾವಧಿಯಲ್ಲಿ ಏನು ಕೆಲಸ ಮಾಡಿದ್ದಾರೆ ಎಂಬ ಬಗ್ಗೆ ದೇಶದ ಜನತೆಗೆ ಮೋದಿ ಲೆಕ್ಕ ನೀಡಬೇಕು ಎಂದು ಆನಂದ್ ಶರ್ಮಾ ಆಗ್ರಹಿಸಿದ್ದಾರೆ.

English summary
The Congress Sunday demanded a thorough probe into the alleged transportation of a “suspicious black trunk” in Prime Minister Narendra Modi’s helicopter during his visit to Chitradurg in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X