ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಸರ್ಕಾರ ರಚನೆ: ಕಾಂಗ್ರೆಸ್‌ನಿಂದ ಹತ್ತು ಪ್ರಶ್ನೆಗಳು

|
Google Oneindia Kannada News

ನವದೆಹಲಿ, ನವೆಂಬರ್ 23: ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಎನ್‌ಸಿಪಿ ಬಂಡಾಯ ಶಾಸಕರು ಸೇರಿಕೊಂಡು ಬೆಳ್ಳಂಬೆಳಿಗ್ಗೆ ಸರ್ಕಾರ ರಚನೆ ಮಾಡಿದ್ದು, ಶಿವಸೇನಾ, ಕಾಂಗ್ರೆಸ್‌ ಮತ್ತು ಎನ್‌ಸಿಪಿ ಮುಖಂಡರಿಗೆ ಆಘಾತ ತಂದಿದೆ.

ಈ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ವಕ್ತಾರ ರಣದೀಪ್ ಸುರ್ಜೇವಾಲಾ, ಹಿಂದಿನ ಬಾಗಿಲಿನಿಂದ ಅಧಿಕಾರ ಹಿಡಿಯಲಾಗಿದೆ. ಬಿಜೆಪಿ ಸರ್ಕಾರ ರಚಿಸಲು ರಾಜ್ಯಪಾಲರು ಹಾಗೂ ರಾಷ್ಟ್ರಪತಿ ಕಾರ್ಯಾಲಯವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿನೆಯ ಬೆನ್ನಲ್ಲೆ ಕಾಂಗ್ರೆಸ್ 10 ಪ್ರಶ್ನೆಗಳನ್ನು ಎತ್ತಿದ್ದು, ಅವು ಕೆಳಕಂಡಂತಿವೆ.

Congress Asks 10 Questions To BJP And Maharashtra Governor

1) ರಾಷ್ಟ್ರಪತಿ ಆಡಳಿತವನ್ನು ಅಂತ್ಯಗೊಳಿಸಲು ಬಿಜೆಪಿ ನಿರ್ಧರಿಸಿದ್ದು ಯಾವಾಗ? ಸರ್ಕಾರ ರಚನೆ ಮಾಡಬೇಕೆಂದು ತೀರ್ಮಾನ ಮಾಡಿದ್ದು ಯಾವಾಗ?

2) ಎಷ್ಟು ಮಂದಿ ಬಿಜೆಪಿ-ಎನ್‌ಸಿಪಿಯ ಶಾಸಕರು ದೇವೇಂದ್ರ ಫಡ್ನವೀಸ್‌ಗೆ ಬೆಂಬಲ ನೀಡಿದ್ದಾರೆ?

3) ಬೆಂಬಲ ಪತ್ರವನ್ನು ಕೇವಲ ಒಂದೇ ಗಂಟೆಯಲ್ಲಿ ರಾಜ್ಯಪಾಲರು ಪರಿಶೀಲಿಸಿ ಅದು ಸತ್ಯವೆಂಬ ನಿರ್ಣಯಕ್ಕೆ ಬಂದದ್ದು ಹೇಗೆ?

4) ರಾಷ್ಟ್ರಪತಿ ಆಡಳಿತವನ್ನು ತೆಗೆದದ್ದು ಯಾವ ಸಮಯಕ್ಕೆ?

5) ಕೇಂದ್ರ ಸಂಪುಟವು ಯಾವಾಗ ಸಭೆ ಸೇರಿತು? ಆ ಸಭೆಯು ಯಾವಾಗ ರಾಷ್ಟ್ರಪತಿಗಳಿಗೆ ತಮ್ಮ ಸಲಹೆಯನ್ನು ನೀಡಿ, ರಾಷ್ಟ್ರಪತಿ ಆಡಳಿತ ಅಂತ್ಯಮಾಡಲು ಸೂಚಿಸಿದರು?

6) ಕೇಂದ್ರ ಸಂಪುಟ ಸದಸ್ಯರು ರಾಷ್ಟ್ರಪತಿ ಆಡಳಿತ ಅಂತ್ಯಮಾಡುವಂತೆ ಯಾವಾಗ ರಾಜ್ಯಪಾಲರಿಗೆ ಸೂಚಿಸಿದರು?

7) ಕೇಂದ್ರ ಸಂಪುಟ ಬರೆದ ಪತ್ರವನ್ನು ರಾಜ್ಯಪಾಲರು ಅಂಗೀಕರಿಸಿದ್ದು ಯಾವಾಗ?

8) ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರನ್ನು ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನಿಸಿದ್ದು ಯಾವಾಗ? ಅವರು ಅವರು ಪ್ರಮಾಣ ವಚನ ಸ್ವೀಕರಿಸಿದ್ದು ಯಾವ ಸಮಯಕ್ಕೆ?

9) ಒಂದೇ ಒಂದು ಸುದ್ದಿ ಮಾಧ್ಯಮದ ಹೊರತಾಗಿ ಇನ್ನಾವ ಮಾಧ್ಯಮದವರೂ ಉಪಸ್ಥಿತರಿರಲಿಲ್ಲ ಏಕೆ? ಮುಖ್ಯ ನ್ಯಾಯಮೂರ್ತಿಯೂ ಇರಲಿಲ್ಲ. ಜನರೂ ಇರಲಿಲ್ಲ ಏಕೆ?

10) ಫಡ್ನವೀಸ್ ಸರ್ಕಾರ ಯಾವಾಗ ಬಹುಮತ ಸಾಬೀತು ಮಾಡಬೇಕು ಎಂದು ಏಕೆ ರಾಜ್ಯಪಾಲರು ಇನ್ನೂ ಹೇಳಿಲ್ಲ?

English summary
BJP and NCP rebel MLAs form government. Congress asks 10 questions regarding this urgent government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X