ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಧ್ಯಮಗಳಿಗೆ ನೋ ಎಂಟ್ರಿ! ಬಿಕ್ಕಟ್ಟಿನ ನಂತರ ಕಾಂಗ್ರೆಸ್ ನಿಂದ ಖಡಕ್ ನಿರ್ಧಾರ

|
Google Oneindia Kannada News

ನವದೆಹಲಿ, ಮೇ 30: ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ನಲ್ಲಿ ಅಧ್ಯಕ್ಷ ಪದವಿ ಮತ್ತು ರಾಹುಲ್ ಗಾಂಧಿ ರಾಜೀನಾಮೆಯ ಕುರಿತಂತೆ ಎದ್ದ ಬಿಕ್ಕಟ್ಟಿನ ಶಮನಕ್ಕಾಗಿ ಕಾಂಗ್ರೆಸ್ ಹೊಸ ನಿರ್ಧಾರ ತೆಗೆದುಕೊಂಡಿದೆ.

ಮೋದಿ ಸುನಾಮಿ ಮುಂದೆ ಮಕಾಡೆ ಮಲಗಿದ ಕುಟುಂಬ ರಾಜಕಾರಣಿಗಳು ಮೋದಿ ಸುನಾಮಿ ಮುಂದೆ ಮಕಾಡೆ ಮಲಗಿದ ಕುಟುಂಬ ರಾಜಕಾರಣಿಗಳು

ಇನ್ನೊಂದು ತಿಂಗಳ ಕಾಲ ಯಾವುದೇ ಟಿವಿ ಚಾನೆಲ್ ಗಳ ಪ್ಯಾನಲ್ ಚರ್ಚೆ ಅಥವಾ ಬೈಟ್ಸ್ ಗಳಿಗೆ ತಮ್ಮ ಪ್ರತಿನಿಧಿಗಳನ್ನು ಕಳಿಸದಿರಲು ಅದು ನಿರ್ಧರಿಸಿದೆ. ಜೊತೆಗೆ ಚಾನೆಲ್ ಗಳು ಸಹ ಯಾವುದೇ ಕಾಂಗ್ರೆಸ್ ನಾಯಕರನ್ನಾಗಲಿ, ಪ್ರತಿನಿಧಿಗಳನ್ನಾಗಲೀ ಆಹ್ವಾನಿಸಬಾರದು ಎಂದು ಅದು ಮನವಿ ಮಾಡಿದೆ.

ರಾಹುಲ್ ಗಾಂಧಿಯನ್ನು ಸೋಲಿಸಿದ್ದೇಕೆ: ಅಮೇಥಿ ವ್ಯಕ್ತಿ ಬಿಚ್ಚಿಟ್ಟ ಸತ್ಯ ರಾಹುಲ್ ಗಾಂಧಿಯನ್ನು ಸೋಲಿಸಿದ್ದೇಕೆ: ಅಮೇಥಿ ವ್ಯಕ್ತಿ ಬಿಚ್ಚಿಟ್ಟ ಸತ್ಯ

ಈ ಕುರಿತು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.

ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ನ ಕಳಪೆ ಪ್ರದರ್ಶನದಿಂದಾಗಿ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಆರಂಭವಾಗಿದ್ದು, ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಮಾಧ್ಯಮಗಳಲ್ಲಿ ಈ ಬಗ್ಗೆ ಆಹಾರ ರಹಿತ ವರದಿಗಳು, ಚರ್ಚೆಗಳು ನಡೆಯುತ್ತಿದ್ದು, ಅದರಿಂದ ಪಕ್ಷದ ವರ್ಚಸ್ಸು ಮತ್ತಷ್ಟು ಕುಸಿಯಬಹುದು ಎಂಬ ಆತಂಕದಲ್ಲಿ ಕಾಂಗ್ರೆಸ್ ಈ ನಿರ್ಧಾರಕ್ಕೆ ಬಂದಿದೆ.

Cong to boycott TV channels for a month

ಪಕ್ಷದ ವರಿಷ್ಠರು, ಕಾರ್ಯಕರ್ತರು ನೀಡುತ್ತಿರುವ ಹೇಳಿಕೆಯನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳಲಾಗುತ್ತಿದ್ದು ಇದು ಪಕ್ಷದಲ್ಲಿ ಮತ್ತಷ್ಟು ಒಡಕು ಮೂಡಿಸಬಹುದು ಮತ್ತು ಇಂಥ ವದಂತಿಗಳಿಗೆ ತಾತ್ಕಾಲಿಕವಾಗಿ ತೆರೆ ಎಳೆಯುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

English summary
Congress spokeperson Randeep Surjewala tweets, Congress Party has decided to not send its spokespersons on television debates for a month. All media channels, editors are requested to not place Congress representatives on their shows.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X