ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಚೇರಿಗಳನ್ನು ಖಾಲಿ ಮಾಡುತ್ತಿವೆ ದೊಡ್ಡ ದೊಡ್ಡ ಕಂಪನಿಗಳು

|
Google Oneindia Kannada News

ನವ ದೆಹಲಿ, ಮೇ 20: ಲಾಕ್‌ಡೌನ್ ಕಾರಣ ಭಾರತದಲ್ಲಿ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ನೀಡಿವೆ. ಕೊರೊನಾ ಭೀತಿಯಿಂದ ವರ್ಕ್‌ ಫ್ರಮ್‌ ಹೋಮ್‌ ಇನ್ನಷ್ಟು ತಿಂಗಳು ಮುಂದುವರೆಯಲಿದೆ.

ಒಂದು ಕಡೆ ವರ್ಕ್‌ ಫ್ರಮ್‌ ಹೋಮ್ ಹೆಚ್ಚಾಗಿದ್ದು, ಅನೇಕ ಕಂಪನಿಗಳು ಕಚೇರಿಗಳನ್ನು ಖಾಲಿ ಮಾಡುತ್ತಿವೆ. ಉದ್ಯೋಗಿಗಳು ಮನೆಯಲ್ಲಿಯೇ ಕೆಲಸ ಮಾಡುವ ಕಾರಣ ಕಚೇರಿಗಳು ಅನಗತ್ಯ ಎಂದು ಕಂಪನಿಗಳು ಚಿಂತನೆ ನಡೆಸಿವೆ.

ಕೊರೊನಾ ನಂತರದ ಯುಗದಲ್ಲೂ 'ವರ್ಕ್ ಫ್ರಮ್ ಹೋಮ್' ಸರ್ವೇ ಸಾಮಾನ್ಯ!ಕೊರೊನಾ ನಂತರದ ಯುಗದಲ್ಲೂ 'ವರ್ಕ್ ಫ್ರಮ್ ಹೋಮ್' ಸರ್ವೇ ಸಾಮಾನ್ಯ!

ಜೋಮ್ಯಾಟೋ ಕಂಪನಿ ವಿಶ್ವಾದ್ಯಂತ 150 ಕಚೇರಿಗಳನ್ನು ಹೊಂದಿತ್ತು. ಆದರೆ, ಈಗ ಅವುಗಳ ಸಂಖ್ಯೆ ಇಳಿಕೆಯಾಗಿದೆ. ಕೆಲವು ಕಚೇರಿಗಳಿಗೆ ಜೋಮ್ಯಾಟೋ ಗುಡ್ ಬಾಯ್ ಹೇಳಿದೆ. ಇಂಡಸ್ಇಂಡ್ ಬ್ಯಾಂಕ್ ಸಹ ಮುಂಬೈನ ಕೆಲವು ಕಚೇರಿಗಳನ್ನು ಖಾಲಿ ಮಾಡಿದೆ.

Companies Have Started To Vacate Leased Spaces As Work From Home Continue

ಲಾಕ್‌ಡೌನ್‌ನಿಂದ ಅನೇಕ ಕಂಪನಿಗಳು ಹಣಕಾಸಿನ ಸಮಸ್ಯೆಯಾಗಿದೆ. ಹೀಗಾಗಿ, ಕಂಪನಿಗಳು ಖರ್ಚನ್ನು ಕಡಿಮೆ ಮಾಡುವುದು ಅನಿವಾರ್ಯವಾಗಿದೆ. ಅನೇಕ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ. ಮಾತ್ರವಲ್ಲದೆ, ಕಂಪನಿಗಳ ಕಚೇರಿಗಳ ಕಟ್ಟಡಗಳು ಬಾಡಿಗೆಯದ್ದಾಗಿದ್ದು, ಅದರಿಂದ ಹೊರ ಬಂದಿವೆ. ಈ ಮೂಲಕ ಕಂಪನಿಯ ಖರ್ಚನ್ನು ಕಡಿಮೆ ಮಾಡಿಕೊಂಡಿದೆ.

ವರ್ಕ್‌ ಫ್ರಮ್‌ ಹೋಮ್ ಸಂಪ್ರದಾಯ ಭಾರತದಲ್ಲಿ ಲಾಕ್‌ಡೌನ್‌ನಿಂದ ಹೆಚ್ಚಾಗಿದೆ. ಅನೇಕ ಕಂಪನಿಗಳು ಇದನ್ನು ಹಾಗೆಯೇ ಮುಂದುವರೆಸಲು ಪ್ಲಾನ್ ಮಾಡಿವೆ. ಪರಿಣಾಮ ಕಂಪನಿಗಳು ಕಚೇರಿಗಳಿಗೆ ಗುಡ್ ಬಾಯ್ ಹೇಳುತ್ತಿವೆ.

English summary
Work from home in India: Many companies have started to vacate leased spaces as work from home continue to employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X