ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಕ್ವಶ್ಚನ್ ಬ್ಯಾಂಕ್

|
Google Oneindia Kannada News

ನವದೆಹಲಿ, ಮಾರ್ಚ್ 20: ಸಿಬಿಎಸ್‌ಇಯ 9-12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕ್ವಶ್ಚನ್ ಬ್ಯಾಂಕ್ ಸಿದ್ಧಪಡಿಸಲಾಗುತ್ತಿದ್ದು, ಮುಂದಿನ ವರ್ಷದಿಂದ ಇದು ವಿದ್ಯಾರ್ಥಿಗಳ ಕೈ ಸೇರಲಿದೆ.

ಕಠಿಣ ಪ್ರಶ್ನೆಗಳನ್ನು ಯಾವ ರೀತಿ ಕೇಳಬಹುದು, ವಿದ್ಯಾರ್ಥಿಗಳು ಯಾವ ರೀತಿ ಸಿದ್ಧವಾಗಬೇಕು, ಪಠ್ಯಗಳ ನಡುವಿನ ಪ್ರಶ್ನೆಗಳು ಯಾವ ರೀತಿ ಬರುತ್ತವೆ ಎನ್ನುವುದಕ್ಕೆ ಈ ಕ್ವಶ್ಚನ್ ಬ್ಯಾಂಕ್ ನೀಡಲಾಗುತ್ತಿದೆ.

ಸಿಬಿಎಸ್‌ಇ ಫಲಿತಾಂಶ: ಟಾಪ್‌ 3 ಪಟ್ಟಿಯಲ್ಲಿ ಕರ್ನಾಟಕ ಇಲ್ಲಸಿಬಿಎಸ್‌ಇ ಫಲಿತಾಂಶ: ಟಾಪ್‌ 3 ಪಟ್ಟಿಯಲ್ಲಿ ಕರ್ನಾಟಕ ಇಲ್ಲ

ಎಲ್ಲಾ ವಿಷಯಗಳ ಪಠ್ಯಗಳಿಂದ ಆಯ್ದ ಪ್ರಶ್ನೆಗಳನ್ನು ಕಳುಹಿಸಲು ಸಿಬಿಎಸ್‌ಇ ಯ ಎಲ್ಲಾ ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಮೊದಲ ಪ್ರಮುಖ ವಿಷಯಗಳಲ್ಲಿ ಕ್ವಶ್ಚನ್ ಬ್ಯಾಂಕ್ ಸಿದ್ಧಪಡಿಸಲಾಗುತ್ತದೆ. ಕೊನೆಗೆ ಹಂತ ಹಂತವಾಗಿ ಉಳಿದ ವಿಷಗಳಲ್ಲೂ ಸಿದ್ಧಪಡಿಸಲಾಗುತ್ತದೆ.

Coming CBSE question bank for boards next year

ವಿಷಯ ತಜ್ಞರನ್ನು ಕರೆಸಿ ಸಭೆ ನಡೆಸಿ ಪ್ರತಿ ವರ್ಷದ ಪ್ರಶ್ನೆ ಪತ್ರಿಕೆ ತಯಾರಿಸಲಾಗುತ್ತಿತ್ತು.ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತಹ ಪ್ರಶ್ನೆಗಳಿರಬೇಕು, ಅದನ್ನು ತಿಳಿಸಿಕೊಡುವ ಶಿಕ್ಷಕರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧವಾಗಬೇಕು ಎಂದು ಸಿಬಿಎಸ್‌ಇ ಕಾರ್ಯದರ್ಶಿ ಅನುರಾಗ್ ತ್ರಿಪಾಠಿ ತಿಳಿಸಿದ್ದಾರೆ.

English summary
In a first, the CBSE will prepare question bank for class 9-12. These question will be used in the board examination from next year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X