ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಜೆ ಆಕಾಶದಲ್ಲಿ ಧೂಮಕೇತು ನೋಡುವುದನ್ನು ಮರೆಯದಿರಿ: ಮತ್ತೆ 6,800 ವರ್ಷಗಳವರೆಗೆ ಹಿಂತಿರುಗುವುದಿಲ್ಲ

|
Google Oneindia Kannada News

ನವದೆಹಲಿ, ಜುಲೈ 17: ಇತ್ತೀಚೆಗಷ್ಟೇ ಭೂಮಿಯತ್ತ ಧಾವಿಸಿದ ಅಪರೂಪದ ಧೂಮಕೇತು ಸಂಜೆ ಆಕಾಶದಲ್ಲಿ ಗೋಚರಿಸುತ್ತಿದ್ದು, ನೀವು ಮಿಸ್ ಮಾಡದೇ ನೋಡಲು ಮರೆಯದಿರಿ. ಏಕೆಂದರೆ ಈ ಧೂಮಕೇತು 6,800 ವರ್ಷಗಳವರೆಗೆ ಹಿಂತಿರುಗುವುದಿಲ್ಲ ಎಂದು ನಾಸಾ ಹೇಳುತ್ತದೆ.

Recommended Video

Jofra Archer ,ಬಾಲಿಗೆ ಉಗುಳು ಹಚ್ಚಿದ್ದಕ್ಕೆ ಆಟದಿಂದ ಹೊರಕ್ಕೆ Eng vs WI 2nd test | Oneindia Kannada

ನಾಸಾ ಪ್ರಕಾರ, ಉತ್ತರ ಗೋಳಾರ್ಧದಲ್ಲಿ ವೀಕ್ಷಕರಿಗೆ ಸೂರ್ಯಾಸ್ತದ ನಂತರ ಧೂಮಕೇತು NEOWISE ಅನ್ನು ಕಾಣಬಹುದು. ಆದರೆ ದಕ್ಷಿಣ ಗೋಳಾರ್ಧದದಲ್ಲಿ ಇದು ಗೋಚರಿಸುವುದಿಲ್ಲ.

ಭೂಮಿಯ ಕಡೆಗೆ ಬರುತ್ತಿದೆ ಅಪರೂಪದ ಧೂಮಕೇತು: 20 ದಿನಗಳು ಭಾರತದಲ್ಲಿ ಗೋಚರಭೂಮಿಯ ಕಡೆಗೆ ಬರುತ್ತಿದೆ ಅಪರೂಪದ ಧೂಮಕೇತು: 20 ದಿನಗಳು ಭಾರತದಲ್ಲಿ ಗೋಚರ

"ನೀವು ಉತ್ತರ ಗೋಳಾರ್ಧದಲ್ಲಿದ್ದರೆ, ನೀವು ಅದನ್ನು ನೋಡಬಹುದು" ಎಂದು ಧೂಮಕೇತುವನ್ನು ಕಂಡುಹಿಡಿದ ನಾಸಾ ಬಾಹ್ಯಾಕಾಶ ದೂರದರ್ಶಕದ NEOWISE ನ ಉಪ ಪ್ರಧಾನ ತನಿಖಾಧಿಕಾರಿ ಜೋ ಮಾಸಿಯೊರೊ ಬುಧವಾರ (ಜುಲೈ 15) ನಾಸಾ ಸೈನ್ಸ್ ಲೈವ್ ವೆಬ್‌ಕಾಸ್ಟ್‌ನಲ್ಲಿ ಹೇಳಿದರು. "ಮುಂದಿನ ಒಂದೆರಡು ದಿನಗಳು ಪ್ರಗತಿಯಲ್ಲಿರುವಾಗ, ಅದು ಸಂಜೆಯ ಆಕಾಶದಲ್ಲಿ ಹೆಚ್ಚು ಹೊತ್ತು ಕಾಣುತ್ತದೆ, ಆದ್ದರಿಂದ ನೀವು ಬಿಗ್ ಡಿಪ್ಪರ್ ಅಡಿಯಲ್ಲಿ ವಾಯುವ್ಯ ದಿಕ್ಕಿನಲ್ಲಿ ನೋಡಲು ಬಯಸುತ್ತೀರಿ." (ಬಿಗ್ ಡಿಪ್ಪರ್ ಒಂದು ಲ್ಯಾಡಲ್-ಆಕಾರದ ನಕ್ಷತ್ರ ಮಾದರಿಯಾಗಿದ್ದು ಅದು ಉರ್ಸಾ ಮೇಜರ್, ಬಿಗ್ ಬೇರ್ ನಕ್ಷತ್ರಪುಂಜದ ಭಾಗವಾಗಿದೆ.)

Comet NEOWISE: Dont Miss To Watch In The Evening On Sky

ನೀವು ಧೂಮಕೇತುವನ್ನು ನೋಡಲು ಬಯಸಿದರೆ, ನಗರದ ಲೈಟ್‌ನಿಂದ ದೂರವಿರಲು ಪ್ರಯತ್ನಿಸಿ. ಏಕೆಂದರೆ ಆಗಸದಲ್ಲಿ ಯಾವುದೇ ತಡೆಯಿಲ್ಲದೆ ನೋಟವನ್ನು ಹೊಂದಿರುವ ಸ್ಥಳವನ್ನು ನೋಡಿಕೊಳ್ಳಬೇಕು. ಜೊತೆಗೆ ನಿಮ್ಮ ನಗರದ ಸೂರ್ಯಾಸ್ತದ ಸಮಯವನ್ನು ತಿಳಿದುಕೊಂಡು, ಸೂರ್ಯಾಸ್ತದ 45 ನಿಮಿಷಗಳ ನಂತರ ಈ ಧೂಮಕೇತುವನ್ನು ಆಗಸದಲ್ಲಿ ಕಂಡುಹಿಡಿಯಬಹುದು.

ಬ್ರಹ್ಮಾಂಡದಿಂದ ನಮ್ಮ ಸೌರಮಂಡಲಕ್ಕೆ ಅತಿಥಿಯಾಗಿ ಆಗಮಿಸಿರುವ C/2020 F3 ಧೂಮಕೇತು ಜುಲೈ 14 ರಿಂದ 20 ದಿನಗಳವರೆಗೆ ಸೌರಮಂಡಲದಲ್ಲಿ ಇರುತ್ತದೆ. ಸೂರ್ಯಾಸ್ತದ 45 ನಿಮಿಷಗಳ ನಂತರ ಸುಮಾರು 20 ನಿಮಿಷಗಳ ಕಾಲ ಇದು ಗೋಚರಿಸುತ್ತದೆ. ಜನರು ಇದನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು.

English summary
Amazing Comet neowise that is now visible in the evening sky, and it's a sight you won't want to miss. After all, this comet won't be back for 6,800 years, NASA says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X