ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ವಿದ್ಯಾರ್ಥಿಗಳಿಂದ ನಿತ್ಯ 150 ಸಲ ಫೋನ್ ಬಳಕೆ: ಅಧ್ಯಯನ

By Nayana
|
Google Oneindia Kannada News

ನವದೆಹಲಿ, ಮೇ 21: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ ಫೋನ್‌ ಬಳಸದೆ ಇರುವವರೇ ಕಡಿಮೆ. ಅದರಲ್ಲೂ ವಿದ್ಯಾರ್ಥಿಗಳು ದಿನಕ್ಕೆ 150 ಬಾರಿ ತಮ್ಮ ಸ್ಮಾರ್ಟ್‌ ಫೋನ್ ಬಳಕೆ ಮಾಡುತ್ತಾರೆ ಎನ್ನುವ ವರದಿಯೊಂದು ಲಭ್ಯವಾಗಿದೆ.

ಭಾರತದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ದಿನಕ್ಕೆ 150ಕ್ಕೂ ಹೆಚ್ಚು ಬಾರಿ ತಮ್ಮ ಮೊಬೈಲ್‌ ಚೆಕ್ಕ ಮಾಡುತ್ತಾರೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಅಲಿಗಢ ಮುಸ್ಲಿಂ ವಿದ್ಯಾಲಯ ಹಾಗೂ ಭಾರತೀಯ ಸಾಮಾಜಿಕ ವಿಜ್ಞಾನ ಅಧ್ಯಯನ ಪರಿಷತ್ತು ಜಂಟಿಯಾಗಿ ಅಧ್ಯಯನ ನಡೆಸಿತ್ತು.

ವಿಮಾನದಲ್ಲಿ ಇನ್ನುಮುಂದೆ ಮೊಬೈಲ್ ಬಳಸಬಹುದು!ವಿಮಾನದಲ್ಲಿ ಇನ್ನುಮುಂದೆ ಮೊಬೈಲ್ ಬಳಸಬಹುದು!

ಅದರಲ್ಲಿ ಕೆಲವು ಅಂಶಗಳು ಬೆಳಕಿಗೆ ಬಂದಿವೆ. ಸ್ಮಾರ್ಟ್‌ ಫೋನ್ ಅವಲಂಬನೆ, ಖರೀದಿ ನಡವಳಿಕೆ, ಡಿಜಿಟಲ್ ಇಂಡಿಯಾ ಉಪಕ್ರಮಗಳ ಪ್ರಭಾವ ಎಂಬ ಶೀರ್ಷಿಕೆಯಡಿ 20 ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಈ ಸಂಶೋಧನೆ ಕೈಗೊಳ್ಳಲಾಗಿದೆ. ಪ್ರತಿ ಕೇಂದ್ರದಲ್ಲಿ ತಲಾ 200 ವಿದ್ಯಾರ್ಥಿಗಳ ಸಂದರ್ಶನ ನಡೆಸಿದೆ.

College students in India uses mobile 150 times in a day

ಮಾಹಿತಿ ಹಾಗೂ ಕುತೂಹಲದಿಂದ ಎಲ್ಲಿ ವಂಚಿತರಾಗುತ್ತೇವೋ ಎನ್ನುವ ಭಯದಿಂದ ವಿದ್ಯಾರ್ಥಿಗಳು ದಿನಕ್ಕೆ ಹೆಚ್ಚೂ ಕಡಿಮೆ 150 ಬಾರಿ ತಮ್ಮ ಮೊಬೈಲ್‌ ಫೋನ್ ಗಳನ್ನು ಚೆಕ್ ಮಾಡುತ್ತಾರೆ. ಈ ಅಭ್ಯಾಸ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಶಿಕ್ಷಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಶೇ.26 ರಷ್ಟು ವಿದ್ಯಾರ್ಥಿಗಳು ಕೇವಲ ಕರೆ ಮಾಡುವುದಕ್ಕೆ ಹಾಗೂ ಬಾಕಿ ಉಳಿದವರು ಸಾಮಾಜಿಕ ಜಾಲತಾಣದ ಸಂಪರ್ಕಕ್ಕೆ ಗೂಗಲ್ ಹುಡುಕಾಟಕ್ಕೆ , ಚಲನಚಿತ್ರ ಮುಂತಾದ ಮನೋರಂಜನೆ ಕಾರ್ಯಕ್ರಮಗಳನ್ನು ನೋಡುವುದಕ್ಕೆ ಬಳಸುತ್ತಾರೆ ಎಂದು ಪ್ರಾಜೆಕ್ಟ್ ಡೈರೆಕ್ಟರ್ ತಿಳಿಸಿದ್ದಾರೆ.

ಶೇ.80ರಷ್ಟು ವಿದ್ಯಾರ್ಥಿಗಳು ಮೊಬೈಲ್ ಫೋನ್ ಹೊಂದಿದ್ದಾರೆ ಎಂದೂ ಅಧ್ಯಯನ ತಿಳಿಸಿದೆ. ಈ ಪೈಕಿ ಹೆಚ್ಚಿನವರು ಅಪ್ಲಿಕೇಷನ್ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುವುದಕ್ಕೆ ಹೊಸ ಹೊಸ ವಿಷಯಗಳನ್ನು ಸಂಗ್ರಹಿಸುವುದಕ್ಕೆ ಸ್ಮಾರ್ಟ್‌ ಫೋನ್ ಬಳಕೆ ಮಾಡುತ್ತಾರೆ.

English summary
Aligarh university and Indian Council for Social Sciences Research have conducted a survey on cell phone addiction and revealed that studentsand youths were use mobile around 150 times in a day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X