ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಅಧಿವೇಶನ ಮುಗಿಯುವ ಮುನ್ನವೇ ಸರ್ಕಾರ ಪತನ: ಡಿವಿಎಸ್

|
Google Oneindia Kannada News

ನವದೆಹಲಿ, ಡಿಸೆಂಬರ್ 5: ಬೆಳಗಾವಿ ಅಧಿವೇಶನದ ವೇಳೆಗೆ ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿ ಇರುವುದು ಬೆಳಗಾವಿ ಅಧಿವೇಶನದವರೆಗೆ ಮಾತ್ರ. ಅಧಿವೇಶನ ಪೂರ್ಣಗೊಳ್ಳುವುದೂ ಇಲ್ಲ. ಅದರೊಳಗೇ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಸಚಿವ ಸಂಪುಟ ಸಭೆಗೆ ಮತ್ತೆ ರಮೇಶ್ ಜಾರಕಿಹೊಳಿ ಗೈರು! ಸಚಿವ ಸಂಪುಟ ಸಭೆಗೆ ಮತ್ತೆ ರಮೇಶ್ ಜಾರಕಿಹೊಳಿ ಗೈರು!

ಸರ್ಕಾರ ಅಲುಗಾಡುತ್ತಿರುವುದು ನಿಜ. ಶಾಸಕರ ಒಂದು ತಂಡ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ. ಮುಂದೆ ಆಗುವುದನ್ನು ಅಧಿವೇಶನದವರೆಗೂ ಕಾದು ನೋಡಿ ಎಂದಿದ್ದಾರೆ.

coalition government will collapse belagavi assembly session dv sadananda gowda

ಸರ್ಕಾರದಲ್ಲಿನ ಅತೃಪ್ತ ಶಾಸಕರನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿ ತನ್ನೆಡೆಗೆ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂಬ ಆರೋಪವನ್ನು ಅವರು 'ತೋಳ ಬಂತು ತೋಳ'ದ ಕಥೆಗೆ ಹೋಲಿಸಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಸರಕಾರ ಬೀಳುವ ವಿಶ್ವಾಸ ಬಿಜೆಪಿಯಲ್ಲಿ ಕಾಣಲು ಕಾರಣ ಏನು?ಕಾಂಗ್ರೆಸ್-ಜೆಡಿಎಸ್ ಸರಕಾರ ಬೀಳುವ ವಿಶ್ವಾಸ ಬಿಜೆಪಿಯಲ್ಲಿ ಕಾಣಲು ಕಾರಣ ಏನು?

ತೋಳ ಬಂತು ಎಂದು ಕಥೆ ಹೇಳುವುದಕ್ಕೂ, ನಿಜವಾದ ತೋಳ ಬರುವುದಕ್ಕೂ ವ್ಯತ್ಯಾಸವಿದೆ. ಈಗಾಗಲೇ ಚಿಕ್ಕಬಳ್ಳಾಪುರ ಮತ್ತು ಬೆಳಗಾವಿಯ ತೋಳಗಳು ಬಂದಿವೆ. ಇನ್ನು ಗುಹೆಯಲ್ಲಿ ಇರುವ ತೋಳಗಳು ಹೊರಬರುವುದು ಬಾಕಿ ಇದೆ. ಅದಕ್ಕೆ ಸ್ವಲ್ಪ ದಿನ ಕಾಯಬೇಕಿದೆ ಎಂದಿದ್ದಾರೆ.

ಆಪರೇಷನ್ ಕಮಲ : ಆಡಿಯೋ ಸಿಡಿ ಬಗ್ಗೆ ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ ಆಪರೇಷನ್ ಕಮಲ : ಆಡಿಯೋ ಸಿಡಿ ಬಗ್ಗೆ ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ

25 ಕೋಟಿ ರೂ ಕೊಟ್ಟು ಆಪರೇಷನ್ ಕಮಲ ಮಾಡುವಷ್ಟು ಶಕ್ತಿ ಬಿಜೆಪಿಗೆ ಇಲ್ಲ. ತಾನಾಗಿಯೇ ತೋಳಗಳು ಬರುತ್ತಿವೆ. ಎಲ್ಲದಕ್ಕೂ ಕಾಲ ಕೂಡಿಬರಬೇಕು ಎಂಬ ಮಾತಿನಂತೆ ಈಗ ಕಾಲ ಕೂಡಿಬಂದಿದೆ. ಶೀಘ್ರದಲ್ಲಿಯೇ ಸರ್ಕಾರ ತಾನಾಗಿಯೇ ಉರುಳಲಿದೆ ಎಂದು ಹೇಳಿದ್ದಾರೆ.

English summary
Union Minister DV Sadananda Gowda predicted the coalition government will be collapsed during the time of Belagavi Assembly session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X