ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ-ಕುಮಾರಸ್ವಾಮಿ ಭೇಟಿ, ಹಲವು ಬೇಡಿಕೆ ಮಂಡಿಸಲಿರುವ ಎಚ್‌ಡಿಕೆ

|
Google Oneindia Kannada News

Recommended Video

ನರೇಂದ್ರ ಮೋದಿ ಅವರನ್ನು ಭೇಟಿ ಆಗಲಿದ್ದಾರೆ ಸಿಎಂ ಕುಮಾರಸ್ವಾಮಿ | Oneindia Kannada

ನವದೆಹಲಿ, ಜೂನ್ 14: ನಾಳೆ (ಜೂನ್ 15)ರಂದು ಸಿಎಂ ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆಗಲಿದ್ದಾರೆ.

ನಾಳೆ ದೆಹಲಿಯಲ್ಲಿ ನೀತಿ ಆಯೋಗದ ಸಭೆ ಇದ್ದು ಸಭೆಯಲ್ಲಿ ಭಾಗವಹಿಸಲು ಕುಮಾರಸ್ವಾಮಿ ಅವರು ತೆರಳುತ್ತಿದ್ದಾರೆ. ಆದರೆ ಸಭೆಗೂ ಮುನ್ನಾ ಪ್ರಧಾನಿ ಅವರ ನಿವಾಸದಲ್ಲಿಯೇ ಕುಮಾರಸ್ವಾಮಿ ಅವರು ಮೋದಿ ಅವರನ್ನು ಭೇಟಿ ಆಗಲಿದ್ದಾರೆ.

ರೈತರ ಬಗ್ಗೆ ಮೃದು ಧೋರಣೆ ಇರಲಿ: ಬ್ಯಾಂಕರುಗಳಿಗೆ ಕುಮಾರಸ್ವಾಮಿ ಸಲಹೆ ರೈತರ ಬಗ್ಗೆ ಮೃದು ಧೋರಣೆ ಇರಲಿ: ಬ್ಯಾಂಕರುಗಳಿಗೆ ಕುಮಾರಸ್ವಾಮಿ ಸಲಹೆ

ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿ ಆದ ಬಳಿಕ ಇದೇ ಮೊದಲ ಬಾರಿಗೆ ಕುಮಾರಸ್ವಾಮಿ ಅವರು ಮೋದಿ ಅವರನ್ನು ಭೇಟಿ ಆಗಲಿದ್ದಾರೆ. ಕಳೆದ ಬಾರಿ ಭೇಟಿ ಆಗಿದ್ದಾಗ ರೇವಣ್ಣ, ದೇವೇಗೌಡ ಸೇರಿ ನಿಯೋಗವೇ ಇತ್ತು, ಆದರೆ ಈ ಬಾರಿ ಒಬ್ಬರೇ ಭೇಟಿ ಆಗುತ್ತಿದ್ದಾರೆ.

CM Kumaraswamy will meet Narendra Modi on June 15

ರಾಜ್ಯದ ಬರ ಪರಿಸ್ಥಿತಿ, ನರೇಗಾ ಅನುದಾನ ಇನ್ನೂ ಹಲವು ವಿಷಯಗಳನ್ನು ಕುಮಾರಸ್ವಾಮಿ ಅವರು ಮೋದಿ ಅವರ ಬಳಿ ಚರ್ಚಿಸಲಿದ್ದಾರೆ. ಮೋದಿ ಅವರಿಂದ ಧನಾತ್ಮಕ ಪ್ರತಿಕ್ರಿಯೆಯ ವಿಶ್ವಾಸದಲ್ಲಿ ಕುಮಾರಸ್ವಾಮಿ ಅವರಿದ್ದಾರೆ.

ನಾಳೆ ಅತ್ಯಂತ ಪ್ರಮುಖವಾದ ನೀತಿ ಆಯೋಗದ ಸಭೆ ನಡೆಯಲಿದ್ದು, ಎಲ್ಲ ರಾಜ್ಯದ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಈಗಾಗಲೇ ತಿಳಿಸಿದ್ದಾರೆ.

English summary
CM Kumaraswamy will meet Narendra Modi on June 15 th in Modi's residence. He is going to New Delhi to attend Niti Ayog meeting, but before the meeting Kumaraswamy will meet Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X