ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿಗೆ ಸಿಎಂ ಎಚ್ಡಿಕೆ ನೀಡಿದ ಉಡುಗೊರೆ ಏನು ಗೊತ್ತಾ?

By Nayana
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 10: ಕರ್ನಾಟಕದ ನೆರೆ-ಬರ ಕುರಿತು ಚರ್ಚಿಸಲು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನಿಯೋಗ ಸೋಮವಾರ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತು.

ರಾಜ್ಯದಲ್ಲಿ ನೆರೆ-ಬರ: ಸಿಎಂ ನೇತೃತ್ವದ ನಿಯೋಗದಿಂದ ಮೋದಿ ಭೇಟಿ ರಾಜ್ಯದಲ್ಲಿ ನೆರೆ-ಬರ: ಸಿಎಂ ನೇತೃತ್ವದ ನಿಯೋಗದಿಂದ ಮೋದಿ ಭೇಟಿ

ಕುಮಾರಸ್ವಾಮಿಯವರು ಖ್ಯಾತ ಪ್ರವಾಸಿ ಲೇಖಕ ಡಾಮ್ ಮೊರೇಸ್ ಅವರು ಬರೆದ 'ದಿ ಓಪನ್ ಐಸ್: ಎ ಜರ್ನಿ ಥ್ರೂ ಕರ್ನಾಟಕ' ಎನ್ನುವ ವಿಶಿಷ್ಟ ಪುಸ್ತಕವನ್ನು ಮೋದಿಯವರಿಗೆ ಉಡುಗೊರೆಯಾಗಿ ನೀಡಿದರು.

ಕೇರಳ ಪ್ರವಾಹ: ಎಂಟು ದಿನ ಜತೆಗಿದ್ದರೂ ಇವರ ಗುರುತು ಯಾರಿಗೂ ಸಿಗಲಿಲ್ಲ! ಕೇರಳ ಪ್ರವಾಹ: ಎಂಟು ದಿನ ಜತೆಗಿದ್ದರೂ ಇವರ ಗುರುತು ಯಾರಿಗೂ ಸಿಗಲಿಲ್ಲ!

ಕರ್ನಾಟಕ ಸರ್ಕಾರದ ಪರವಾಗಿ ವಾರ್ತಾ ಇಲಾಖೆಯು ಈ ಪುಸ್ತಕವನ್ನು 1976ರಲ್ಲಿ ಪ್ರಕಟಿಸಿತ್ತು. ಇದರ ಲೇಖಕ ಡಾಮ್ ಮೊರೇಸ್ ಭಾರತದ ಪ್ರತಿಭಾನ್ವಿತ ಕವಿ, ಅಂಕಣಕಾರ ಹಾಗೂ ಪ್ರವಾಸಿ ಲೇಖಕರಾಗಿದ್ದರು, ಕರ್ನಾಟಕದ ಕಲೆ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಈ ಕೃತಿಗೆ ಅಂತಾರಾಷ್ಟ್ರೀಯ ಮಟ್ಟದ ವ್ಯಂಗ್ಯಚಿತ್ರಕಾರ ಹಾಗೂ ಚಿತ್ರ ಕಲಾವಿದ ಪದ್ಮಭೂಷಣ ಮಾಡಿಯೋ ಮಿರಾಂಡ ಅವರು ಚಿತ್ರಗಳನ್ನು ಒದಗಿಸಿದ್ದರು.

CM gifts Don Morass book to PM Modi

ಕರ್ನಾಟಕದ ಪ್ರವಾಹ ಹಾಗೂ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಉಂಟಾಗಿರುವ ಬರದ ಕುರಿತು ವರದಿ ನೀಡಲು ಸಿಎಂ ಎಚ್‌ಡಿ ಕುಮಾರಸ್ವಾಮಿ , ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಸಂಸದ ಪ್ರತಾಪ್ ಸಿಂಹ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸೇರಿದಂತೆ ಅನೇಕರು ತೆರಳಿದ್ದರು. ತೆರಳಿದ್ದ ವೇಳೆ ರಾಜ್ಯಕ್ಕೆ 2 ಸಾವಿರ ರೂ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಲು ಒತ್ತಾಯಿಸಿದರು.

English summary
Chief minister H.D.Kumaraswamy has gifted prime minister Narendra Modi, a book 'The Open Eyes: A journey through Karnataka' by Dom Morass.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X