• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯಲ್ಲಿ ದೀಪಾವಳಿಗೆ ಪಟಾಕಿ ನಿಷೇಧ: ಅರವಿಂದ್ ಕೇಜ್ರಿವಾಲ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 15: ದೆಹಲಿಯಲ್ಲಿ ಈ ಬಾರಿಯೂ ದೀಪಾವಳಿಯಲ್ಲಿ ಪಟಾಕಿ ಹಚ್ಚುವುದಕ್ಕೆ ನಿಷೇಧ ಹೇರಲಾಗಿದೆ ಎನ್ನುವ ಮಾಹಿತಿಯನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೀಡಿದ್ದಾರೆ.

ದೆಹಲಿಯ ವಾಯುಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಳೆದ ವರ್ಷದಂತೆಯೇ ಈ ಬಾರಿ ಕೂಡ ಪಟಾಕಿಗಳ ಶೇಖರಣೆ, ಮಾರಾಟ ಹಾಗೂ ಹಚ್ಚುವುದಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ ಎಂದು ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.

ದೀಪಾವಳಿ ಪಟಾಕಿ ನಿಷೇಧಿಸದ ರಾಜ್ಯಗಳ ಪಟ್ಟಿದೀಪಾವಳಿ ಪಟಾಕಿ ನಿಷೇಧಿಸದ ರಾಜ್ಯಗಳ ಪಟ್ಟಿ

2020ರಲ್ಲಿ ವ್ಯಾಪಾರಿಗಳು ಪಟಾಕಿಗಳನ್ನು ಸಂಗ್ರಹಿಸಿದ ಬಳಿಕ ಮಾಲಿನ್ಯದ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ನಿಷೇಧವನ್ನು ಹೇರಲಾಗಿತ್ತು. ಇದರಿಂದ ವ್ಯಾಪಾರಿಗಳಿಗೆ ನಷ್ಟ ಉಂಟಾಗಿತ್ತು. ಆದರೆ ಈ ಬಾರಿ ಸಂಪೂರ್ಣ ನಿಷೇಧ ಗಮನದಲ್ಲಿಟ್ಟುಕೊಂಡು ಯಾರೂ ಕೂಡ ಶೇಖರಣೆ ಮಾಡಬಾರದು ಎಂದು ಹೇಳಲಾಗಿದೆ.

ದೆಹಲಿಯಲ್ಲಿ ವಾಯುಮಾಲಿನ್ಯ ಅಪಾಯಕಾರಿ ಹಂತವನ್ನು ತಲುಪಿದೆ, ಜತೆಗೆ ಕೊರೊನಾ ಸೋಂಕು ಕೂಡ ಇರುವ ಕಾರಣ ಹಲವು ಆರೋಗ್ಯ ಸಮಸ್ಯೆಗಳಿಗೆ ಎಡೆ ಮಾಡಿಕೊಡಬಹುದು ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ದೆಹಲಿಯ ವಾಯುಗುಣಮಟ್ಟ ಕುಸಿಯುತ್ತಿದೆ, ದೆಹಲಿಯ ಸುತ್ತಮುತ್ತಲ ರಾಜ್ಯಗಳು ಕೂಡ ಪಟಾಕಿಯನ್ನು ನಿಷೇಧಿಸಿವೆ, ಪಶ್ಚಿಮ ಬಂಗಾಳದಲ್ಲೂ ಕಾಳಿ ಪೂಜಾ ಹಾಗೂ ದೀಪಾವಳಿಯಲ್ಲಿ ಪಟಾಕಿ ಹಚ್ಚಬಾರದು ಎಂದು ಹೇಳಿದೆ.

ಕಳೆದ ವರ್ಷ ದೆಹಲಿ, ಮಹಾರಾಷ್ಟ್ರ, ಒಡಿಶಾ, ಕರ್ನಾಟಕ, ರಾಜಸ್ಥಾನ, ಚಂಡೀಗಢದಲ್ಲಿ ಪಟಾಕಿ ಹಚ್ಚುವುದನ್ನು ನಿಷೇಧಿಸಲಾಗಿತ್ತು.
ಹಲವು ರಾಜ್ಯಗಳಲ್ಲಿ ಹಸಿರು ಪಟಾಕಿಗಳನ್ನು ಬಳಸುವಂತೆ ಹೇಳಲಾಗಿತ್ತು. ಪಟಾಕಿಯಲ್ಲಿ ಹೆಚ್ಚು ಬೆಳಕು ಹಾಗೂ ಬಣ್ಣವನ್ನು ಉತ್ಪತ್ತಿ ಮಾಡಲು ಬಳಸುವ ರಾಸಾಯನಿಕಗಳಲ್ಲಿ ಬೇರಿಯಂ, ಸೋಡಿಯಂ, ಮೆಗ್ನೀಶಿಯಂ, ಅಲ್ಯುಮೀನಿಯಂ, ಟ್ರೈಟಾನಿಯಂ, ಕ್ಯಾಲ್ಶಿಯಂ, ಕಾಪರ್‌, ಸ್ಟ್ರಾನ್‌ಶಿಯಂ ಲೋಹಗಳನ್ನು ಬಳಸಲಾಗುತ್ತದೆ.

ಇವುಗಳನ್ನು ಸುಡುವುದರಿಂದ ಇವು ಕರಗದೆ ವಾತಾವರಣದಲ್ಲಿ ಶೇಖರಣೆಯಾಗುತ್ತವೆ. ಇದು ಉಸಿರಾಟದ ಮೂಲಕ ಮನುಷ್ಯನ ದೇಹವನ್ನು ಪ್ರದೇಶಿಸಿ ಹಾನಿ ಉಂಟು ಮಾಡುತ್ತದೆ.

ಪಟಾಕಿ ಬಳಸುವುದರಿಂದ ವಾಯುಮಾಲಿನ್ಯ ಉಂಟಾಗುತ್ತಿರುವ ನಿಟ್ಟಿನಲ್ಲಿ ಜನರಲ್ಲಿ ಸಾಕಷ್ಟು ಅರಿವು ಮೂಡಿಸಲಾಗುತ್ತಿದೆ. ದೀಪಾವಳಿಯ ಸಂದರ್ಭದಲ್ಲಿ ವಾಯುಗುಣಮಟ್ಟ ಬದಲಾವಣೆ ಆಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಈ ಕುರಿತಾಗಿ ಜಾಗೃತಿ ಮೂಡಿಸಲಾಗುತ್ತಿದೆ. ನಿರಂತರ ಜಾಗೃತಿ ಕಾರ್ಯಕ್ರಮದ ಪರಿಣಾಮವಾಗಿ ಕಳೆದ ವರ್ಷ ದೀಪಾವಳಿಯ ಸಂದರ್ಭದಲ್ಲಿ ವಾಯುಮಾಲಿನ್ಯ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ.

ಹಸಿರು ಪಟಾಕಿ ಅಂದರೆ ಏನು? ಎಂಬ ಗೊಂದಲ ನಿಮ್ಮಲ್ಲೂ ಇರಬಹುದು. 2018 ರಲ್ಲಿ ಸರ್ವೋಚ್ಚ ನ್ಯಾಯಾಲಯ ವಾಯು ಮಾಲಿನ್ಯ ನಿಯಂತ್ರಣ ನಿಟ್ಟಿನಲ್ಲಿ ಸಾಂಪ್ರದಾಯಿಕ ಪಟಾಕಿ ನಿಷೇಧಿಸಿ ಹಸಿರು ಪಟಾಕಿ ಬಳಸುವಂತೆ ಆದೇಶ ನೀಡಿತ್ತು.ಸಾಂಪ್ರದಾಯಿಕ ಪಟಾಕಿಯಲ್ಲಿ ಬಳಸುವ ಲಿಥಿಯಂ ಹಾಗೂ ಬೇರಿಯಂ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಿತ್ತು.

ಸಾಂಪ್ರದಾಯಿಕ ಪಟಾಕಿ ಬದಲಾಗಿ ಇದೀಗ ಹಸಿರು ಪಟಾಕಿಯನ್ನು ಬಳಸಲು ಸರ್ಕಾರ ಸೂಚನೆ ನೀಡಿದೆ. ಹಸಿರು ಪಟಾಕಿಗಳು ಗಾತ್ರದಲ್ಲೂ ಸಣ್ಣದಾಗಿದ್ದು ಮಾಲಿನ್ಯದ ಪ್ರಮಾಣ ಶೇ. 30 ರಿಂದ 90 ಪ್ರತಿಶತ ಕಡಿಯಾಗಿದೆ. ಸಾಂಪ್ರದಾಯಿಕ ಪಟಾಕಿಗೆ ಹೋಲಿಕೆ ಮಾಡಿದರೆ ಬೆಳಕು ಹಾಗೂ ಶಬ್ಧದಲ್ಲಿ ಯಾವುದೇ ವ್ಯೆತ್ಯಾಸವಿಲ್ಲ.

ಆದರೆ ಹಸಿರು ಪಟಾಕಿ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಇದರ ಬಳಕೆಯಿಂದ ಪರಿಸರ ಮಾಲಿನ್ಯ ನಿಯಂತ್ರಣ ಸಾಧ್ಯನಾ ಎಂಬ ಪ್ರಶ್ನೆಯನ್ನು ಪರಿಸರವಾದಿಗಳು ಮುಂದಿಟ್ಟಿದ್ದಾರೆ. ಅಷ್ಟೇ ಮಾತ್ರವಲ್ಲ, ಮಾರುಕಟ್ಟೆಯಲ್ಲಿ ಹಸಿರು ಪಟಾಕಿಗಳು ಅಷ್ಟು ಬೇಗ ಲಗ್ಗೆ ಇಡಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ.

English summary
The storage, sale and use of firecrackers banned in Delhi in view of severe pollution situation in city, Chief Minister Arvind Kejriwal has announced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X