ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಮತ್ತೆ ಹವಾಮಾನ ಬದಲಾವಣೆ: ಕೆಲವೊಮ್ಮೆ ಬಿಸಿಲು, ಕೆಲವೊಮ್ಮೆ ಮಳೆ

|
Google Oneindia Kannada News

ನವದೆಹಲಿ 27 ಮೇ: ದೆಹಲಿಯಲ್ಲಿ ಮತ್ತೊಮ್ಮೆ ವಾತಾವರಣ ಬದಲಾಗಿದೆ. ನಿರಂತರ ಮಳೆಯ ನಂತರ ರಾಜಧಾನಿಯಲ್ಲಿ ತಾಪಮಾನ ಮತ್ತೆ ಏರಿಕೆಯಾಗಿದೆ. ಆದರೂ ಶುಕ್ರವಾರ ಬೆಳಿಗ್ಗೆ ಕನಿಷ್ಠ ತಾಪಮಾನವು 25.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಇದು ಸಾಮಾನ್ಯಕ್ಕಿಂತ ಒಂದು ಡಿಗ್ರಿ ಮಾತ್ರ ಕಡಿಮೆ ದಾಖಲಾಗಿದೆ. ಆದರೆ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಸದ್ಯ ದೆಹಲಿಯಾದ್ಯಾಂತ ಮೋಡ ಕವಿದ ವಾತಾವರಣವಿದ್ದು ಈ ಸಮಯದಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದಿದೆ. ಆದರೆ ಇಲ್ಲಿ ಮತ್ತೆ ಶಾಖ ಕಾಣಿಸಿಕೊಳ್ಳಲಿದೆ ಎಂದು ಹೇಳಿದೆ. ಹೀಗಾಗಿ ದೆಹಲಿಯ ಹವಾಮಾನ ಶೀತದ ಜೊತೆಗೆ ಬಿಸಿಯಾಗಿರಬಹುದು ಎಂದಿದೆ.

ಪ್ರವಾಹ ಪೀಡಿತ ಅಸ್ಸಾಂಗೆ 324 ಕೋಟಿ ರೂ. ಬಿಡುಗಡೆಪ್ರವಾಹ ಪೀಡಿತ ಅಸ್ಸಾಂಗೆ 324 ಕೋಟಿ ರೂ. ಬಿಡುಗಡೆ

ದೆಹಲಿಯಲ್ಲಿ ಇಂದು ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಆಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಸಾಪೇಕ್ಷ ಆರ್ದ್ರತೆಯು 8.30 ಕ್ಕೆ 66 ಪ್ರತಿಶತದಷ್ಟಿತ್ತು ಎಂದು ಅದು ಹೇಳಿದೆ. ಜೊತೆಗೆ ಮೇ 28 ರಂದು ಗರಿಷ್ಠ ತಾಪಮಾನ 40 ಡಿಗ್ರಿ ಮತ್ತು ಮೇ 31 ರಂದು 41 ಡಿಗ್ರಿ ಗಡಿ ದಾಟಬಹುದು ಎಂದಿದೆ.

Climate change again in New Delhi: sometimes sunny, sometimes rainy

ಸಿಸ್ಟಂ ಆಫ್ ಏರ್ ಕ್ವಾಲಿಟಿ ಮತ್ತು ವೆದರ್ ಫೋರ್ಕಾಸ್ಟಿಂಗ್ ಮತ್ತು ರಿಸರ್ಚ್ (SAFAR) ಪ್ರಕಾರ, ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು 9 ಗಂಟೆಗೆ 176 ರಷ್ಟಿತ್ತು, ಇದು 'ಮಧ್ಯಮ' ವಿಭಾಗದಲ್ಲಿದೆ. ಗಮನಾರ್ಹವಾಗಿ, ಶೂನ್ಯ ಮತ್ತು 50 ರ ನಡುವಿನ AQI ಅನ್ನು 'ಉತ್ತಮ', 51 ಮತ್ತು 100 'ತೃಪ್ತಿದಾಯಕ', 101 ಮತ್ತು 200 'ಮಧ್ಯಮ', 201 ಮತ್ತು 300 'ಕಳಪೆ', 301 ಮತ್ತು 400 'ಅತ್ಯಂತ ಕಳಪೆ', 401 ಮತ್ತು 500 'ಗಂಭೀರ' ಎಂದು ಪರಿಗಣಿಸಲಾಗುತ್ತದೆ.

Climate change again in New Delhi: sometimes sunny, sometimes rainy

ಖಾಸಗಿ ಹವಾಮಾನ ಮಾಹಿತಿ ಸಂಸ್ಥೆಯಾದ ಸ್ಕೈಮೆಟ್ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ಕೇರಳ, ದಕ್ಷಿಣ ಕರ್ನಾಟಕ, ಲಕ್ಷದ್ವೀಪದಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆ ಮತ್ತು ಭಾರೀ ಮಳೆಯಾಗಲಿದೆ. ಅರುಣಾಚಲ ಪ್ರದೇಶ ಮತ್ತು ಪೂರ್ವ ಅಸ್ಸಾಂನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

Climate change again in New Delhi: sometimes sunny, sometimes rainy

ಈಶಾನ್ಯ ಭಾರತದ ಉಳಿದ ಭಾಗಗಳಲ್ಲಿ, ಉಪ-ಹಿಮಾಲಯನ್ ಪಶ್ಚಿಮ ಬಂಗಾಳ, ಸಿಕ್ಕಿಂ, ಆಂತರಿಕ ತಮಿಳುನಾಡು, ದಕ್ಷಿಣ ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಕರಾವಳಿ ಆಂಧ್ರ ಪ್ರದೇಶ, ಒಡಿಶಾ, ವಿದರ್ಭ ಮತ್ತು ತೆಲಂಗಾಣದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬಿಹಾರ, ಜಾರ್ಖಂಡ್ ಮತ್ತು ಕೊಂಕಣ ಮತ್ತು ಗೋವಾದಲ್ಲಿ ಲಘು ಮಳೆಯಾಗಬಹುದು ಎಂದು ತಿಳಿದುಬಂದಿದೆ.

(ಒನ್ಇಂಡಿಯಾ ಸುದ್ದಿ)

English summary
climate has changed once again in Delhi. Temperatures have risen again in the capital after sustained rainfall. However, the minimum temperature was recorded at 25.5 degrees Celsius on Friday morning, one degree below normal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X