ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ: ಎಂಸಿಡಿಗೆ ಧ್ವಂಸ ಕಾರ್ಯಾಚರಣೆಯ ವರದಿ ಕೇಳಿದ ಕೇಜ್ರಿವಾಲ್ ಸರ್ಕಾರ

|
Google Oneindia Kannada News

ದೆಹಲಿ, ಮೇ 18: ಏಪ್ರಿಲ್ 1 ರಿಂದ ನಗರದಾದ್ಯಂತ ನಡೆಸುತ್ತಿರುವ ಧ್ವಂಸ ಕಾರ್ಯಾಚರಣೆಗಳ ಕುರಿತು ಬಿಜೆಪಿ ಆಡಳಿತದ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ)ನಿಂದ ವಿವರವಾದ ವರದಿಯನ್ನು ದೆಹಲಿ ಸರ್ಕಾರ ಕೇಳಿದೆ. ಶಾಹೀನ್ ಬಾಗ್, ಜಹಾಂಗೀರ್‌ಪುರಿ ಮದನ್‌ಪುರ್ ಖಾದರ್, ನ್ಯೂ ಫ್ರೆಂಡ್ಸ್ ಕಾಲೋನಿ, ಮಂಗೋಲ್‌ಪುರಿ, ರೋಹಿಣಿ, ಗೋಕುಲಪುರಿ, ಲೋಧಿ ಕಾಲೋನಿ, ಜನಕಪುರಿ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಮೂರು ನಾಗರಿಕ ಸಂಸ್ಥೆಗಳು ಅತಿಕ್ರಮಣ ವಿರೋಧಿ ಅಭಿಯಾನಗಳನ್ನು ನಡೆಸಿದ ಕೆಲವು ದಿನಗಳ ನಂತರ ದೆಹಲಿ ಸರ್ಕಾರ ವರದಿ ಕೇಳಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ತಮ್ಮ ನಿವಾಸದಲ್ಲಿ ಎಲ್ಲಾ ಎಎಪಿ ಶಾಸಕರೊಂದಿಗೆ ಸಭೆ ನಡೆಸಿ ಈ ಬಗ್ಗೆ ನಿರ್ಧರಿಸಿದ್ದಾರೆ. ಜೊತೆಗೆ ಬಿಜೆಪಿ ಆಡಳಿತದ ಪುರಸಭೆಗಳ ಇಂತಹ ಧ್ವಂಸ ಕಾರ್ಯಾಚರಣೆಗಳನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ದೆಹಲಿಯಲ್ಲಿನ ಧ್ವಂಸ ಕಾರ್ಯಾಚರಣೆಗಳು 63 ಲಕ್ಷ ಜನರನ್ನು ನಿರಾಶ್ರಿತರನ್ನಾಗಿ ಮಾಡುತ್ತದೆ ಮತ್ತು ಇದು ಸ್ವತಂತ್ರ ಭಾರತದಲ್ಲಿ "ದೊಡ್ಡ ವಿನಾಶ" ಎಂದು ಕೇಜ್ರಿವಾಲ್ ಹೇಳಿದ್ದಾರೆ ಮತ್ತು ಬಿಜೆಪಿ ಅಧಿಕಾರವನ್ನು ದುರುಪಯೋಗ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ದೆಹಲಿ ತೆರವು ಕಾರ್ಯಚರಣೆ: 'ಸ್ವತಂತ್ರ ಭಾರತದ ಅತಿದೊಡ್ಡ ವಿನಾಶ'- ಕೇಜ್ರಿವಾಲ್ದೆಹಲಿ ತೆರವು ಕಾರ್ಯಚರಣೆ: 'ಸ್ವತಂತ್ರ ಭಾರತದ ಅತಿದೊಡ್ಡ ವಿನಾಶ'- ಕೇಜ್ರಿವಾಲ್

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ (ಮೇ 16) ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರೊಂದಿಗೆ ಸಿವಿಲ್ ಲೈನ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ರಾಷ್ಟ್ರ ರಾಜಧಾನಿಯಲ್ಲಿ ಅತಿಕ್ರಮಣ ವಿರೋಧಿ ಅಭಿಯಾನದ ಕುರಿತು ಸಭೆ ನಡೆಸಿದರು. ಎಂಸಿಡಿಯಲ್ಲಿ ಬಿಜೆಪಿಯ 15 ವರ್ಷಗಳ ದುರಾಡಳಿತ, ಅವ್ಯವಸ್ಥೆ ಮತ್ತು ರಾಷ್ಟ್ರ ರಾಜಧಾನಿಯಲ್ಲಿನ ಅಕ್ರಮ ಆಸ್ತಿಯ ತೆರವು ಕಾರ್ಯಚರಣೆಯ ಬಗ್ಗೆ ಕಟುವಾಗಿ ಟೀಕಿಸಿದ ಅವರು, ದೆಹಲಿಯಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಚರಣೆ ಯೋಜಿತ ರೀತಿಯಲ್ಲಿ ಮಾಡಲಾಗಿಲ್ಲ ಎಂದು ದೂರಿದ್ದಾರೆ.

New Delhi clearance operation: Kejriwal government heard the report from the MCD

"ದೆಹಲಿಯ ಶೇಕಡಾ 80ಕ್ಕಿಂತ ಹೆಚ್ಚು ಪ್ರದೇಶವನ್ನು ಅಕ್ರಮ ಮತ್ತು ಅತಿಕ್ರಮಣ ಎಂದು ಕರೆಯಬಹುದು, ಅಂದರೆ ನೀವು ಶೇಕಡಾ 80 ರಷ್ಟು ದೆಹಲಿಯನ್ನು ನಾಶಪಡಿಸುತ್ತೀರಾ?" ಎಂದು ಕೇಜ್ರಿವಾಲ್ ಕೇಸರಿ ಪಕ್ಷವನ್ನು ಆನ್‌ಲೈನ್ ಬ್ರೀಫಿಂಗ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.

ಕೇರಳದಲ್ಲಿ ಎಎಪಿ-ಟ್ವೆಂಟಿ20 ಮೈತ್ರಿ; ಉಚಿತ ವಿದ್ಯುತ್ ಭರವಸೆಕೇರಳದಲ್ಲಿ ಎಎಪಿ-ಟ್ವೆಂಟಿ20 ಮೈತ್ರಿ; ಉಚಿತ ವಿದ್ಯುತ್ ಭರವಸೆ

'ಬುಲ್ಡೋಜರ್‌ಗಳೊಂದಿಗೆ ಕಾಲೋನಿಗಳನ್ನು ತಲುಪಿ ಹಲವು ಅಂಗಡಿ ಮತ್ತು ಮನೆಯನ್ನು ಧ್ವಂಸ ಮಾಡುತ್ತಿದ್ದಾರೆ, ಜನರು ಕಟ್ಟಡವನ್ನು ಅಕ್ರಮವಾಗಿಲ್ಲ ಎಂದು ಸಾಬೀತುಪಡಿಸಲು ಕಾಗದಗಳನ್ನು ತೋರಿಸಿದರೂ ಅವರು ಅವುಗಳನ್ನು ಪರಿಶೀಲಿಸುವುದಿಲ್ಲ' ಎಂದು ಅವರು ಕಿಡಿ ಕಾರಿದ್ದಾರೆ.

New Delhi clearance operation: Kejriwal government heard the report from the MCD

ಜೊತೆಗೆ ಎಂಸಿಡಿಯನ್ನು ಟೀಕಿಸಿದ ಅವರು ದೆಹಲಿಯಲ್ಲಿ ಅಕ್ರಮವೆಂದು ಪರಿಗಣಿಸಲಾದ 63 ಲಕ್ಷ ಜನರ ಅಂಗಡಿಗಳು ಮತ್ತು ಮನೆಗಳನ್ನು ಬುಲ್ಡೋಜರ್‌ಗಳು ಧ್ವಂಸಗೊಳಿಸಿದರೆ, ಅದು ಸ್ವತಂತ್ರ ಭಾರತದಲ್ಲಿ "ದೊಡ್ಡ ವಿನಾಶ" ಎಂದು ಕರೆದಿದ್ದಾರೆ. ಅತಿಕ್ರಮಣ ವಿರೋಧಿ ಆಂದೋಲನ ನಡೆಸುತ್ತಿರುವ ರೀತಿಗೆ ಪಕ್ಷವು ವಿರುದ್ಧವಾಗಿದೆ. ಸುಮಾರು 50 ಲಕ್ಷ ಜನರು ಅನಧಿಕೃತ ಕಾಲೋನಿಗಳಲ್ಲಿದ್ದಾರೆ, 10 ಲಕ್ಷ ಜನರು 'ಜುಗ್ಗಿ'ಗಳಲ್ಲಿದ್ದಾರೆ. ಇವರ ಕಾರ್ಯಚರಣೆ ಮೂಲ ನಕ್ಷೆಗಳಿಗೆ ಅನುಗುಣವಾಗಿಲ್ಲ ಎಂದು ದೂರಿದ್ದಾರೆ.

"ಅಲ್ಲಿಗೆ ಅವರು 63 ಲಕ್ಷ ಜನರ ಮನೆಗಳು ಮತ್ತು ಅಂಗಡಿಗಳನ್ನು ಬುಲ್ಡೋಜರ್‌ನಿಂದ ಕೆಡವಿದ್ದಾರೆ. ಇದು ಸ್ವತಂತ್ರ ಭಾರತದಲ್ಲಿ ಸಂಭವಿಸುವ ಅತಿದೊಡ್ಡ ವಿನಾಶವಾಗಿದೆ" ಎಂದು ಅವರು ಕಿಡಿ ಕಾರಿದ್ದಾರೆ. ಆಮ್ ಆದ್ಮಿ ಪಕ್ಷವು ತೆರವು ವಿರುದ್ಧವಾಗಿದೆ ಮತ್ತು ದೆಹಲಿ ಸುಂದರವಾಗಿ ಕಾಣಬೇಕೆಂದು ಬಯಸುತ್ತದೆ. 63 ಲಕ್ಷ ಜನರ ಮನೆ ಮತ್ತು ಅಂಗಡಿಗಳನ್ನು ಧ್ವಂಸಗೊಳಿಸುವುದನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಎಎಪಿ ಅತಿಕ್ರಮಣ ಸಮಸ್ಯೆಯನ್ನು ಪರಿಹರಿಸುತ್ತದೆ ಮತ್ತು ಅನಧಿಕೃತ ಕಾಲೋನಿಗಳಲ್ಲಿ ವಾಸಿಸುವ ಜನರು ಮಾಲೀಕತ್ವದ ಹಕ್ಕುಗಳನ್ನು ಪಡೆಯುತ್ತಾರೆ ಎಂದು ಅವರು ಜನರಿಗೆ ಭರವಸೆ ನೀಡಿದರು.

English summary
Delhi government has asked for a detailed report from the BJP-ruled South Delhi Municipal Corporation (MCD) on the city-wide clearance operation from April 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X