ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಜೆಐ ಪ್ರಕರಣದಲ್ಲಿ ನ್ಯಾಯ ಸಿಗುತ್ತದೆ ಅನಿಸುತ್ತಿಲ್ಲ: ಮಹಿಳೆ ಅಳಲು

|
Google Oneindia Kannada News

ನವದೆಹಲಿ, ಏಪ್ರಿಲ್ 30: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಮಹಿಳೆ, ವಿಚಾರಣೆಗೆ ಹಾಜರಾಗಲು ನಿರಾಕರಿಸಿದ್ದಾರೆ.

ಸುಪ್ರೀಂಕೋರ್ಟ್‌ನ ಮಾಜಿ ಉದ್ಯೋಗಿಯಾಗಿರುವ ಮಹಿಳೆ, ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ಮೂವರು ಸದಸ್ಯರ ವಿಚಾರಣಾ ಸಮಿತಿ ಮುಂದೆ ತಾವು ಹಾಜರಾಗುವುದಿಲ್ಲ ಎಂದಿದ್ದಾರೆ.

ಸಿಜೆಐ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಸಮಿತಿಗೆ ನ್ಯಾ. ಇಂದೂ ಮಲ್ಹೋತ್ರಾ ನೇಮಕ ಸಿಜೆಐ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಸಮಿತಿಗೆ ನ್ಯಾ. ಇಂದೂ ಮಲ್ಹೋತ್ರಾ ನೇಮಕ

ಈ ಸಮಿತಿಯಿಂದ ನನಗೆ ನ್ಯಾಯ ಸಿಗಲಿದೆ ಎಂದು ಅನಿಸುತ್ತಿಲ್ಲ. ಹೀಗಾಗಿ ಮೂವರು ನ್ಯಾಯಮೂರ್ತಿಗಳ ಸಮಿತಿ ವಿಚಾರಣೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ಮಹಿಳೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

CJI Ranjan Gogoi sexual harassment woman not participate before Justice SA Bobde inquiry panel

ನ್ಯಾಯಮೂರ್ತಿ ಬೊಬ್ಡೆ ನೇತೃತ್ವದ ಸಮಿತಿ ಎದುರು ಹಾಜರಾಗದೆ ಇರಲು ಮಹಿಳೆ ಕೆಲವು ಕಾರಣಗಳನ್ನು ಮುಂದಿಟ್ಟಿದ್ದಾರೆ.

Big Breaking: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧವೇ ಲೈಂಗಿಕ ಕಿರುಕುಳ ಆರೋಪ Big Breaking: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧವೇ ಲೈಂಗಿಕ ಕಿರುಕುಳ ಆರೋಪ

1. ಕಿವುಡತನ, ತಳಮಳ ಮತ್ತು ಭಯ ಹೊಂದಿದ್ದರೂ ತಮಗೆ ವಕೀಲರು/ಬೆಂಬಲದ ವ್ಯಕ್ತಿಯೊಂದಿಗೆ ಹಾಜರಾಗಲು ಅವಕಾಶ ನೀಡುತ್ತಿಲ್ಲ.

2. ಸಮಿತಿ ವಿಚಾರಣೆಯನ್ನು ವಿಡಿಯೋ ಅಥವಾ ಆಡಿಯೋ ಮುದ್ರಣ ಮಾಡಿಕೊಳ್ಳುತ್ತಿಲ್ಲ.

ಗೊಗೊಯ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ತನಿಖೆಗೆ ಸಮಿತಿ ರಚನೆ ಗೊಗೊಯ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ತನಿಖೆಗೆ ಸಮಿತಿ ರಚನೆ

3. ದೂರು ನೀಡಿದ ಬಳಿಕ ಏಪ್ರಿಲ್ 26 ಮತ್ತು 29ರಂದು ನೀಡಿದ ಹೇಳಿಕೆಯ ದಾಖಲೆಯ ಪ್ರತಿಯನ್ನು ಕೂಡ ಒದಗಿಸಿಲ್ಲ.

4. ಈ ಸಮಿತಿ ನಡೆಸುತ್ತಿರುವ ವಿಚಾರಣೆಯ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿಲ್ಲ.

English summary
CJI Ranjan Gogoi sexual harassment case: Woman complainant said she will not participate before the inquiry panel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X