ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಇಂಡಿಯಾ, ಸ್ಪೈಸ್‌ಜೆಟ್‌ನ ಮೂವರು ಪೈಲಟ್‌ಗಳ ಅಮಾನತು

|
Google Oneindia Kannada News

ನವದೆಹಲಿ, ಜುಲೈ 16: ಸುರಕ್ಷತಾ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ ಆರೋಪದಲ್ಲಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು ಒಟ್ಟು ಮೂವರು ಪೈಲಟ್‌ಗಳನ್ನು ಅಮಾನತು ಮಾಡಿದೆ.

ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಒಬ್ಬ ಪೈಲಟ್‌ ಮತ್ತು ಖಾಸಗಿ ವಿಮಾನ ಸಂಸ್ಥೆ ಸ್ಪೈಸ್‌ಜೆಟ್‌ನ ಇಬ್ಬರು ಪೈಲಟ್‌ಗಳನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ಏರ್ ಇಂಡಿಯಾದ ಕ್ಯಾಬಿನ್ ಸಿಬ್ಬಂದಿಯೊಬ್ಬರನ್ನು ಕೂಡ ಅಮಾನತು ಮಾಡಲಾಗಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ವಾಯು ಸೇನೆಗೆ ಸೇರಲು ಸನ್ನದ್ಧವಾಗುತ್ತಿರುವ ಮೃತ ಪೈಲಟ್ ಪತ್ನಿ ವಾಯು ಸೇನೆಗೆ ಸೇರಲು ಸನ್ನದ್ಧವಾಗುತ್ತಿರುವ ಮೃತ ಪೈಲಟ್ ಪತ್ನಿ

ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಸುವ ಸಂದರ್ಭದಲ್ಲಿ ರನ್‌ವೇ ತುದಿಯಲ್ಲಿದ್ದ ಲೈಟ್‌ಗಳಿಗೆ ಹಾನಿ ಮಾಡಿದ್ದಕ್ಕಾಗಿ ಸ್ಪೈಸ್‌ಜೆಟ್‌ನ ಇಬ್ಬರು ಪೈಲಟ್‌ಗಳ ಹಾರಾಟದ ಪರವಾನಗಿಯನ್ನು ಆರು ತಿಂಗಳ ಕಾಲ ಅಮಾನತು ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Civil Aviation has suspended 1 air india 2 spicejet pilots

ಜುಲೈ 2ರಂದು ಈ ಘಟನೆ ನಡೆದಿದ್ದು, ಪುಣೆ-ಕೋಲ್ಕತಾ ವಿಮಾನವನ್ನು ಇಳಿಸುವ ಸಂದರ್ಭದಲ್ಲಿ ಈ ಪ್ರಮಾದ ಉಂಟಾಗಿತ್ತು. ಹೀಗಾಗಿ ಪೈಲಟ್‌ಗಳಾದ ಆರತಿ ಗುಣಶೇಖರನ್ ಮತ್ತು ಸೌರಭ್ ಗುಲಿಯಾ ಅವರನ್ನು ಅಮಾನತು ಮಾಡಲಾಗಿದೆ.

English summary
Directorate General of Civil Aviation has suspended 1 Air India and 2 SpiceJet Pilots for violating safety rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X