• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಲೀಸ್ ಆಗುತ್ತಾ ಭಾರತದ ಪೌರತ್ವ ಪಡೆಯುವ ಹಾದಿ?

|

ನವದೆಹಲಿ, ನವೆಂಬರ್.19: ಕೇಂದ್ರ ಸರ್ಕಾರ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಗೆ ಅಣಿಯಾಗುತ್ತಿದೆ. ಈ ಬಾರಿ ಚಳಿಗಾಲ ಅಧಿವೇಶನದ ಮೇಲೆ ಇಡೀ ದೇಶದ ದೃಷ್ಟಿ ನೆಟ್ಟಿದೆ. ಅದಕ್ಕೆ ಸಾಕಷ್ಟು ಕಾರಣಗಳೂ ಇವೆ. ಹೌದು, ನವೆಂಬರ್.18ರಿಂದ ಆರಂಭವಾಗಿರುವ ಚಳಿಗಾಲ ಅಧಿವೇಶನ ಡಿಸೆಂಬರ್.13ರವರೆಗೂ ನಡೆಯಲಿದೆ. 2019ರಲ್ಲಿ ನಡೆಯುತ್ತಿರುವ ಕೊನೆಯ ಅಧಿವೇಶನವಾಗಿದ್ದು, ಈ ಬಾರಿಯ ಅಧಿವೇಶನ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಇದು ರಾಜ್ಯಸಭೆಯಲ್ಲಿ ನಡೆಯುತ್ತಿರುವ 250ನೇ ಅಧಿವೇಶನವಾಗಿದೆ.

ಇದೇ ನವೆಂಬರ್.26ರಂದು ನಾವು ಗಣರಾಜೋತ್ಸವವನ್ನು ಆಚರಿಸುತ್ತಿದ್ದೇವೆ. ಅಂದಿಗೆ ಭಾರತದ ಸಂವಿಧಾನ ರಚನೆಯಾಗಿ 70 ವರ್ಷಗಳು ಪೂರೈಸಲಿದೆ. ಭಾರತ ಸಂವಿಧಾನ ರಚನೆಯಾಗಿ 70 ವರ್ಷ ತುಂಬಲಿದ್ದು, ಅದರ ಬಗ್ಗೆ ದೇಶದ ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ದೇಶದ ಅಭಿವೃದ್ಧಿಗೆ ಪೂರಕವಾಗಿರುವ ಸಂವಿಧಾನದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂದಿನಿಂದ ಚಳಿಗಾಲದ ಅಧಿವೇಶನ: ಚರ್ಚೆಯಾಗಲಿರುವ ಪ್ರಮುಖ ಮಸೂದೆಗಳು

ಇದೆಲ್ಲದರ ನಡುವೆ ದೇಶದ ಪ್ರಜೆಗಳಷ್ಟೇ ಅಲ್ಲ, ಅಕ್ಕಪಕ್ಕದ ದೇಶದ ಪ್ರಜೆಗಳು ಕೂಡಾ ಈ ಬಾರಿ ಭಾರತದ ಸಂಸತ್ ನಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ಮೇಲೆ ಕಣ್ಣು ಇಟ್ಟಿದ್ದಾರೆ. ಯಾಕಂದರೆ ಇಲ್ಲಿ ಆಗುವ ತಿದ್ದುಪಡಿ ಅವರ ಮೇಲೂ ಪ್ರಭಾವ ಬೀರುವ ಲಕ್ಷಣಗಳು ಎದ್ದು ಕಾಣುತ್ತಿವೆ. ಇದಕ್ಕೆಲ್ಲ ಕಾರಣವಾಗಿರುವುದೇ 1955ರ ಪೌರತ್ವ ಕಾಯ್ದೆಯ ತಿದ್ದುಪಡಿ.

 ಪೌರತ್ವ ಕಾಯ್ದೆ ತಿದ್ದುಪಡಿ ಮೇಲೆ ಎಲ್ಲರ ದೃಷ್ಟಿ

ಪೌರತ್ವ ಕಾಯ್ದೆ ತಿದ್ದುಪಡಿ ಮೇಲೆ ಎಲ್ಲರ ದೃಷ್ಟಿ

ನವೆಂಬರ್.18 ರಿಂದ ಆರಂಭವಾಗಿರುವ ಚಳಿಗಾಲ ಅಧಿವೇಶನದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ, ಈ ಪೈಕಿ ಅತಿಹೆಚ್ಚು ಮಹತ್ವದ್ದು ಎನಿಸಿಕೊಂಡಿದ್ದೇ ಪೌರತ್ವ ಕಾಯ್ದೆ ತಿದ್ದುಪಡಿ -1955. ಈ ಮಸೂದೆ ತಿದ್ದುಪಡಿಯನ್ನು ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ಮಂಂಡನೆ ಮಾಡಲಿದೆ. ಬುದ್ಧವಂತರ ಚಾವಡಿ ಎನಿಸಿರುವ ಸಂಸತ್ ಮೇಲ್ಮನೆಯಲ್ಲಿ ತಿದ್ದುಪಡಿಯ ಬಗ್ಗೆ ಚರ್ಚೆ ನಡೆಯಲಿದೆ.

 ಪೌರತ್ವ ಕಾಯ್ದೆ ತಿದ್ದುಪಡಿ-2019ರಲ್ಲಿ ಏನಿದೆ?

ಪೌರತ್ವ ಕಾಯ್ದೆ ತಿದ್ದುಪಡಿ-2019ರಲ್ಲಿ ಏನಿದೆ?

1955ರ ಪೌರತ್ವ ಕಾಯ್ದೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ. ಹಾಗಾದ್ರೆ ಈ ತಿದ್ದುಪಡಿ ಏನು ಹೇಳುತ್ತದೆ ಅಂತಾ ನೋಡುವುದಾದರೆ, ನೆರೆ ರಾಷ್ಟ್ರಗಳಲ್ಲಿ ಕಿರುಕುಳಕ್ಕೆ ಬಳಲಿ ಬೆಂಡಾದವರಿಗೆ ಭಾರತದಲ್ಲಿ ನೆಲೆ ಕಲ್ಪಿಸುವ ಅವಕಾಶವನ್ನು ಈ ತಿದ್ದುಪಡಿ ಮಾಡಿಕೊಟ್ಟಿದೆ. ಅಂದರೆ, ಪಾಕಿಸ್ತಾನ್, ಬಾಂಗ್ಲಾದೇಶ, ಅಫ್ಘಾನಿಸ್ತಾನ್ ನಲ್ಲಿ ವಿವಿಧ ಸಮುದಾಯದ ಜನರು ಜನಾಂಗೀಯ ಕಿರುಕುಳಕ್ಕೆ ತುತ್ತಾಗಿದ್ದಾರೆ. ಈ ಪೈಕಿ ಕೆಲವರು ಈಗಾಗಲೇ ಭಾರತದಲ್ಲಿ ಬಂದು ನೆಲೆಸಿದ್ದಾರೆ. ಅಂಥವರಿಗೆ ಈ ತಿದ್ದುಪಡಿಯಿಂದ ಸಹಾಯವಾಗಲಿದೆ.

ಅಕ್ರಮ ವಲಸಿಗರನ್ನು ಹೊರಹಾಕಲು ರಾಜ್ಯದಲ್ಲೂ ಎನ್‌ಆರ್‌ಸಿ ಜಾರಿ: ಬೊಮ್ಮಾಯಿ

 ಪೌರತ್ವ ಬೇಕಿದ್ದಲ್ಲಿ ಈ ಷರತ್ತುಗಳು ಅನ್ವಯಿಸುತ್ತವೆ

ಪೌರತ್ವ ಬೇಕಿದ್ದಲ್ಲಿ ಈ ಷರತ್ತುಗಳು ಅನ್ವಯಿಸುತ್ತವೆ

ಭಾರತದ ನೆರೆಯಲ್ಲಿರುವ ಪಾಕಿಸ್ತಾನ್, ಬಾಂಗ್ಲಾದೇಶ, ಅಫ್ಘಾನಿಸ್ತಾನ್ ನಲ್ಲಿರುವ ಹಿಂದೂಗಳು, ಬೌದ್ಧರು, ಸಿಖ್ಖರು, ಜೈನರು, ಕ್ರಿಶ್ಚಿಯನ್ನರು, ಪಾರ್ಸಿಗಳು ಭಾರತಕ್ಕೆ ವಲಸೆ ಬಂದಿದ್ದರೆ ಅವರಿಗೆ ಭಾರತದ ಪೌರತ್ವ ನೀಡುವುದಕ್ಕೆ ಈ ತಿದ್ದುಪಡಿ ಅವಕಾಶ ಕಲ್ಪಿಸಿಕೊಡುತ್ತದೆ. ಆದರೆ, ಅದಕ್ಕೆ ಒಂದು ಷರತ್ತು ವಿಧಿಸಲಾಗಿದೆ. ಕಳೆದ 2014ರ ಡಿಸೆಂಬರ್.31ರೊಳಗೆ ಭಾರತಕ್ಕೆ ವಲಸೆ ಬಂದಿರುವ ಜನರಿಗೆ ಮಾತ್ರ ಈ ತಿದ್ದುಪಡಿ ಅನ್ವಯವಾಗುತ್ತದೆ. ಅಂದರೆ ಜನಾಂಗೀಯ ಕಿರುಕುಳದಿಂದ ನೊಂದು ಭಾರತಕ್ಕೆ ವಲಸೆ ಬಂದಿರುವ ನೆರೆ ರಾಷ್ಟ್ರದ ಮಂದಿ, ಭಾರತದಲ್ಲಿ ಕನಿಷ್ಠ 7 ವರ್ಷ ವಾಸವಿರಬೇಕು. ಜೊತೆಗೆ ಪಾಕಿಸ್ತಾನ್, ಬಾಂಗ್ಲಾದೇಶ, ಅಫ್ಘಾನಿಸ್ತಾನ್ ನಲ್ಲಿ ಪೌರತ್ವ ಹೊಂದಿರುವ ಬಗ್ಗೆ ದಾಖಲೆಗಳನ್ನು ಹೊಂದಿರಬೇಕು.

 ಪೌರತ್ವ ಕಾಯ್ದೆ-1955ರಲ್ಲಿ ಇರೋದೇನು?

ಪೌರತ್ವ ಕಾಯ್ದೆ-1955ರಲ್ಲಿ ಇರೋದೇನು?

ಸದ್ಯ ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ-1955ಕ್ಕೆ ತಿದ್ದುಪಡಿ ತರಲು ಹೊರಟಿದೆ. ಈ ಬಾರಿ ಅಧಿವೇಶದಲ್ಲಿ ಈ ತಿದ್ದುಪಡಿಯೇ ಪ್ರಮುಖ ವಿಚಾರವಾಗಲಿದೆ. ಹಾಗಿದ್ದರೆ ಪೌರತ್ವ ಕಾಯ್ದೆ 1955ರಲ್ಲಿ ಏನಿತ್ತು ಎಂಬ ಕುತೂಹಲ ಇದ್ದೇ ಇರುತ್ತದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

- ಭಾರತದಲ್ಲಿ ಜನಿಸಿರುವ, ಇಲ್ಲೇ ವಾಸಿಸುತ್ತಿರುವ ಎಲ್ಲರಿಗೂ ಪೌರತ್ವ

- ದೇಶದ ಪೌರತ್ವವನ್ನು ಎಲ್ಲರಿಗೂ ನೀಡಲು ಸಾಧ್ಯವಿಲ್ಲ

- ಎಲ್ಲ ವಲಸಿಗರಿಗೆ ಭಾರತ ಪೌರತ್ವ ನೀಡುವುದು ಅಸಾಧ್ಯ

- ವಿದೇಶಿ ಪೌರತ್ವ ಹಾಗೂ ಪಾಸ್ ಪೋರ್ಟ್ ಉಳ್ಳವರಿಗೆ ನೆಲೆಸಲು ಅವಕಾಶ

- ಮೂಲ ದಾಖಲೆಗಳಿಲ್ಲದವರಿಗೆ ಭಾರತದಲ್ಲಿ ಇರಲು ಅವಕಾಶ ಇರುವುದಿಲ್ಲ

- ಇದೇ ಅಂಶಗಳನ್ನು 2015 ಹಾಗೂ 2016ರಲ್ಲಿ ಮತ್ತೊಮ್ಮೆ ಉಲ್ಲೇಖಿಸಲಾಗಿತ್ತು

- ಆದರೆ, 1920 ಹಾಗೂ 1946 ರಲ್ಲಿ ವಲಸೆ ಬಂದ ವಲಸಿಗರಿಗೆ ಇದರಿಂದ ವಿನಾಯತಿ ನೀಡಲಾಗಿತ್ತು

 ತಿದ್ದುಪಡಿಯಿಂದ ಸಮಾನತೆ ಹಕ್ಕಿಗೆ ಧಕ್ಕೆ!

ತಿದ್ದುಪಡಿಯಿಂದ ಸಮಾನತೆ ಹಕ್ಕಿಗೆ ಧಕ್ಕೆ!

ಅಚ್ಚರಿ ಅನಿಸಿದ್ರೂ ಕೇಂದ್ರ ಸರ್ಕಾರದ ತಿದ್ದುಪಡಿ ವಿರುದ್ಧ ಇಂಥದೊಂದು ಗಂಭೀರ ಆರೋಪ ಕೇಳಿ ಬಂದಿದೆ. ಸಂವಿಧಾನದ 14ನೇ ವಿಧಿಯ ಪ್ರಕಾರ ಜಾತಿ, ಧರ್ಮ, ಜನಾಂಗ ಹಾಗೂ ಲಿಂಗದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡುವಂತಿಲ್ಲ. ಆದರೆ, ಕೇಂದ್ರ ಸರ್ಕಾರ ಈಗ ಮಾಡಿರುವ ತಿದ್ದುಪಡಿಯೂ ಮುಸ್ಲಿಂ ವಿರೋಧಿಯಾಗಿದೆ. ಮುಸ್ಲಿಂ ಜನಾಂಗವನ್ನು ಈ ತಿದ್ದುಪಡಿಯಲ್ಲಿ ಉಲ್ಲೇಖಿಸಿಲ್ಲ. ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ನೀಡುವ ಬಗ್ಗೆ ಮಾತ್ರ ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿದೆ.

 ಮುಸ್ಲಿಂ ವಿರೋಧಿ ಎಂಬ ಆರೋಪ

ಮುಸ್ಲಿಂ ವಿರೋಧಿ ಎಂಬ ಆರೋಪ

ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆ ತಿದ್ದುಪಡಿ-2019ರಲ್ಲಿ ಪಾಕಿಸ್ತಾನ್, ಬಾಂಗ್ಲಾದೇಶ, ಅಫ್ಘಾನಿಸ್ತಾನ್ ದಿಂದ ಭಾರತಕ್ಕೆ ವಲಸೆ ಬಂದಿರುವ ವಲಸಿಗರಿಗೆ ದೇಶದ ಪೌರತ್ವ ನೀಡುವ ಬಗ್ಗೆ ಉಲ್ಲೇಖಿಸಲಾಗಿದೆ. ಈ ಪೈಕಿ ಹಿಂದೂಗಳು, ಬೌದ್ಧರು, ಸಿಖ್ಖರು, ಜೈನರು, ಕ್ರಿಶ್ಚಿಯನ್ನರು, ಪಾರ್ಸಿಗಳ ಬಗ್ಗೆ ತಿದ್ದುಪಡಿಯಲ್ಲಿ ಹೇಳಲಾಗಿದೆ. ಆದರೆ, ಇಲ್ಲಿ ಮುಸ್ಲಿಂರ ಬಗ್ಗೆ ಪ್ರಸ್ತಾಪವೇ ಆಗಿಲ್ಲ. ಇದೊಂದು ಸಮುದಾಯವನ್ನು ಬಿಟ್ಟಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಸ್ಲಿಂ ವಿರೋಧಿಯೇ ಎಂಬ ಆರೋಪಗಳು ಕೇಳಿ ಬಂದಿವೆ.

 ಬಿಜೆಪಿ ಸರ್ಕಾರಗಳಿಂದಲೇ ತಿದ್ದುಪಡಿಗೆ ಆಕ್ಷೇಪ

ಬಿಜೆಪಿ ಸರ್ಕಾರಗಳಿಂದಲೇ ತಿದ್ದುಪಡಿಗೆ ಆಕ್ಷೇಪ

ಕೇಂದ್ರ ಸರ್ಕಾರದ ನೂತನ ತಿದ್ದುಪಡಿಗೆ ಈಶಾನ್ಯ ರಾಜ್ಯಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಸ್ಥಳೀಯ ಕಾನೂನಿಗೆ ಈ ತಿದ್ದುಪಡಿ ವಿರುದ್ಧವಾಗಿದೆ ಎಂದು ವಾದಿಸುತ್ತಿವೆ. ಅಸ್ಸಾಂನಲ್ಲಿ ಅಕ್ರಮ ವಲಸಿಗರ ಹಾವಳಿ ಮೊದಲಿನಿಂದಲೂ ಇದೆ. ವಲಸಿಗರಿಗೆ ಭಾರತದ ಪೌರತ್ವ ನೀಡುವುದಕ್ಕೆ ಅಸ್ಸಾಂ ವಿರೋಧಿಸುತ್ತಿದೆ. 1985ರ ಅಸ್ಸಾಂ ಒಪ್ಪಂದದ ಪ್ರಕಾರ 1971ರ ಮಾರ್ಚ್ 24ರ ಬಳಿಕ ಭಾರತಕ್ಕೆ ವಲಸೆ ಬಂದ ಯಾವುದೇ ದೇಶ ಹಾಗೂ ಧರ್ಮದವರನ್ನು ಅಕ್ರಮ ವಲಸಿಗರು ಎಂದೇ ಪರಿಗಣಿಸಲಾಗುತ್ತದೆ. ಒಂದು ವೇಳೆ ಕೇಂದ್ರ ಸರ್ಕಾರದ ತಿದ್ದುಪಡಿ ಮಸೂದೆ ಜಾರಿಗೆ ಬಂದರೆ, ಅಸ್ಸಾಂನ ಸ್ಥಳೀಯ ಕಾನೂನು ಮಹತ್ವ ಕಳೆದುಕೊಳ್ಳುತ್ತದೆ ಎಂಬುದು ಅಸ್ಸಾಂನ ವಾದ. ಇದರ ಜೊತೆಗೆ ಬಿಜೆಪಿ ಸರ್ಕಾರಗಳೇ ಇರುವ ಮೇಘಾಲಯ, ಮಿಜೋರಾಂ ರಾಜ್ಯಗಳು ಕೂಡಾ ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿವೆ.

 ಮೇಲ್ಮನೆ ಒಪ್ಪಿಗೆ ಸಿಕ್ಕರಷ್ಟೇ ಸಾಕು ಬಿಡಿ

ಮೇಲ್ಮನೆ ಒಪ್ಪಿಗೆ ಸಿಕ್ಕರಷ್ಟೇ ಸಾಕು ಬಿಡಿ

ಹೌದು, ಪೌರತ್ವ ಕಾಯ್ದೆ ತಿದ್ದುಪಡಿಗೆ ಈಗಾಗಲೇ ಸಂಸತ್ ಕೆಳಮನೆಯಲ್ಲಿ ಒಪ್ಪಿಗೆ ಸಿಕ್ಕಾಗಿದೆ. ಲೋಕಸಭೆಯಲ್ಲಿ ಕಳೆದ ಜನವರಿ.08ರಂದು ತಿದ್ದುಪಡಿ ಮಸೂದೆ ಮಂಡಿಸಿದ ಪ್ರಧಾನಿ ನರೇಂದ್ರ ಮೋದಿ, ತಿದ್ದುಪಡಿಗೆ ಒಪ್ಪಿಗೆ ಪಡೆದಿದ್ದಾರೆ. ಇನ್ನೇನು ರಾಜ್ಯಸಭೆಯಲ್ಲಿ ಒಮ್ಮತದಿಂದ ಸಮ್ಮತಿ ಸಿಕ್ಕರೆ ಸಾಕು. ತಿದ್ದುಪಡಿ ಮಸೂದೆ ಕಾಯ್ದೆಯಾಗಿ ಪರಿವರ್ತನೆ ಆಗಲಿದೆ.

English summary
Parliament Winter Session: Indians Eyes On Citizenship Bill-2019. Central Government Success Are Not In This Move.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more