ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆಯ ಪೌರತ್ವ ಪರೀಕ್ಷೆಯಲ್ಲಿ ಬಿಜೆಪಿಯ ಸಂಖ್ಯಾಬಲವೇನು?

|
Google Oneindia Kannada News

ನವದೆಹಲಿ, ಡಿಸೆಂಬರ್ 11: ದೇಶದಲ್ಲಿ ಸಂಚಲನ ಮೂಡಿಸಿರುವ ಪೌರತ್ವ ತಿದ್ದುಪಡಿ ವಿಧೇಯಕವು ಇಂದು ಮಧ್ಯಾಹ್ನ 2 ಗಂಟೆಗೆ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಸಭೆಯಲ್ಲಿ ವಿಧೇಯಕವನ್ನು ಮಂಡಿಸಲಿದ್ದಾರೆ. ಈಗಾಗಲೇ ಲೋಕಸಭೆಯಲ್ಲಿ 311-80 ಅಂತರದಲ್ಲಿ ಲೋಕಸಭೆಯಲ್ಲಿ ಅಂಗೀಕಾರವಾಗಿರುವ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಅಗ್ನಿಪರೀಕ್ಷೆ ಎದುರಾಗಲಿದೆ.

ರಾಜ್ಯಸಭೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಬಹುಮತವಿಲ್ಲದ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷಗಳು ಹಾಗೂ ಇತರೆ ಪಕ್ಷಗಳ ಬೆಂಬಲ ಪಡೆಯುವುದು ಅನಿವಾಯವಾಗಿದೆ.

rajyasabha

ಮೇಲ್ನೋಟಕ್ಕೆ ವಿಧೇಯಕ ಅಂಗೀಕಾರಕ್ಕೆ ಸೂಕ್ತ ಸಂಖ್ಯೆ ಪಡೆಯಲು ಸಫಲಾಗಿದೆ ಎಂದು ಕಾಣಿಸುತ್ತಿದ್ದರೂ ಕೊನೆಯ ಕ್ಷಣದ ಬದಲಾವಣೆಗಳು ವಿಧೇಯಕ ತಿದ್ದುಪಡಿಗೆ ಅಡ್ಡಿಯಾಗುವ ಸಾಧ್ಯತೆಯೂ ಇದೆ.

245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಸಧ್ಯಕ್ಕೆ 240 ಸದಸ್ಯರಿದ್ದಾರೆ. ಹೀಗಾಗಿ ವಿಧೇಯಕ ಅಂಗೀಕಾರಕ್ಕೆ 121 ಸಂಖ್ಯಾಬಲದ ಅಗತ್ಯವಿದೆ.ಬಿಜೆಪಿಯು 83 ಸದಸ್ಯರನ್ನು ಹೊಂದಿದ್ದರೆ, ಒಟ್ಟಾರೆ ಎನ್‌ಡಿಎ ಸದಸ್ಯರ ಸಂಖ್ಯೆ 106 ಆಗಿದೆ.

ಭಾರತದ ಮುಸ್ಲಿಮರು ಭಯಪಡಬೇಕಿಲ್ಲ: ಅಮಿತ್ ಶಾ ಭರವಸೆಭಾರತದ ಮುಸ್ಲಿಮರು ಭಯಪಡಬೇಕಿಲ್ಲ: ಅಮಿತ್ ಶಾ ಭರವಸೆ

ಹೀಗಾಗಿ ವಿಧೇಯಕ ಅಂಗೀಕಾರಕ್ಕೆ ಇನ್ನೂ ಕನಿಷ್ಟ 15 ಸದಸ್ಯರ ಬೆಂಬಲ ಕೇಂದ್ರ ಸರ್ಕಾರಕ್ಕೆ ಬೇಕಿದೆ.

ಪ್ರತಿಪಕ್ಷಗಳ ಮೈತ್ರಿ ಕೂಟ ಯುಪಿಎ ಬಳಿ 62 ಸದಸ್ಯರಿದ್ದರೆ, ವಿಧೇಯಕದ ವಿರುದ್ಧವಿರುವ ಪಕ್ಷಗಳ ಸಂಖ್ಯೆ 44 ಆಗಿದೆ. ಅಲ್ಲಿಗೆ ವಿಧೇಯಕದ ಪರವಾಗಿ ಹಾಗೂ ವಿರುದ್ಧವಾಗಿರುವವರ ಸಂಖ್ಯೆ ಸಮನಾಗಿ 106 ಆಗಿದೆ. ಈ ಹಂತದಲ್ಲಿ 28 ಸದಸ್ಯರ ಬೆಂಬಲ ಯಾರಿಗೆ ದೊರೆಯಲಿದೆ ಎಂಬುದು ವಿಧೇಯಕದ ಹಣೆಬರಹ ನಿರ್ಧರಿಸಲಿದೆ.

ಇದರಲ್ಲಿ ಎಐಡಿಎಂಕೆ(11), ಬಿಜೆಡಿ(7), ಶಿವಸೇನೆ(3), ವೈಎಸ್‌ಆರ್‌ ಕಾಂಗ್ರೆಸ್(2), ಟಿಡಿಪಿ(2), ಇತರರು(3) ವಿಧೇಯಕದ ಪರವಾಗಿರುವ ಮುನ್ಸೂಚನೆ ನೀಡುತ್ತಿದ್ದಾರೆ.

ಆದಾಗ್ಯೂ ಮಹಾರಾಷ್ಟ್ರ ಸರ್ಕಾರದ ಮೈತ್ರಿ ಪಕ್ಷವಾಗಿರುವ ಕಾಂಗ್ರೆಸ್‌ನ ಆಕ್ಷೇಪದ ಬಳಿಕ ಶಿವಸೇನೆ ಯೂ ಟರ್ನ್ ತೆಗೆದುಕೊಂಡಿದ್ದು, ವಿಧೇಯಕದ ವಿರುದ್ಧ ಮತ ಚಲಾಯಿಸುವ ಇಂಗಿತ ವ್ಯಕ್ತಪಡಿಸಿದೆ. ವಿಧೇಯಕದ ವಿರುದ್ಧ ಮತ ಚಲಾಯಿಸುವಂತೆ ಜೆಡಿಯು ಮೇಲೂ ಒತ್ತಡ ಹೇರಲಾಗುತ್ತಿದೆ.

ಆದಾಗ್ಯೂ ಶಿವಸೇನೆ ಹಾಗೂ ಜೆಡಿಯು ಹೊರತುಪಡಿಸಿ 19 ಸದಸ್ಯರ ಬೆಂಬಲ ಪಡೆಯಲು ಬಿಜೆಪಿ ಸಫಲವಾದರೆ ವಿಧೇಯಕ ಸುಲಭವಾಗಿ ರಾಜ್ಯಸಭೆಯಲ್ಲಿ ಅಂಗೀಕಾರವಾಗಲಿದೆ.

English summary
NDA Government Will Face the Rajyasabha Floor Test for Citizenship Amendment Bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X