ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ರಾಜ್ಯಸಭೆಯಲ್ಲೂ ಪೌರತ್ವ ಮಸೂದೆ ಅಂಗೀಕಾರ ಅಕ್ರಮ ವಲಸೆಗೆ ಶೀಘ್ರವೇ ಬ್ರೇಕ್‌

|
Google Oneindia Kannada News

ನವದೆಹಲಿ, ಡಿಸೆಂಬರ್ 11: ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆಯನ್ನು ಗೃಹ ಸಚಿವ ಅಮಿತ್ ಶಾ ರಾಜ್ಯಭೆಯಲ್ಲಿ ಮಂಡಿಸಿದ್ದಾರೆ.

ತೀವ್ರ ವಿರೋಧ, ಪ್ರತಿಭಟನೆಗಳ ನಡುವೆಯೂ ಲೋಕಸಭೆಯಲ್ಲಿ ಮಹತ್ವದ ಪೌರತ್ವ ತಿದ್ದುಪಡಿ ಮಸೂದೆ, 2019 (ಕ್ಯಾಬ್) ಸೋಮವಾರ ಅಂಗೀಕಾರವಾಗಿತ್ತು.

ದೇಶದಾದ್ಯಂತ ಈ ಮಸೂದೆ ವಿರುದ್ಧ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ಈಶಾನ್ಯ ರಾಜ್ಯಗಳಲ್ಲಿ ನಿರಂತರ ಪ್ರತಿಭಟನೆ ಮುಷ್ಕರಗಳು ನಡೆಯುತ್ತಿವೆ. ಅದರ ನಡುವೆಯೇ ಗೃಹ ಸಚಿವ ಅಮಿತ್ ಶಾ ಮಸೂದೆಯನ್ನು ಮಂಡಿಸಿದರು.

ಪೌರತ್ವ ತಿದ್ದುಪಡಿ ಮಸೂದೆ, 2019ರ (ಕ್ಯಾಬ್) ಪ್ರಕಾರ 2014ರ ಡಿ. 31ರ ಒಳಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳಿಂದ ಧಾರ್ಮಿಕ ಶೋಷಣೆಗೆ ಒಳಪಟ್ಟು ಭಾರತಕ್ಕೆ ನಿರಾಶ್ರಿತರಾಗಿ ಬಂದ ಹಿಂದೂ, ಕ್ರೈಸ್ತ, ಸಿಖ್, ಬೌದ್ಧ, ಜೈನ ಮತ್ತು ಪಾರ್ಸಿ ಸಮುದಾಯಗಳ ಜನರನ್ನು ಅಕ್ರಮ ವಲಸಿಗರು ಎಂದು ಪರಿಗಣಿಸದೆ ಅವರಿಗೆ ಭಾರತದ ಪೌರತ್ವ ನೀಡಲಾಗುತ್ತದೆ.

 Citizenship Amendment Bill Rajya Sabha Live Updates

ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಮಿಜೋರಾಂ ಈ ಮಸೂದೆಯಿಂದ ಸಂಪೂರ್ಣವಾಗಿ ವಿನಾಯಿತಿ ಪಡೆದಿವೆ. ಮೇಘಾಲಯ, ಅಸ್ಸಾಂನ ಕೆಲವು ಭಾಗಗಳು ಮತ್ತು ತ್ರಿಪುರಾ ಬಹುತೇಕ ವಿನಾಯಿತಿ ಪಡೆದಿವೆ. ಆದರೆ ಮಣಿಪುರ ಸಂಪೂರ್ಣವಾಗಿ ಈ ಮಸೂದೆ ವ್ಯಾಪ್ತಿಗೆ ಒಳಪಡಲಿದೆ. ಮಣಿಪುರಕ್ಕೆ ಸಂಬಂಧಿಸಿದಂತೆ ಸರ್ಕಾರವು ವಿಶೇಷ ಪ್ರಾತಿನಿಧ್ಯಗಳನ್ನು ಘೋಷಿಸುವ ಸಾಧ್ಯತೆ ಇದೆ.

Newest FirstOldest First
11:50 PM, 11 Dec

ಪೌರತ್ವ ತಿದ್ದುಪಡಿ ಮಸೂದೆ ಜಾರಿಗೊಳಿಸುವುದನ್ನು ವಿರೋಧಿಸಿ ಅಸ್ಸಾಂನಲ್ಲಿ ಹಿಂಸಾಚಾರ ನಡೆದಿದೆ. ಹಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
11:14 PM, 11 Dec

"ಪೌರತ್ವ ತಿದ್ದುಪಡಿ ಮಸೂದೆ ಭಾರತದ ಜಾತ್ಯಾತೀತ ಹಾಗೂ ಬಹುಸಂಸ್ಕೃತಿಗೆ ಧಕ್ಕೆ ಉಂಟು ಮಾಡಲಿದ್ದು, ಸಂವಿಧಾನದ ವಿರೋಧಿಯಾಗಿದೆ" ಎಂದು ಹೇಳಿರುವ ಐಪಿಎಸ್ ಅಧಿಕಾರಿ ಅಬ್ದುರ್ ರೆಹಮಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
10:52 PM, 11 Dec

ಭಾರತಕ್ಕೆ ಐತಿಹಾಸಿಕ ದಿನ ಮೋದಿ ಟ್ವೀಟ್
10:29 PM, 11 Dec

ಪೌರತ್ವ ತಿದ್ದುಪಡಿ ಮಸೂದೆ ಜಾರಿಯನ್ನು ಐಪಿಎಸ್ ಅಧಿಕಾರಿ ಅಬ್ದುಲ್ ರೆಹಮಾನ್ ಖಂಡಿಸಿದ್ದಾರೆ. ಮಹಾರಾಷ್ಟ್ರ ಕೆಡರ್‌ನ ಅಧಿಕಾರಿಯಾದ ಅಬ್ದುಲ್ ರೆಹಮಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
10:03 PM, 11 Dec

ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅನುಮೋದನೆ ಗೊಂಡಿದೆ. ಇದು ದೇಶದ ಇತಿಹಾಸದಲ್ಲಿ ಕರಾಳ ದಿನವಾಗಿದೆ ಎಂದು ಎಐಸಿಸಿ ಅಧ್ಯೆಕ್ಷೆ ಸೋನಿಯಾ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.
8:55 PM, 11 Dec

ರಾಜ್ಯಸಭೆಯಲ್ಲಿ ಪೌರತ್ವ ಮಸೂದೆಯು ಅಂಗೀಕಾರವಾಗಿದೆ. ಎಲೆಕ್ಟ್ರಾನಿಕ್ ಮತ್ತು ಡಿವಿಷನ್ ಸ್ಲಿಪ್ ಒಟ್ಟು ಮಾಡಿ 125 ಮತಗಳು ಮಸೂದೆಯ ಪರವಾಗಿ ಬಿದ್ದಿದ್ದರೆ, 105 ಮತಗಳು ಮಸೂದೆಯ ವಿರುದ್ಧವಾಗಿ ಬಿದ್ದಿವೆ. ಯಾರೂ ಸಹ ಮತಚಲಾಯಿಸದೇ ತಟಸ್ಥರಾಗಿರಲಿಲ್ಲ.
8:46 PM, 11 Dec

ರಾಜ್ಯಸಭೆಯಲ್ಲಿ ಪೌರತ್ವ ಮಸೂದೆ ಅಂಗೀಕಾರವಾಗಿದೆ. ಮಸೂದೆ ಪರವಾಗಿ 117 ಎಲೆಕ್ಟ್ರಾನಿಕ್ ಮತಗಳು ಬಿದ್ದಿವೆ.
Advertisement
8:43 PM, 11 Dec

ಅಮಿತ್ ಶಾ ಮಸೂದೆ ಮಂಡಿಸಿದ್ದು, ಅಂಗೀಕಾರಕ್ಕೆ ಮನವಿ ಮಾಡಿದ್ದಾರೆ. ಈಗ ಎಲೆಕ್ಟ್ರಾನಿಕ್ ಮತ ನಡೆಯಲಿದೆ.
8:37 PM, 11 Dec

ನಿನ್ನೆ ಲೋಕಸಭೆಯಲ್ಲಿ ಮಸೂದೆಗೆ ಬೆಂಬಲ ನೀಡಿದ್ದ ಶಿವಸೇನಾ ಪಕ್ಷದ ಸಂಸದರು ಇಂದು ರಾಜ್ಯಸಭೆಯಲ್ಲಿ ಮತದಾನದಿಂದ ದೂರ ಉಳಿದಿದ್ದಾರೆ. ಶಿವಸೇನಾ ಪಕ್ಷದ ಸಂಸದರು ಸಭಾತ್ಯಾಗ ಮಾಡಿದ್ದಾರೆ.
8:07 PM, 11 Dec

ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಲು ಅಭಿಪ್ರಾಯ ಕೇಳಿ ಮತಕ್ಕೆ ಹಾಕಿದಾಗ ಬೇಡವೆಂದು 113 ಮತ, ಹೌದು ಎಂದು 92, ಒಬ್ಬರು ಗೈರು ಮತ ಚಲಾಯಿಸಿದ್ದಾರೆ.
7:53 PM, 11 Dec

ಉತ್ತರ ನೀಡುವ ಕಾರ್ಯ ಮುಗಿದಿದ್ದು, ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅವರು ಮಸೂದೆಯನ್ನು ಮತಕ್ಕೆ ಹಾಕಿದರು. ಕೆಲವೇ ಕ್ಷಣಗಳಲ್ಲಿ ಎಕ್ಟ್ರಾನಿಕ್ ಓಟಿಂಗ್ ನಡೆಯಲಿದೆ.
7:49 PM, 11 Dec

ಪಶ್ಚಿಮ ಬಂಗಾಳ ಸೇರಿದಂತೆ ಇಡೀಯ ದೇಶದಲ್ಲಿ ಸಿಎಬಿ ಅನ್ವಯಿಸಲಾಗುತ್ತದೆ-ಅಮಿತ್ ಶಾ
Advertisement
7:48 PM, 11 Dec

ಪೌರತ್ವ ಮಸೂದೆ ಯಾರ ನಾಗರೀಕತೆಯನ್ನು ಕಿತ್ತುಕೊಳ್ಳುವುದಿಲ್ಲ, ಬದಲಿಗೆ ಪೌರತ್ವವನ್ನು ನೀಡುವ ಮಸೂದೆ ಇದಾಗಿದೆ- ಅಮಿತ್ ಶಾ
7:21 PM, 11 Dec

ಅಸ್ಸಾಂ ಭಾಷೆ, ಸಂಸ್ಕೃತಿ, ಆಚರಣೆ ಎಲ್ಲದರ ಬಗ್ಗೆಯೂ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಅಸ್ಸಾಂ ನವರಿಗೆ ರಾಜಕೀಯ ಮೀಸಲಾತಿ ಸಿಗುವ ಬಗ್ಗೆಯೂ ನಾವು ಯೋಚನೆ ಮಾಡಿದ್ದೇವೆ- ಅಮಿತ್ ಶಾ
7:19 PM, 11 Dec

1985 ರ ಅಸ್ಸಾಂ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ, ಅಸ್ಸಾಂ ನ ಮೀಸಲಾತಿ ಬದಲಾಗುವುದಿಲ್ಲ, ಆರನೇ ಶೆಡ್ಯೂಲ್‌ನಲ್ಲಿ ವ್ಯತ್ಯಾಸವಾಗುವುದಿಲ್ಲ- ಅಮಿತ್ ಶಾ
6:53 PM, 11 Dec

ಅಮಿತ್ ಶಾ ಅವರು ಮಮತಾ ಬ್ಯಾನರ್ಜಿ ಹಿಂದೊಮ್ಮೆ ಲೋಕಸಭೆಯಲ್ಲಿ ಹೇಳಿದ್ದಾರೆ ಎನ್ನಲಾದ ವಿಷಯದ ಬಗ್ಗೆ ಉಲ್ಲೇಖ ಮಾಡಿದಾಗ ಟಿಎಂಸಿ ಪಕ್ಷದ ಸದಸ್ಯರು ಗದ್ದಲ ಎಬ್ಬಿಸಿದ್ದಾರೆ.
6:49 PM, 11 Dec

ಪಾಕಿಸ್ತಾನದಲ್ಲಿರುವ ಮುಸ್ಲೀಮೇತರ ಉಳಿದ ಧರ್ಮದವರಿಗೆ ನಾವು ರಕ್ಷಣೆ ಕೊಡಲು ಬದ್ಧರಾಗಿದ್ದಾವೆ ಎಂದು ಕಾಂಗ್ರೆಸ್ ಕಾರ್ಯಕರಿಣಿಯಲ್ಲಿ ಒಮ್ಮೆ ರೆಸ್ಯೂಲಷನ್ ಮಾಡಲಾಗಿತ್ತು-ಅಮಿತ್ ಶಾ
6:46 PM, 11 Dec

ಭಾರತದಲ್ಲಿನ ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಂ ಅಣ್ಣ-ತಮ್ಮಂದಿರು ಹೆದರುವುದು ಬೇಕಿಲ್ಲ. ಈ ಮಸೂದೆಯು ಯಾರ ಪೌರತ್ವವನ್ನೂ ಕಿತ್ತುಕೊಳ್ಳುವುದಿಲ್ಲ-ಅಮಿತ್ ಶಾ
6:42 PM, 11 Dec

ಈ ಮಸೂದೆ ಆರ್ಟಿಕಲ್ 14 ರ ಉಲ್ಲಂಘನೆ ಮಾಡುವುದಿಲ್ಲ, ಸಂವಿಧಾನವನ್ನು ಉಲ್ಲಂಘನೆ ಮಾಡುವುದಿಲ್ಲ ಎಂದ ಅಮಿತ್ ಶಾ ಹಲವು ತೀರ್ಪುಗಳನ್ನು ಓದಿ ಹೇಳಿದರು.
6:40 PM, 11 Dec

ಮುಸ್ಲಿಂ ರಾಷ್ಟ್ರಗಳಲ್ಲಿ ಮುಸ್ಲೀಮರ ಮೇಲೆ ದೌರ್ಜನ್ಯ ಆಗುವುದಿಲ್ಲ, ಹಾಗಾಗಿ ಮುಸ್ಲೀಂ ದೇಶಗಳಲ್ಲಿ ದೌರ್ಜನ್ಯ ಆಗುತ್ತಿರುವ ಇತರ ಧರ್ಮದವರಿಗೆ ಮಾತ್ರವೇ ಅವಕಾಶ ನೀಡುತ್ತಿದ್ದೇವೆ- ಅಮಿತ್ ಶಾ
6:39 PM, 11 Dec

ಆರು ಧರ್ಮದವರಿಗೆ ನಾಗರೀಕತೆ ಕೊಡುತ್ತಿದ್ದೇವೆ ಇದರ ಬಗ್ಗೆ ಸಂತೋಶ ವ್ಯಕ್ತಪಡಿಸುವುದು ಬಿಟ್ಟು, ಮುಸ್ಲಿಂ ನವರು ಪಟ್ಟಿಯಲ್ಲಿ ಏಕಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ- ಅಮಿತ್ ಶಾ
6:26 PM, 11 Dec

ಧರ್ಮದ ಆಧಾರದಲ್ಲಿ ಭಾರತದ ವಿಭಜನೆ ಆಗಿದೆ, ಅಂದು ಮಾಡಿದ ತಪ್ಪಿನಿಂದಾಗಿ ನಾನು ಇಂದು ಈ ಮಸೂದೆಯನ್ನು ತಂದಿದ್ದೇನೆ- ಅಮಿತ್ ಶಾ, ಗೃಹ ಮಂತ್ರಿ
6:22 PM, 11 Dec

ಮಸೂದೆ ಬಗ್ಗೆ ಈವರೆಗೆ 44 ಸಂಸದರು ಮಾತನಾಡಿದ್ದಾರೆ, ನಾನು ಎಲ್ಲರ ಪ್ರಶ್ನೆಗಳ ಬಗ್ಗೆಯೂ ಉತ್ತರ ನೀಡುವ ಪ್ರಯತ್ನ ಮಾಡುತ್ತೇನೆ- ಅಮಿತ್ ಶಾ, ಗೃಹ ಮಂತ್ರಿ
6:13 PM, 11 Dec

ಆರ್ಟಿಕಲ್ 246 ಪ್ರಕಾರ ಸಂಸತ್‌ನ ಎರಡೂ ಸದನವು ಪೌರತ್ವದ ವಿಷಯದ ಬಗ್ಗೆ ಕಾನೂನು ರಚಿಸಬಹುದಾಗಿದೆ, ಅಷ್ಟೆ ಅಲ್ಲದೆ ಆರ್ಟಿಕಲ್ 14 ರ ಉಲ್ಲಂಘನೆಯನ್ನು ಈ ಮಸೂದೆ ಮಾಡುವುದಿಲ್ಲ -ಕಾನೂನು ಸಚಿವ ರವಿಶಂಕರ್ ಪ್ರಸಾದ್
6:08 PM, 11 Dec

ಎನ್‌ಸಿಆರ್‌ ಗೆ ಕೇವಲ ನಾಲ್ಕು ಸಾವಿರ ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ, ಆದರೆ ನೀವು ಹೇಳುತ್ತೀರಾ ಇಡೀ ದೇಶವೇ ಇದರ ಬಗ್ಗೆ ಹೆಮ್ಮೆ ಪಡುತ್ತಿದೆ ಎಂದು, ನಾಗಾಲ್ಯಾಂಡ್, ತ್ರಿಪುರ, ಅಸ್ಸಾಂ ನಲ್ಲಿ ಜನರು ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಮೇಲೆ ಪೊಲೀಸರು ಹಲ್ಲೆ ಮಾಡುತ್ತಿದ್ದಾರೆ ಇದು ನ್ಯಾಯವಾ- ಗುಲಾಂ ನಬಿ ಆಜಾದ್, ಕಾಂಗ್ರೆಸ್ ಹಿರಿಯ ಸದಸ್ಯ
5:34 PM, 11 Dec

ಮಸೂದೆಯನ್ನು ಸಂಸತ್‌ನ ಆಯ್ಕೆ ಸಮಿತಿಗೆ ಕೊಂಡೊಯ್ಯಲು ಕಾಂಗ್ರೆಸ್ ಮತ್ತು ಎಡಪಕ್ಷಗಳ ನಿರ್ಧಾರ
5:28 PM, 11 Dec

ಈಗಾಗಲೇ ವಲಸಿಗರು ಮತ್ತು ಮೂಲನಿವಾಸಿಗಳ ನಡುವಿನ ಸಂಪನ್ಮೂಲ ಹಂಚಿಕೆಯಿಂದ ಮೇಘಾಲಯ ಸಂಕಷ್ಟ ಅನುಭವಿಸಿದೆ. ರಾಜ್ಯದ ಮೂಲನಿವಾಸಿ ಆದಿವಾಸಿಗಳ ಅಸ್ಮಿತೆಯನ್ನು ಉಳಿಸಲು ನಾವು ಹೋರಾಡುತ್ತೇವೆ- ಕಾಂಗ್ರೆಸ್‌ನ ಸಂಸದ ವನ್ಸುಕ್ ಸೈಯೆಮ್
5:26 PM, 11 Dec

ಪೌರತ್ವ ತಿದ್ದುಪಡಿ ಮಸೂದೆಗೆ ವೈಎಸ್ ಆರ್ ಕಾಂಗ್ರೆಸ್ ಮತ್ತು ಬಿಜೆಡಿ ಸಂಸದರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಅದರಲ್ಲಿ ಕೆಲವು ಬದಲಾವಣೆಗಳನ್ನು ತರುವಂತೆ ಒತ್ತಾಯಿಸಿದ್ದಾರೆ.
5:24 PM, 11 Dec

ಅಸ್ಸಾಂ ಮತ್ತು ತ್ರಿಪುರಾಗಳಲ್ಲಿ ಪ್ರತಿಭಟನೆ ಹೆಚ್ಚುತ್ತಿರುವ ಕಾರಣದಿಂದ ಜಮ್ಮು ಮತ್ತು ಕಾಶ್ಮೀರದಿಂದ ಹಿಂದೆಗೆದುಕೊಳ್ಳಲಾದ ಸೇನೆಯನ್ನು ಈಶಾನ್ಯ ರಾಜ್ಯಗಳಿಗೆ ನಿಯೀಜಿಸಲಾಗುತ್ತಿದೆ.
5:05 PM, 11 Dec

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳಲ್ಲಿನ ಧಾರ್ಮಿಕ ಗುಂಪುಗಳನ್ನು ಶೋಷಿಸಲಾಗಿದೆ ಮತ್ತು ದಬ್ಬಾಳಿಕೆ ನಡೆಸಲಾಗಿದೆ. ಅಹಮದೀಯರು ಅಥವಾ ಶಿಯಾಗಳು ಇರಾನ್, ಬಹರೇನ್‌ಗಳಿಗೆ ಆಶ್ರಯಕ್ಕಾಗಿ ಹೋಗಲು ಅವಕಾಶವಿದೆ- ಸುಬ್ರಮಣಿಯನ್ ಸ್ವಾಮಿ
READ MORE

English summary
Parliament Winter Session Rajya Sabha Live Updates in Kannada: Home Minister Amit Shah introduced Citizenship Amendment Bill 2019 in Rajya Sabha on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X