ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಬಾಂಗ್ಲಾ ಪ್ರಧಾನಿ ಹೀಗೆ ಹೇಳುವುದೇ?

|
Google Oneindia Kannada News

ನವದೆಹಲಿ, ಜನವರಿ.19: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ಭಾರತದ ಆಂತರಿಕ ವಿಚಾರವಾದರೂ ಅನಗತ್ಯ ಎಂದು ಬಾಂಗ್ಲಾದೇಶ ಪ್ರಧಾನಮಂತ್ರಿ ಶೇಖ್ ಹಸೀನಾ ತಿಳಿಸಿದ್ದಾರೆ.

ದುಬೈ ಖಾಸಗಿ ಸುದ್ದಿವಾಹಿನಿಗೆ ಸಂದರ್ಶನ ನೀಡಿರುವ ಬಾಂಗ್ಲಾದೇಶ ಪ್ರಧಾನಮಂತ್ರಿ ಶೇಖರ್ ಹಸೀನಾ, ಕೇಂದ್ರ ಸರ್ಕಾರವು ಸಿಎಎ ಹಾಗೂ ಎನ್ಆರ್ ಸಿ ಜಾರಿಗೊಳಿಸಿರುವ ಹಿಂದಿನ ಉದ್ದೇಶ ಏನು ಎಂಬುದು ನಮಗೆ ಗೊತ್ತಿಲ್ಲ ಎಂದರು. ಆದರೆ, ಭಾರತದಲ್ಲಿ ಈ ರೀತಿಯ ಕಾಯ್ದೆಗಳನ್ನು ಜಾರಿಗೊಳಿಸುವ ಅಗತ್ಯವಿಲ್ಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೇಳುವವರು, ಕೇಳುವವರು ಇಲ್ಲವೇ ನಿಮಗೆ: ಕೇರಳ ಸರ್ಕಾರಕ್ಕೆ ತರಾಟೆ!
ಇತ್ತೀಚಿಗಷ್ಟೇ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ಬಗ್ಗೆ ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್ ಸಹ ಪ್ರತಿಕ್ರಿಯೆ ನೀಡಿದ್ದರು. ಈ ಕಾಯ್ದೆ ಭಾರತಕ್ಕೆ ಸಂಬಂಧಿಸಿದ ಆಂತರಿಕ ವಿಚಾರ ಎಂದು ಹೇಳಿದ್ದರು.

Citizenship Amendment Act Is Indias Internal Issue

"ಬಾಂಗ್ಲಾದಿಂದ ಭಾರತಕ್ಕೆ ಯಾರೂ ವಲಸೆ ಹೋಗಲ್ಲ":
ಭಾರತದಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಉದ್ದೇಶದ ಬಗ್ಗೆ ತಿಳಿದಿಲ್ಲ. ಬಾಂಗ್ಲಾದೇಶದಲ್ಲಿ ಕಾಯ್ದೆ ಪ್ರಭಾವ ಬೀರುವುದಾದರೆ ಮಾತ್ರ ಈ ಬಗ್ಗೆ ಚರ್ಚಿಸಬೇಕಾಗುತ್ತದೆ ಎಂದು ಪ್ರಧಾನಿ ಶೇಖ್ ಹಸೀನಾ ತಿಳಿಸಿದ್ದಾರೆ. ಇನ್ನು, ಬಾಂಗ್ಲಾದೇಶದಲ್ಲಿ ಸುಮಾರು 161 ದಶಲಕ್ಷ ಹಿಂದುಗಳಿದ್ದು, ಒಟ್ಟು ಜನಸಂಖ್ಯೆಯ ಪೈಕಿ ಶೇ.10.7ರಷ್ಟು ಹಿಂದೂಗಳೇ ವಾಸಿಸುತ್ತಿದ್ದಾರೆ. ಜೊತೆಗೆ ಶೇ.0.6ರಷ್ಟು ಬೌದ್ಧರಿದ್ದು, ಕೇವಲ ಧರ್ಮದ ಕಾರಣಕ್ಕೆ ಜನರು ಭಾರತಕ್ಕೆ ವಲಸೆ ಹೋಗುವುದಿಲ್ಲ ಎನ್ನುತ್ತಿದ್ದಾರೆ.

English summary
Citizenship Amendment Act Is India's Internal Issue. But, That Law Was Not Necessary, Says Bangladesh Prime Minister Sheikh Hasina.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X