ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಪೌರತ್ವ ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರ: ಬಿದ್ದ ಮತಗಳೆಷ್ಟು?

|
Google Oneindia Kannada News

ನವದೆಹಲಿ, ಡಿಸೆಂಬರ್ 11: ಚರ್ಚೆ, ಪ್ರತಿರೋಧ, ವಿರೋಧಗಳ ನಡುವೆ ರಾಜ್ಯಸಭೆಯಲ್ಲಿ ಇಂದು ಪೌರತ್ವ ಮಸೂದೆ 2019 ಅಂಗೀಕಾರವಾಯಿತು.

ಕೆಲವು ದಿನಗಳ ಹಿಂದಷ್ಟೆ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ ಪೌರತ್ವ ಮಸೂದೆಯನ್ನು ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಮಂಡಿಸಿದರು.

Live Updates: ರಾಜ್ಯಸಭೆಯಲ್ಲೂ ಪೌರತ್ವ ಮಸೂದೆ ಅಂಗೀಕಾರLive Updates: ರಾಜ್ಯಸಭೆಯಲ್ಲೂ ಪೌರತ್ವ ಮಸೂದೆ ಅಂಗೀಕಾರ

44 ಸಂಸದರು ಪೌರತ್ವ ಮಸೂದೆ ಬಗ್ಗೆ ಚರ್ಚೆ ನಡೆಸಿದರು. ಕಾಂಗ್ರೆಸ್‌ನ ಗುಲಾಂ ನಬಿ ಆಜಾದ್, ಪಿ.ಚಿದಂಬರಂ, ಕಪಿಲ್ ಸಿಬಲ್, ಹಲವು ನಾಯಕರು ಮಸೂದೆ ವಿರೋಧಿಸಿ ಮಾತನಾಡಿದರು. ಆಡಳಿತ ಪಕ್ಷದ ಹಲವು ಸದಸ್ಯರು ಪರವಾಗಿ ಮಾತನಾಡಿದರು.

Citizen Amendment Bill Passed In Rajya Sabha

ನಿನ್ನೆ ಲೋಕಸಭೆಯಲ್ಲಿ ಮಸೂದೆಗೆ ಬೆಂಬಲ ನೀಡಿದ್ದ ಶಿವಸೇನಾ ಪಕ್ಷ ಇಂದು ರಾಜ್ಯಸಭೆಯಲ್ಲಿ ಮಸೂದೆಯನ್ನು ವಿರೋಧಿಸಿತು. ಇದರ ಜೊತೆಗೆ ಯುಪಿಎ, ಟಿಎಂಸಿ, ಸಿಪಿಐಎಂ, ಬಿಎಸ್‌ಪಿ ಇನ್ನೂ ಕೆಲವು ಪಕ್ಷಗಳು ಮಸೂದೆಯನ್ನು ವಿರೋಧಿಸಿದವು.

ಪೌರತ್ವ ಮಸೂದೆ ವಿರುದ್ಧ ಅಸ್ಸಾಂನಲ್ಲಿ ಪ್ರತಿಭಟನೆ ಹೆಚ್ಚು, ಕಾರಣವೇನು?ಪೌರತ್ವ ಮಸೂದೆ ವಿರುದ್ಧ ಅಸ್ಸಾಂನಲ್ಲಿ ಪ್ರತಿಭಟನೆ ಹೆಚ್ಚು, ಕಾರಣವೇನು?

ವಿಪಕ್ಷಗಳು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಿದ ಅಮಿತ್ ಶಾ, ಅಂದು ಧರ್ಮದ ಆಧಾರದಲ್ಲಿ ಭಾರತದ ವಿಭಜನೆ ಆಗಿದ್ದರಿಂದಲೇ ಇಂದು ನಾವು ಈ ಮಸೂದೆ ತರುವಂತಾಯಿತು. ಅಂದು ಧರ್ಮದ ಆಧಾರದಲ್ಲಿ ದೇಶದ ವಿಭಜನೆ ಆಗುವುದನ್ನು ಕಾಂಗ್ರೆಸ್ ಒಪ್ಪಿದ್ದು ಏಕೆ ಎಂದು ಪ್ರಶ್ನೆ ಮಾಡಿದರು.

Citizen Amendment Bill Passed In Rajya Sabha

ಪೌರತ್ವ ತಿದ್ದುಪಡಿ ಮಸೂದೆ: ಕಳವಳಗಳಿಗೆ ಸರ್ಕಾರ ನೀಡಿದ 8 ಅಂಶಗಳ ಸ್ಪಷ್ಟನೆಪೌರತ್ವ ತಿದ್ದುಪಡಿ ಮಸೂದೆ: ಕಳವಳಗಳಿಗೆ ಸರ್ಕಾರ ನೀಡಿದ 8 ಅಂಶಗಳ ಸ್ಪಷ್ಟನೆ

ಅಮಿತ್ ಶಾ ಉತ್ತರದ ಬಳಿಕ ಮಸೂದೆಯನ್ನು ಅಂಗೀಕಾರಕ್ಕೆ ಮತಕ್ಕೆ ಹಾಕಲಾಯಿತು. ಎಲೆಕ್ಟ್ರಾನಿಕ್ ಮಾದರಿಯಲ್ಲಿ ನಡೆದು ಮಸೂದೆ ಪರವಾಗಿ 125 ಮತಗಳು ಬಿದ್ದವು. ಮಸೂದೆಯ ವಿರೋಧದಲ್ಲಿ 105 ಮತಗಳು ಬಿದ್ದವು. ಸಂಸತ್‌ನಲ್ಲಿ 230 ಸಂಸದರು ಹಾಜರಿದ್ದರು.

English summary
Citizen amendment bill passed in Rajya Sabha today. 125 MPs voted in favor of amendment, 105 MPs voted against amendment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X